ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ...
#ಭಾಗ_3.
ಘಟ್ಟದ ಹೆಬ್ಬಾಗಿಲಾಗಿದ್ದ ಪಶ್ಚಿಮ ಘಟ್ಟದ ನಾಲ್ಕು ಘಾಟಿಗಳು.
ಯಾಕೆ_ಈ_ರೀತಿ_ವಲಸೆ_ಬಂದರು?....
ಆ ರೀತಿ ವಲಸೆ ಬಂದ ಸಾವಿರಾರು ಕುಟುಂಬಗಳು ಘಟ್ಟದಲ್ಲಿಯೇ ನೆಲೆಸಿ ಅಲ್ಲಿನ ಖಾಯಂ ನಿವಾಸಿಗಳಾಗಿದ್ದಾರೆ, ಅವರಿಗೆ ಅವರ ಕುಟುಂಬಗಳು ವಲಸೆಯ ಕಥೆ ಮರೆತು ಹೋಗಿರಬಹುದು.
ನಿಮ್ಮ ಕುಟುಂಬದಲ್ಲಿ ಇಂತಹ ವಲಸೆ ನಡೆದಿತ್ತಾ?....ಹಾಗಾದರೆ ಈ ಲೇಖನ ನೀವೂ ಓದಿ ಮತ್ತು ನಿಮ್ಮ ತಲೆಮಾರಿನವರಿಗೆ ಈ ಲೇಖನ ಶೇರ್ ಮಾಡಿ ತಲುಪಿಸಿ, ಅವರಿಗೆ ತಮ್ಮ ಕುಟುಂಬದ ಮರೆತು ಹೋದ ಮೂಲ ವಲಸೆ ಇತಿಹಾಸ ನೆನಪಾಗಿ ಉಳಿಯಲು ಸಹಾಯವಾಗುತ್ತದೆ.
ಇಂದು ನಾವು ಕೇವಲ ಗಂಟೆಗಳಲ್ಲಿ ದಾಟುವ ಈ ಘಾಟಿಗಳನ್ನು ಅಂದು ನಮ್ಮ ಹಿರಿಯರು ದಿನಗಟ್ಟಲೆ ನಡೆದು ದಾಟುತ್ತಿದ್ದರು, ಆ ದಟ್ಟ ಕಾಡಿನ ಹಾದಿಯಲ್ಲಿ ಅವರು ಎದುರಿಸಿದ ಅತಿ ದೊಡ್ಡ ಭಯ ಅಥವ ಸಂಕಷ್ಟದ ಬಗ್ಗೆ ನಿಮ್ಮ ಅಜ್ಜ - ಅಜ್ಜಿಯಂದಿರು ಏನಾದರು ಹೇಳಿದ್ದಾರಾ? ....
ನಿಮ್ಮ ಪೂರ್ವಜರು ಕರಾವಳಿಯಿಂದ ಸಾಗರ - ಹೊಸನಗರ - ತೀರ್ಥಹಳ್ಳಿ -ಕೊಪ್ಪ ಎನ್ ಆರ್ ಪುರ -ಶೃ೦ಗೇರಿ - ಚಿಕ್ಕಮಗಳೂರು - ಮೂಡಿಗೆರೆ - ಕೊಡಗು ಹಾಸನಕ್ಕೆ ಈ ರೀತಿ ವಲಸೆ ಬಂದಿದ್ದರೆ ಈ ಲೇಖನ ನಿಮ್ಮ ಊರಿನ ಗೆಳೆಯರಿಗೆ ಶೇರ್ ಮಾಡಿ ಅವರಿಗೂ ಈ ಕಷ್ಟದ ದಿನದ ನಿಮ್ಮ ಪೂರ್ವಿಕರ ವಲಸೆ ಯಾತ್ರೆ ಗೊತ್ತಾಗಲಿ.
ಆಗೆಲ್ಲ ನಡೆದೇ ಘಟ್ಟ ಹತ್ತಿ ಬರುತ್ತಿದ್ದರು ಕಷ್ಟ ಪಟ್ಟು ಘಟ್ಟ ಹತ್ತುತ್ತಿದ್ದ ಆ ಕಾಲದ ಕಥೆ -ವ್ಯಥೆ...
ದಟ್ಟ ಅರಣ್ಯದಲ್ಲಿ ವನ್ಯಜೀವಿಗಳಿಂದ ರಕಕ್ಷಣೆಗಾಗಿ ಗುಂಪು ಗುಂಪಾಗಿ ಪ್ರಯಾಣತ್ತಿದ್ದರಂತೆ.
ಮಾರ್ಗ ಮಧ್ಯದಲ್ಲಿ ಸಿಗುವ ಹೊಳೆ -ಹಳ್ಳದ ಸಮೀಪ ಅಡುಗೆ ಅದೂ ಜಾತಿ ಕಾರಣದಿಂದ ಪ್ರತ್ಯೇಕ ಪ್ರತ್ಯೇಕ ಅಡುಗೆ.
ಈ ಮಾರ್ಗದಲ್ಲಿ ಕರಾವಳಿ ಮೂಲದ ಕೆಲ ಸಹೃದಯಿ ಮನೆಗಳು ಇರುತ್ತಿದ್ದವು ಅಲ್ಲಿ
ರಾತ್ರಿಯಲ್ಲಿ ಇಂತಹ ಪ್ರಯಾಣಿಕರಿಗೆ ಅವರ ಮನೆಯ ಹೊರ ಆವರಣದ ಚಾವಣಿಯಲ್ಲಿ ತಂಗಲು ಅವಕಾಶ ನೀಡುತ್ತಿದ್ದರಂತೆ.
ಅಲ್ಲಿ ಇವರಿಗೆ ಇಂಬುಳದ ರಕ್ಷಣೆಗೆ ಕಾಲಿಗೆ ಹಚ್ಚಿಕೊಳ್ಳಲು ಉಚಿತ ಸುಣ್ಣ, ಕುಡಿಯಲು ನೀರು - ಬೆಲ್ಲ ಇಡುತ್ತಿದ್ದರಂತೆ.
ಘಟ್ಟದ ಮೇಲಿನ ಕೃಷಿ ತೋಟದ ಕೆಲಸಗಾರರನ್ನ ಕರೆತರುವ ಸೇರೆಗಾರರೇ ಟೀಮ್ ಲೀಡರ್ ಅವರು ಈ ಕ್ಯಾರವಾನ್ ಗಳ ಲೀಡ್ ಮಾಡುತ್ತಿದ್ದರು.
ಈ ಘಟ್ಟಕ್ಕೆ ಬರುವ ತಂಡಗಳಲ್ಲಿ ಮರದ ಕೆಲಸದ ವಿಶ್ವಕರ್ಮಆಚಾರರು, ಕೊಂಕಣಿ ಆಚಾರರು, ಮೆಸ್ತಾಗಳು,ಮಣ್ಣಿನ ಗೋಡೆ ಕಟ್ಟುವ ಗಂಜಿಯವರು, ಜಂಬಿಟ್ಟಿಗೆ ಕಲ್ಲು ಕೀಳುವ ಮತ್ತು ಗಾರೆ ಕೆಲಸದ ಪರ್ಬುಗಳು ಎಂದು ಹೇಳುವ ಕ್ರೈಸ್ತರು,ಸಂಪ್ರದಾಯಕ ಆಲೇ ಮನೆ ಹಾಕಿ ಬೆಲ್ಲ ತಯಾರಿಸುವ ತಂಡದ ಆಲೇ ಶೆಟ್ಟರು ಮತ್ತು ಅವರ ಕೋಣಗಳು, ಒಣ ಮೀನು, ವಾಲೆ ಬೆಲ್ಲ ಮಾರಾಟಗಾರರಾದ ಬ್ಯಾರಿ ಸಾಹೇಬರು, ದೇವಾಡಿಗರು, ಬಿಲ್ಲವ - ಪೂಜಾರರು, ಬಂಟರು, ರಾಮಕ್ಷತ್ರಿಯರು, ಮೊಗೇರರು, ಬತ್ತಾಡರು, ಕೊರಗರು, ಕೂಸಾಳರು , ಸಮಗಾರರು, ಕ್ಷೌರಿಕ ವೃತ್ತಿಯ ಭಂಡಾರರು, ಗೊಲ್ಲರು, ಮರಕೆಲಸದ ಕೇರಳ ಮೂಲದ ಮಲೆಯಾಳಿಗಳು, ಆರ್ಚಕ ವೃತ್ತಿಯ ವಿವಿಧ ಬ್ರಾಹ್ಮಣ ಸಮಾಜದವರು, ಹೋಟೆಲ್ ಮತ್ತು ಬೇರೆ ವೃತ್ತಿಯ ಗೌಡ ಸಾರಸ್ವತರು ಇನ್ನೂ ಅನೇಕ ಜಾತಿ ವರ್ಗದವರು ಘಟ್ಟಕ್ಕೆ ಹೊಟ್ಟೆಪಾಡಿಗಾಗಿ ವಲಸೆ ಬರುತ್ತಿದ್ದರು ಇವರ ಜೊತೆ ಘಟ್ಟದ ಮೇಲೆ ನೆಲೆಸಿ ಊರಿಗೆ ಬಾರದ ತಮ್ಮಸಂಬಂದಿಗಳ ನೋಡಲು ಬರುವವರೂ ಇರುತ್ತಿದ್ದರು.
ಅವರೆಲ್ಲ ಘಟ್ಟ ಹತ್ತಿ ಬರುವ ಮಾರ್ಗದಲ್ಲಿ ಆ ಕಾಲದಲ್ಲಿ ಅವರ ಊರಿಂದ ಬಾಂಬೆಗೆ ಓಡಿ ಹೋಗಿ ಬಂದವರು ಹೇಳುವ ಕಥೆ ಕೇಳುತ್ತಾ,ಘಟ್ಟದ ಕಾಡಿನ ಹುಲಿ - ಹೆಬ್ಬಾವಿನ ಕಥೆ ಕೇಳುತ್ತಾ ಭಯ ಪಡುತ್ತಾ ಬರುವಾಗ ಅವರು ಅವರ ಆರಾದ್ಯ ದೈವಗಳಾದ ಕರಾವಳಿ ದೈವಗಳ ಪವಾಡದ ಕಥೆಗಳನ್ನು ಕೇಳುತ್ತಾ ದೈರ್ಯ ಪಟ್ಟುಕೊಳ್ಳುತ್ತಿದ್ದರು.
ಇವರ ಮಧ್ಯ ಕೇರಳದ ಮರ ಕೊಯ್ಯುವ ಕೆಲಸದ ಮಲೆಯಾಳಿಗಳು ಇರುತ್ತಿದ್ದರು ಅವರಲ್ಲಿ ಹೆಚ್ಚಿನವರು ಅವರವರ ಊರಲ್ಲಿ ತಪ್ಪು ಮಾಡಿ ಪೋಲಿಸರ ಕಣ್ಣು ತಪ್ಪಿಸಿ ಕೊಂಡು ಬಂದವರು ಈ ಗುಂಪು ಸೇರುತ್ತಿದ್ದರು.
ಇದು ಘಟ್ಟ ಹತ್ತುವವರ ಕಥೆ ಆದರೆ ಘಟ್ಟ ಇಳಿಯುವವರ ಕಥೆ ಅದು ಇನ್ನೊಂದು ರೀತಿಯ ಬೇರೆಯದ್ದು...
ವರ್ಷ ಕಾಲ ದುಡಿದ ಹಣ ಊರು ಮುಟ್ಟುವ ತನಕ ಸಂರಕ್ಷಣೆ ಮಾಡಿ ಊರು ತಲುಪುವುದು ಆ ಕಾಲದಲ್ಲಿ ದೊಡ್ಡ ಕಷ್ಟ ಆಗಿತ್ತು.
ಘಟ್ಟ ಇಳಿಯುವವರ ಹತ್ತಿರ ಹಣ ಇದೆ ಎಂದು ಅವರನ್ನ ದೋಚಲು ಹೊಂಚು ಹಾಕುತ್ತಿದ್ದ ಕಳ್ಳರು ದರೋಡೆಕೋರರು ಅಲ್ಲಲ್ಲಿ ಇರುತ್ತಿದ್ದರು.
ಕರ್ನಾಟಕದ ಇತಿಹಾಸದಲ್ಲಿ ಮಹತ್ತರವಾದ ಕರಾವಳಿ ಭಾಗದ ಜನರ ವಲಸೆಯಲ್ಲಿ ಪ್ರಮುಖವಾಗಿ ಆ ಕಾಲದಲ್ಲಿ ಈ ಜನ ಬಳಸಿದ ಘಟ್ಟದ ಮಾರ್ಗದ ನಾಲ್ಕು ಘಾಟಿಗಳು ಕೂಡ ಮುಖ್ಯವಾಗಿದೆ.
ಕರಾವಳಿ ಭಾಗದಿಂದ ಮಲೆನಾಡು ಅಥವಾ ಘಟ್ಟದ ಮೇಲಿನ ಪ್ರದೇಶಗಳಿಗೆ ಉದಾಹರಣೆಗೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಮುಂತಾದ ಕಡೆಗಳಿಗೆ ಜನರು ವಲಸೆ ಹೋಗಲು ಅಥವಾ ವ್ಯಾಪಾರಕ್ಕಾಗಿ ಹಿಂದಿನಿಂದಲೂ ಬಳಸುತ್ತಿದ್ದ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಘಾಟಿ ಮಾರ್ಗವೆಂದರೆ ಆಗುಂಬೆ ಘಾಟಿ,ಶಿರಾಡಿ ಘಾಟಿ,ಚಾರ್ಮಾಡಿ ಘಾಟಿ ಮತ್ತು ಹುಲಿಕಲ್ ಘಾಟಿಗಳು.
#ಚಾರ್ಮಾಡಿ_ಘಾಟ್
ಸಂಪರ್ಕಿಸುವ ಪ್ರದೇಶಗಳು ದಕ್ಷಿಣ ಕನ್ನಡದ ಮಂಗಳೂರು/ಬೆಳ್ತಂಗಡಿಯಿಂದ ಚಿಕ್ಕಮಗಳೂರು ಮೂಡಿಗೆರೆ.
ಈ ಮಾರ್ಗ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ಜನರು ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ಕೆಲಸಕ್ಕಾಗಿ ವಲಸೆ ಹೋಗಲು ದಶಕಗಳಿಂದಲೂ ಬಳಸುತ್ತಿದ್ದ ಅತ್ಯಂತ ಮುಖ್ಯವಾದ ಮತ್ತು ಹತ್ತಿರದ ಘಾಟಿ ಮಾರ್ಗ ಇದಾಗಿದೆ.
#ಆಗುಂಬೆ_ಘಾಟ್.
ಸಂಪರ್ಕಿಸುವ ಪ್ರದೇಶಗಳು ಉಡುಪಿ/ಕುಂದಾಪುರದಿಂದ ಶಿವಮೊಗ್ಗ ತೀರ್ಥಹಳ್ಳಿ.
ಇದನ್ನು ದಕ್ಷಿಣ ಭಾರತದ ಚಿರಾಪುಂಜಿ ಎನ್ನಲಾಗುವ ಆಗುಂಬೆಯ ಮೂಲಕ ಹಾದುಹೋಗುವ ಈ ಮಾರ್ಗವನ್ನು ಕರಾವಳಿ ಜನರು ಶಿವಮೊಗ್ಗ, ಚಿಕ್ಕಮಗಳೂರು ಭಾಗಕ್ಕೆ ವಲಸೆ ಬರಲು ಹೆಚ್ಚಾಗಿ ಬಳಸುತ್ತಿದ್ದರು.
#ಶಿರಾಡಿ_ಘಾಟ್.
ಸಂಪರ್ಕಿಸುವ ಪ್ರದೇಶಗಳು ಮಂಗಳೂರುನಿಂದ ಹಾಸನ, ಕೊಡಗು, ಸಕಲೇಶಪುರ ಮತ್ತು ಬೆಂಗಳೂರು.
ಇದು ಕರಾವಳಿ ಮತ್ತು ಬಯಲು ಸೀಮೆಯನ್ನು ಸಂಪರ್ಕಿಸುವ ಅತ್ಯಂತ ದೊಡ್ಡ ವಾಣಿಜ್ಯ ಮಾರ್ಗವಾಗಿದ್ದು, ಹಾಸನದ ಸಕಲೇಶಪುರ ಭಾಗದ ಕಾಫಿ ತೋಟಗಳಿಗೆ ವಲಸೆ ಹೋಗುವ ಕಾರ್ಮಿಕರಿಗೆ ಇದು ಪ್ರಮುಖ ದಾರಿಯಾಗಿತ್ತು.
#ಹುಲಿಕಲ್_ಘಾಟ್ / ಬಾಳೆಬರೆ ಘಾಟ್.
ಸಂಪರ್ಕಿಸುವ ಪ್ರದೇಶಗಳು ಉಡುಪಿ,ಕುಂದಾಪುರದಿಂದ ಶಿವಮೊಗ್ಗ,ಹೊಸನಗರ ಮತ್ತು ಸಾಗರ.
ಕುಂದಾಪುರ ಭಾಗದ ಕರಾವಳಿ ಜನರು ಘಟ್ಟದ ಮೇಲಿನ ಪ್ರದೇಶಗಳಿಗೆ ವಲಸೆ ಹೋಗಲು ಈ ಮಾರ್ಗವನ್ನು ಬಳಸುತ್ತಿದ್ದರು.
ಈ ನಾಲ್ಕು ಘಾಟಿಗಳಲ್ಲಿ ಚಾರ್ಮಾಡಿ ಘಾಟಿ ಕರಾವಳಿ ಜನರ ಬದುಕಿನೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಮುಖ್ಯ ಮಾರ್ಗವಾಗಿತ್ತು.
ಘಟ್ಟಕ್ಕೆ ಕರಾವಳಿ ವಲಸೆ ಸರಣಿ ಲೇಖನದ ಹಿಂದಿನ ಎರೆಡು ಭಾಗಗಳು ಓದಲು ಕಾಮೆಂಟ್ ನಲ್ಲಿ ಲಿಂಕ್ ಇದೆ ನೋಡಿ.
#migration #karavali #westernghats #coastal #cofee #areca
Comments
Post a Comment