ರಾಹುಲ್_ಗಾಂಧಿ_ಯಾಕೆ_ಯಾವಾಗಲೂ_ಬಿಳಿ_ಟೀಶರ್ಟ್_ಧರಿಸುತ್ತಾರೆ?... ಭಾರತೀಯ ರಾಜಕಾರಣಿಗಳ ಡ್ರೆಸ್ ಕೋಡ್ ಬದಲಾಗುವ ಸೂಚನೆಯಾ?... ರಾಜಕಾರಣಿಗಳ ಡ್ರೆಸ್ ಕುರ್ತಾ ಪೈಜಾಮ ಅವರು ಧರಿಸುವುದಿಲ್ಲ ಏಕೆ?... ವಿಸುಯಲ್ ಬ್ರಾಂಡಿಂಗ್?.. ಡಿಸಿಷನ್ ಪ್ಯಾಟಿಗೊ?... ಕಾರಣವಾ? ... ಸಾಮಾನ್ಯವಾಗಿ ಭಾರತೀಯ ರಾಜಕಾರಣಿಗಳ ವೇಷ ಭೂಷಣಗಳು ಖಾದಿಯ ಕುರ್ತಾ ಪೈಜಾಮಗಳು ಆದರೆ ರಾಹುಲ್ ಗಾಂಧಿ ಭಾರತ್- ಜೋಡೋ ಯಾತ್ರೆಯಿಂದ ಬಿಳಿ ಟೀ -ಶರ್ಟ್ ಮತ್ತು ತಿಳಿಬೂದು, ಕಾಕಿ ಅಥವ ಕಪ್ಪು ಫ್ಯಾಂಟ್ ಗೆ ಬದಲಾಗಿದ್ದು ಯಾಕೆ?... ಇಂತಹ ಪ್ರಶ್ನೆಗಳು ಭಾರತೀಯರಲ್ಲಿ ಮೂಡಿರುವುದು ಸಹಜ ಆದರೆ ಈ ಪ್ರಶ್ನೆಗಳಿಗೆ ನೇರ ಉತ್ತರ ಅವರಿಂದ ಇಲ್ಲವಾದರೂ ಇದಕ್ಕೆ ಕಾರಣ ಏನು ಎನ್ನುವುದಕ್ಕೆ ಉತ್ತರ ಇಲ್ಲಿದೆ ಓದಿ. ರಾಹುಲ್ ಗಾಂಧಿ ಅವರು ಪ್ರಚಾರದ ಸಮಯದಲ್ಲಿ ವಿಶೇಷವಾಗಿ ತಮ್ಮ ಸುದೀರ್ಘ ಪಾದಯಾತ್ರೆಗಳ ದಿನಗಳಿಂದಲೂ ಒಂದೇ ಬಣ್ಣದ ಬಿಳಿ ಟಿ-ಶರ್ಟ್ ಮತ್ತು ತಿಳಿ ಬೂದು/ಬಿಳಿ ಪ್ಯಾಂಟ್ ಧರಿಸುವುದರ ಹಿಂದೆ ಕೆಲವು ಪ್ರಮುಖ ರಾಜಕೀಯ, ವೈಯಕ್ತಿಕ ಮತ್ತು ಕಾರ್ಯತಂತ್ರದ ಕಾರಣಗಳಿವೆ ಅವುಗಳ ವಿವರ ಇಲ್ಲಿದೆ. ರಾಜಕೀಯ ಸಂದೇಶ ಮತ್ತು ಸರಳತೆಯ ಸಂಕೇತ ಏನೆಂದರೆ... ಸಾಮಾನ್ಯ ಜನರೊಂದಿಗೆ ಬೆರೆಯಲು ದುಬಾರಿ ರಾಜಕೀಯ ಉಡುಪುಗಳು ಅಥವಾ ಜರಿ ಕುರ್ತಾಗಳ ಬದಲಿಗೆ ಕೇವಲ ಒಂದು ಸಾಧಾರಣ ಬಿಳಿ ಟಿ-ಶರ್ಟ್ ಧರಿಸುವುದರಿಂದ...