Skip to main content

4030.ರಾಹುಲ್ ಗಾಂಧಿ ಕುರ್ತಾ ಪೈಜಾಮನಿಂದ ಟೀ ಶರ್ಟ್ ಪ್ಯಾಂಟಿಗೆ ಬದಲಾಗಲು ಕಾರಣ

ರಾಹುಲ್_ಗಾಂಧಿ_ಯಾಕೆ_ಯಾವಾಗಲೂ_ಬಿಳಿ_ಟೀಶರ್ಟ್_ಧರಿಸುತ್ತಾರೆ?...

  ಭಾರತೀಯ ರಾಜಕಾರಣಿಗಳ ಡ್ರೆಸ್ ಕೋಡ್ ಬದಲಾಗುವ ಸೂಚನೆಯಾ?...

   ರಾಜಕಾರಣಿಗಳ ಡ್ರೆಸ್ ಕುರ್ತಾ ಪೈಜಾಮ ಅವರು ಧರಿಸುವುದಿಲ್ಲ ಏಕೆ?...

  ವಿಸುಯಲ್ ಬ್ರಾಂಡಿಂಗ್?.. ಡಿಸಿಷನ್ ಪ್ಯಾಟಿಗೊ?... ಕಾರಣವಾ? ...

  ಸಾಮಾನ್ಯವಾಗಿ ಭಾರತೀಯ ರಾಜಕಾರಣಿಗಳ ವೇಷ ಭೂಷಣಗಳು ಖಾದಿಯ ಕುರ್ತಾ ಪೈಜಾಮಗಳು ಆದರೆ ರಾಹುಲ್ ಗಾಂಧಿ ಭಾರತ್- ಜೋಡೋ ಯಾತ್ರೆಯಿಂದ ಬಿಳಿ ಟೀ -ಶರ್ಟ್ ಮತ್ತು ತಿಳಿಬೂದು, ಕಾಕಿ ಅಥವ ಕಪ್ಪು ಫ್ಯಾಂಟ್ ಗೆ ಬದಲಾಗಿದ್ದು ಯಾಕೆ?...

  ಇಂತಹ ಪ್ರಶ್ನೆಗಳು ಭಾರತೀಯರಲ್ಲಿ ಮೂಡಿರುವುದು ಸಹಜ ಆದರೆ ಈ ಪ್ರಶ್ನೆಗಳಿಗೆ ನೇರ ಉತ್ತರ ಅವರಿಂದ ಇಲ್ಲವಾದರೂ ಇದಕ್ಕೆ ಕಾರಣ ಏನು ಎನ್ನುವುದಕ್ಕೆ ಉತ್ತರ ಇಲ್ಲಿದೆ ಓದಿ.

  ರಾಹುಲ್ ಗಾಂಧಿ ಅವರು ಪ್ರಚಾರದ ಸಮಯದಲ್ಲಿ ವಿಶೇಷವಾಗಿ ತಮ್ಮ ಸುದೀರ್ಘ ಪಾದಯಾತ್ರೆಗಳ ದಿನಗಳಿಂದಲೂ ಒಂದೇ ಬಣ್ಣದ ಬಿಳಿ ಟಿ-ಶರ್ಟ್ ಮತ್ತು ತಿಳಿ ಬೂದು/ಬಿಳಿ ಪ್ಯಾಂಟ್  ಧರಿಸುವುದರ ಹಿಂದೆ ಕೆಲವು ಪ್ರಮುಖ ರಾಜಕೀಯ, ವೈಯಕ್ತಿಕ ಮತ್ತು ಕಾರ್ಯತಂತ್ರದ ಕಾರಣಗಳಿವೆ ಅವುಗಳ ವಿವರ ಇಲ್ಲಿದೆ.

​  ರಾಜಕೀಯ ಸಂದೇಶ ಮತ್ತು ಸರಳತೆಯ ಸಂಕೇತ ಏನೆಂದರೆ...
​ಸಾಮಾನ್ಯ ಜನರೊಂದಿಗೆ ಬೆರೆಯಲು ದುಬಾರಿ ರಾಜಕೀಯ ಉಡುಪುಗಳು ಅಥವಾ ಜರಿ ಕುರ್ತಾಗಳ ಬದಲಿಗೆ ಕೇವಲ ಒಂದು ಸಾಧಾರಣ ಬಿಳಿ ಟಿ-ಶರ್ಟ್ ಧರಿಸುವುದರಿಂದ ತಾವು ಸಾಮಾನ್ಯ ಜನರಂತೆ ಸರಳ ವ್ಯಕ್ತಿ ಎಂಬ ಸಂದೇಶವನ್ನು ನೀಡಲು ಅವರು ಪ್ರಯತ್ನಿಸುತ್ತಿದ್ದಾರೆ ಇದು ಜನಸಾಮಾನ್ಯರೊಂದಿಗೆ ಸುಲಭವಾಗಿ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ.

  ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಪಾರದರ್ಶಕತೆಯ ಸಂಕೇತವಾಗಿದೆ, ಮಹಾತ್ಮಾ ಗಾಂಧೀಜಿಯವರ ಸರಳತೆಯ ರಾಜಕಾರಣವನ್ನು ಇದು ನೆನಪಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

​ ಬ್ರ್ಯಾಂಡಿಂಗ್ ಮತ್ತು ವಿಶಿಷ್ಟ ಗುರುತು ಅಂದರೆ Visual Identity ನೀವು ಯಾವುದೇ ಕಾರ್ಪೊರೇಟ್ ಲೋಗೋ ಅಥವಾ ಬ್ರ್ಯಾಂಡ್ ಗಮನಿಸಿದರೆ ಅದಕ್ಕೊಂದು ನಿರ್ದಿಷ್ಟ ಬಣ್ಣವಿರುತ್ತದೆ,ರಾಜಕೀಯದಲ್ಲೂ ಇದನ್ನು "#ವಿಸುಯಲ್_ಬ್ರ್ಯಾಂಡಿಂಗ್" ಎನ್ನಲಾಗುತ್ತದೆ.
  
  ​ಜನಸಮೂಹದಲ್ಲಿ ರಾಹುಲ್ ಗಾಂಧಿ ಅವರು ಎಲ್ಲೇ ಇದ್ದರೂ ಅವರ ಆ ನಿರ್ದಿಷ್ಟ ಬಿಳಿ ಟಿ-ಶರ್ಟ್ ಧರಿಸಿದ ರೂಪ ದೂರದಿಂದಲೇ ಜನರ ಕಣ್ಣಿಗೆ ತಕ್ಷಣ ಬೀಳುತ್ತದೆ ಮತ್ತು ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.

​ ಸಮಯದ ಉಳಿತಾಯ ಮತ್ತು ಏಕಾಗ್ರತೆ ಇದಕ್ಕೆ #Decission_Fatigue ಅಂತ ಇಂಗ್ಲೀಷ್ ನಲ್ಲಿ ಹೇಳುತ್ತಾರೆ,​ಜಗತ್ತಿನ ಪ್ರಸಿದ್ಧ ವ್ಯಕ್ತಿಗಳಾದ #ಸ್ಟೀವ್_ಜಾಬ್ಸ್ ಆಪಲ್ ಸಂಸ್ಥಾಪಕ ಯಾವಾಗಲೂ ಕಪ್ಪು ಟರ್ಟಲ್‌ನೆಕ್ ಟಿ-ಶರ್ಟ್ ಧರಿಸುತ್ತಿದ್ದರು.

  #ಮಾರ್ಕ್_ಜುಕರ್‌ಬರ್ಗ್ ಫೇಸ್‌ಬುಕ್ ಸಂಸ್ಥಾಪಕ  ಯಾವಾಗಲೂ ಬೂದು ಬಣ್ಣದ ಟಿ-ಶರ್ಟ್ ಧರಿಸುತ್ತಾರೆ ಅವರಂತೆಯೇ ರಾಹುಲ್ ಗಾಂಧಿ ಕೂಡ ಈ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

  ​ದಿನಾ ಬೆಳಗ್ಗೆ "ಇವತ್ತು ಯಾವ ಬಣ್ಣದ ಬಟ್ಟೆ ಧರಿಸಬೇಕು?" ಎಂದು ಯೋಚಿಸುವ ಸಮಯ ಮತ್ತು ಶಕ್ತಿಯನ್ನು ಉಳಿಸಿ ಅದನ್ನು ಸಂಪೂರ್ಣವಾಗಿ ತಮ್ಮ ಕೆಲಸ ಅಥವಾ ರಾಜಕೀಯ ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸಲು ಇದು ನೆರವಾಗುತ್ತದೆ.

 ಇದನ್ನು ವಿಜ್ಞಾನದಲ್ಲಿ 'ಡಿಸಿಷನ್ ಫೇಟಿಗ್' ನಿರ್ಧಾರದ ಆಯಾಸ ತಡೆಗಟ್ಟುವುದು ಎನ್ನಲಾಗುತ್ತದೆ.

​  ದೈಹಿಕ ಆರಾಮ ಮತ್ತು ನಡಿಗೆಗೆ ಯೋಗ್ಯ ಎನ್ನುವ Comfort for Fitness ​ರಾಹುಲ್ ಗಾಂಧಿ ಅಳವಡಿಸಿಕೊಂಡಿದ್ದಾರೆ, ಅವರು ಪ್ರತಿದಿನ ಕಿಲೋಮೀಟರ್‌ಗಟ್ಟಲೆ ನಡೆಯುತ್ತಾರೆ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

 ​ಸಾಂಪ್ರದಾಯಿಕ ಕುರ್ತಾ-ಪೈಜಾಮಾಗಳಿಗೆ ಹೋಲಿಸಿದರೆ ಟಿ-ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್‌ಗಳು ಸುಲಭವಾಗಿ ಗಾಳಿಯಾಡಲು  ಮತ್ತು ದೀರ್ಘಕಾಲದ ನಡಿಗೆಗೆ ಅತ್ಯಂತ ಆರಾಮದಾಯಕವಾಗಿರುತ್ತವೆ.

  ​ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಕೇವಲ ಫ್ಯಾಷನ್ ಅಲ್ಲ ಬದಲಿಗೆ ಆರಾಮದಾಯಕತೆ, ಸರಳತೆಯ ಪ್ರದರ್ಶನ ಮತ್ತು ರಾಜಕೀಯ ತಂತ್ರಗಾರಿಕೆ ಮೂರೂ ಸೇರಿದ ಒಂದು ಯೋಜಿತ ಶೈಲಿಯಾಗಿದೆ.

  ​ರಾಹುಲ್ ಗಾಂಧಿ ಅವರು ಧರಿಸುವ ಬಿಳಿ ಟಿ-ಶರ್ಟ್‌ಗಳ ಬೆಲೆಗೆ ಸಂಬಂಧಿಸಿದಂತೆ ಕೆಲವು ರೀತಿಯ ವಿಚಾರಗಳು ಚರ್ಚೆಯಲ್ಲಿವೆ. 

  ​ #ಬರ್ಬೆರಿ ಲಕ್ಸುರಿ ಬ್ರ್ಯಾಂಡ್ ಟಿ-ಶರ್ಟ್ ​ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರು ಧರಿಸಿದ್ದ ಬಿಳಿ ಬಣ್ಣದ ಪೋಲೊ ಟಿ-ಶರ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

  #ಬರ್ಬೆರ್ರಿ_ಗ್ರೂಪ್ ಪಿಎಲ್‌ಸಿ 1856 ರಲ್ಲಿ ಥಾಮಸ್ ಬರ್ಬೆರ್ರಿ ಸ್ಥಾಪಿಸಿದ ಬ್ರಿಟಿಷ್ ಐಷಾರಾಮಿ ಫ್ಯಾಷನ್ ಹೌಸ್ ಆಗಿದ್ದು ಇಂಗ್ಲೆಂಡ್‌ನ ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ .

  ಇದು ಟ್ರೆಂಚ್ ಕೋಟ್‌ಗಳು, ಚರ್ಮದ ಪರಿಕರಗಳು ಮತ್ತು ಪಾದರಕ್ಷೆಗಳನ್ನು ಒಳಗೊಂಡಂತೆ ಧರಿಸಲು ಸಿದ್ಧವಾದ ಬಟ್ಟೆಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ವಿತರಿಸುತ್ತದೆ.

   ಇದು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿಮಾಡಲ್ಪಟ್ಟಿದೆ ಮತ್ತು FTSE 100 ಸೂಚ್ಯಂಕದ ಒಂದು ಘಟಕವಾಗಿದೆ.

   ಬರ್ಬೆರಿ ಸಂಸ್ಥೆ ತಮ್ಮ ಎಲ್ಲಾ ಉಡುಪುಗಳನ್ನು ಒಂದೇ ದೇಶದಲ್ಲಿ ತಯಾರು ಮಾಡುವುದಿಲ್ಲ.

  ​ ಬರ್ಬೆರಿ ಸಂಸ್ಥೆಯ ಬಹುತೇಕ ಪ್ರೀಮಿಯಂ ಟಿ-ಶರ್ಟ್‌ಗಳು, ಪೋಲೊ ಶರ್ಟ್‌ಗಳು ಮತ್ತು ಇತರ ಸಿದ್ಧ ಉಡುಪುಗಳನ್ನು ಯುರೋಪ್ ಒಕ್ಕೂಟದ ದೇಶಗಳಾದ ಪೋರ್ಚುಗಲ್ ಮತ್ತು ಇಟಲಿ  ದೇಶಗಳಲ್ಲಿ ತಯಾರಿಸಲಾಗುತ್ತದೆ. 

   ಉತ್ತಮ ಗುಣಮಟ್ಟದ ಹತ್ತಿ ನೇಯ್ಗೆ ಮತ್ತು ಹೊಲಿಗೆಗೆ ಪೋರ್ಚುಗಲ್ ಜಗತ್ತಿನಲ್ಲೇ ಪ್ರಸಿದ್ಧಿಯಾಗಿದೆ.

​ಇಂಗ್ಲೆಂಡ್ ದೇಶದ ಬರ್ಬೆರಿ ತನ್ನ ಅತ್ಯಂತ ಪ್ರಸಿದ್ಧ ಹಾಗೂ ಐಕಾನಿಕ್ ಉತ್ಪನ್ನಗಳಾದ 'ಟ್ರೆಂಡ್ ಕೋಟ್' ಮತ್ತು 'ಲೈನಿಂಗ್ ಸ್ಕಾರ್ಫ್'ಗಳನ್ನು ಇಂದಿಗೂ ಇಂಗ್ಲೆಂಡ್‌ನ ಯಾರ್ಕ್‌ಶೈರ್‌ನಲ್ಲಿರುವ ತನ್ನದೇ ಆದ ಸ್ವಂತ ಕಾರ್ಖಾನೆಗಳಲ್ಲಿ ಮಾತ್ರ ತಯಾರಿಸುತ್ತದೆ.

​  ಬರ್ಬೆರಿ ಟಿ-ಶರ್ಟ್‌ನ ಒಳಭಾಗದ ಲೇಬಲ್  ಮೇಲೆ ಅದು ಯಾವ ದೇಶದಲ್ಲಿ ತಯಾರಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ.

  ರಾಹುಲ್ ಗಾಂಧಿ ಅವರು ತಮ್ಮ ಉಡುಪುಗಳ ಬ್ರ್ಯಾಂಡ್ ಹೆಸರನ್ನು ಅಧಿಕೃತವಾಗಿ ಎಲ್ಲೂ ಬಹಿರಂಗಪಡಿಸಿಲ್ಲ ಆದರೆ ಫ್ಯಾಷನ್ ತಜ್ಞರು ಮತ್ತು ಮಾಧ್ಯಮಗಳ ವಿಶ್ಲೇಷಣೆಯ ಪ್ರಕಾರ ಅವರು ಧರಿಸುವ ಟಿ-ಶರ್ಟ್ ಮತ್ತು ಪ್ಯಾಂಟ್‌ಗಳು ಇಂಟರ್ನ್ಯಾಷನಲ್ ಹಾಗೂ ಲಕ್ಸುರಿ ಬ್ರ್ಯಾಂಡ್‌ಗಳು.

   ಊಹೆಯ ಆಧಾರದ ಮೇಲೆ ​ಅವರು ಧರಿಸುವ ಬಿಳಿ ಟಿ-ಶರ್ಟ್ ಜಗತ್ತಿನ ಪ್ರಸಿದ್ಧ ಲಕ್ಸುರಿ ಬ್ರ್ಯಾಂಡ್ ಆದ ಬರ್ಬೆರಿನದ್ದಾಗಿತ್ತು ಎಂಬುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. 

  ಅದೇ ರೀತಿ ಅವರು ಧರಿಸುವ ಪ್ರೀಮಿಯಂ ಗುಣಮಟ್ಟದ ಕಾರ್ಗೋ ಮತ್ತು ಟ್ರ್ಯಾಕ್ ಪ್ಯಾಂಟ್‌ಗಳು ಕೂಡ ಜಾಗತಿಕ ಬ್ರ್ಯಾಂಡ್‌ಗಳಾದ ಬರ್ಬೆರಿ, ಅರ್ಮಾನಿ ಅಥವಾ ಹೊರಾಂಗಣ ನಡಿಗೆಗೆ ಹೆಸರಾದ ಪ್ರೀಮಿಯಂ ಫಿಟ್‌ನೆಸ್ ಬ್ರ್ಯಾಂಡ್‌ಗಳದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

​ ಇಂತಹ ಲಕ್ಸುರಿ ಕಾರ್ಗೋ ಪ್ಯಾಂಟ್‌ಗಳ ಬೆಲೆ ಸಾಮಾನ್ಯವಾಗಿ ರೂ 15,000 ರಿಂದ ರೂ 35,000 ರವರೆಗೆ ಇರುತ್ತದೆ.

 ಬರ್ಬೆರಿ ಟೀ-ಶರ್ಟಿನ ​ಅಂದಾಜು ಬೆಲೆ ರೂ 41,257 ​ಇಂತಹ ಪ್ರೀಮಿಯಂ ಬ್ರ್ಯಾಂಡ್‌ಗಳ ಟಿ-ಶರ್ಟ್‌ಗಳು ಉತ್ತಮ ಗುಣಮಟ್ಟದ ಪೀಮಾ ಹತ್ತಿ  ಇತ್ಯಾದಿಗಳಿಂದ ಮಾಡಲ್ಪಟ್ಟಿರುತ್ತವೆ.

   ಕನ್ನಡದ ಜನಪ್ರಿಯ ನಟ #ದರ್ಶನ್ ಕೂಡ ಬ್ರಾಂಡೆಡ್ ಡ್ರೆಸ್ ಪ್ರಿಯರು.
  
   ದರ್ಶನ್ ಅವರು ತಮ್ಮ ವಿಡಿಯೋ ಒಂದರಲ್ಲಿ ಬಿಳಿ ಬಣ್ಣದ 'AAPE' ಪ್ರಿಂಟ್ ಇರುವ ಟಿ-ಶರ್ಟ್ ಧರಿಸಿದ್ದರು ಇದರ ಅಂದಾಜು ಬೆಲೆ ಸುಮಾರು ರೂ 9,500 ರಿಂದ ರೂ10,000.

​ಮದುವೆ ಸಮಾರಂಭವೊಂದರಲ್ಲಿ ದರ್ಶನ್ ಅವರು ಧರಿಸಿದ್ದ ಪ್ರಸಿದ್ಧ 'Burberry ಬ್ರ್ಯಾಂಡ್‌ನ ಶರ್ಟ್ ಬೆಲೆ ಸುಮಾರು ರೂ 38,000 ಕ್ಕೂ ಹೆಚ್ಚು ಎನ್ನಲಾಗಿದೆ.

   ​ ಮತ್ತೊಂದು ಸಂದರ್ಭದಲ್ಲಿ ಅವರು ಧರಿಸಿದ್ದ 'Justice, Dignity, Equality, Peace' ಎಂಬ ಬರಹವಿದ್ದ ಕಪ್ಪು ಬಣ್ಣದ ಪುಮಾ ಟಿ-ಶರ್ಟ್ ಬೆಲೆ ಸುಮಾರು ರೂ 1,500 ರಿಂದ ರೂ 2,500 ಆಸುಪಾಸಿನಲ್ಲಿದೆ.

   ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಭಾರತೀಯ ರಾಜಕಾರಣಿಗಳ ವೇಷ ಭೂಷಣ ಬದಲಾವಣೆ ಆಗುವುದು ಸೂಕ್ತವಾ? ನಿಮ್ಮ ಅಭಿಪ್ರಾಯ ತಿಳಿಸಿ.

#RahulGandhi  #politician  #CongressParty  #darshan #KannadaFilmIndustry  #berbery #tshirt #fuma #brand #markjugarbarg

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...