#ಪ್ರವಾಸೋದ್ಯಮದ_ಸರ್ಕ್ಯೂಟ್_ಮಾಡಬಹುದಾ? ..
ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಈ ಮೂರು ಆಂಜನೇಯರ ಶಕ್ತಿ ಪೀಠಗಳ ದರ್ಶನ ಯಾತ್ರೆ ಅಧಿಕಮಾಸದಲ್ಲಿ ನಡೆಯುತ್ತದೆ ಗೊತ್ತಾ? ....
#ಹಾವೇರಿ_ಜಿಲ್ಲೆಯ #ಹಿರೇಕೆರೂರು ತಾಲೂಕಿನ #ಸಾತೇನಹಳ್ಳಿಯ_ಶಾಂತೇಶ, ಹಾವೇರಿ ಜಿಲ್ಲೆಯ #ಬ್ಯಾಡಗಿ ತಾಲ್ಲೂಕಿನ #ಕದರಮುಂಡಲಗಿಯ_ಕಾಂತೇಶ ಹಾಗೂ #ಶಿವಮೊಗ್ಗಜಿಲ್ಲೆಯ #ಶಿಕಾರಿಪುರದ_ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ
ದರ್ಶನ ಪಡೆದರೆ #ಕಾಶಿಯಾತ್ರೆಯಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.
ಈ ವರ್ಷ ಇಲ್ಲಿಗೆ ಆಗಮಿಸಿದ ಭಕ್ತರ ಸಂಖ್ಯೆ ಹಿಂದಿನ ಎಲ್ಲಾ ದಾಖಲೆಗಳನ್ನ ಮುರಿದಿದೆ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚಾಗಲಿದೆ ಆದ್ದರಿಂದ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸುಲಭ ದೇವರ ದರ್ಶನದ ವ್ಯವಸ್ಥೆಗೆ ಮುಂದಾಗಬೇಕು.
ಹಿಂದೂ ಪಂಚಾಂಗದಲ್ಲಿ ಅಧಿಕ ಮಾಸ ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರಕ್ಕೆ ಕೊನೆಗೊಳ್ಳುತ್ತದೆ.
ಈ ವರ್ಷದ ಈ ಯಾತ್ರೆ ಮಾಡುವವರಿಗೆ ಮುಂದಿನ ಶನಿವಾರ ದಿನಾಂಕ 13 - ಜೂನ್ -2026 ಈ ಸಾಲಿನ ಅಧಿಕ ಮಾಸದ ಕೊನೆಯ ಪವಿತ್ರ ಶನಿವಾರ ಆಗಿದೆ ಇದು ಸಾಧ್ಯವಾಗದಿದ್ದರೆ #ಮುಂದಿನ_ಅಧಿಕ_ಮಾಸಕ್ಕೆ_ಮೂರು_ವರ್ಷ_ಕಾಯಬೇಕು.
ಅಧಿಕ ಮಾಸದಲ್ಲಿಯೇ ಶಾಂತೇಶ, ಕಾಂತೇಶ, ಭ್ರಾಂತೇಶ ಮಹಿಮೆ ಅಪಾರ.
ನಾವುಗಳು ಕರ್ನಾಟಕದ ಪುರಾಣ ಪ್ರಸಿದ್ಧ ಈ ಆಂಜನೇಯರ ಮೂರು ಶಕ್ತಿ ಪೀಠಗಳ ದರ್ಶನದ ಯಾತ್ರೆ ನಿನ್ನೆ ಅಧಿಕ ಮಾಸದ ಶನಿವಾರದಂದು ದಿನಾಂಕ 6- ಜೂನ್ - 2026ರಂದು ನಮ್ಮ ಊರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನಿಂದ ಬೆಳಿಗ್ಗೆ 10 ಕ್ಕೆ ಹೊರಟು ಮೂರು ಅಂಜನೇಯ ಶಕ್ತಿ ಪೀಠ ದರ್ಶನ ಯಾತ್ರೆ ಪೂರೈಸಿ ಸಂಜೆ 4ಕ್ಕೆ ಮನೆ ತಲುಪಿದೆವು
ಈ ಆಂಜನೇಯರಿಗೆ ಅಪಾರ ಭಕ್ತರ ಸಮೂಹವಿದೆ ನಮ್ಮ ರಾಜ್ಯ ಮಾತ್ರವಲ್ಲ ಪಕ್ಕದ ರಾಜ್ಯಗಳಿಂದಲೂ ಬರುತ್ತಾರೆ ಈ ವರ್ಷ ಇಲ್ಲಿಗೆ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹಿಂದಿನ ಎಲ್ಲಾ ದಾಖಲೆ ಮುರಿದಿದೆ, ಮುಂದಿನ ಶನಿವಾರ ಇನ್ನೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಶಿಕಾರಿಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿ ಕದರಮಂಡಲಗಿ ಮತ್ತು ಅಲ್ಲಿಂದ 26 ಕಿ.ಮೀ ದೂರದಲ್ಲಿ ಸಾತೇನಹಳ್ಳಿ ಇರುವುದರಿಂದ ಒಂದೇ ದಿನ ಈ ಮೂರೂ ಕ್ಷೇತ್ರಗಳನ್ನು ವಾಹನದಲ್ಲಿ ಭೇಟಿ ಮಾಡುವುದು ಸುಲಭ.
ಹಿಂದಿನ ಕಾಲದಲ್ಲಿ ಈ ಮೂರು ಕ್ಷೇತ್ರವನ್ನ ಕಾಲು ನಡಿಗೆಯಲ್ಲಿ ಒಳದಾರಿಯಲ್ಲಿ ಸುಮಾರು 45 ಕಿಲೋ ಮೀಟರ್ ನಡೆದು ಮಾಡುತ್ತಿದ್ದರಂತೆ.
ದಕ್ಷಿಣ ಭಾರತದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯ ಸ್ವಾಮಿ / ಬ್ರಾಂತೇಶ ಎಂದು ಕರೆಯುವ ಆಂಜನೇಯ ಸ್ವಾಮಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡರಗಿಯ ಆಂಜನೇಯ ಕಾಂತೇಶ ಮತ್ತು
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಳ್ಳಿಯ ಆಂಜನೇಯ ಶಾಂತೇಶರನ್ನು ಅಧಿಕ ಮಾಸದ ತಿಂಗಳಲ್ಲಿ ಸೂರ್ಯೋದಯದ ನಂತರ ಪ್ರಾರಂಬಿಸಿ ಸೂರ್ಯಾಸ್ತದ ಒಳಗೆ ದರ್ಶನ ಯಾತ್ರೆ ಮಾಡಿದರೆ ಕಾಶಿ ಯಾತ್ರೆಯಷ್ಟೇ ಪುಣ್ಯ ಪ್ರಾಪ್ತಿ ಎಂಬ ನಂಬಿಕೆ ಆಸ್ತಿಕರಲ್ಲಿದೆ.
#ಕಾಂತೇಶ_ಕದರಮಂಡಲಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ನೆಲೆಸಿದ್ದಾನೆ,ವಿಗ್ರಹದ ಕಣ್ಣುಗಳಲ್ಲಿ ಸಾಲಿಗ್ರಾಮವಿದ್ದು, ಕಾಂತಿಯುತವಾಗಿರುವುದರಿಂದ 'ಕಾಂತೇಶ' ಎಂದು ಕರೆಯಲಾಗುತ್ತದೆ ಇಲ್ಲಿ ಕನಕದಾಸರು ದೇವರ ಆರಾದಿಸಿದ ಇತಿಹಾಸ ಇದೆ.
#ಭ್ರಾಂತೇಶ_ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿದೆ ಈ ಮೂರ್ತಿಯ ನೆತ್ತಿಯ ಮೇಲೆ ಸಾಲಿಗ್ರಾಮವಿದೆ ಈ ದೇವರಿಗೆ ಬ್ರಿಟೀಷರ ಮತ್ತು ಮರಾಠರ ವಿರುದ್ದ ಹೋರಾಡಿದ ದೊಂಡಿಯಾ ವಾಘ್ ತನ್ನ ಖಡ್ಗ ಸಮರ್ಪಿಸಿದ್ದಾರೆ.
#ಶಾಂತೇಶ_ಸಾತೇನಹಳ್ಳಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿದೆ, ಈ ಮೂರ್ತಿಯ ಪಾದದಲ್ಲಿ ಸಾಲಿಗ್ರಾಮವಿದೆ.
ಕಾಂತೇಶನ ಕಣ್ಣಲ್ಲಿ, ಭ್ರಾಂತೇಶನ ನೆತ್ತಿಯಲ್ಲಿ ಮತ್ತು ಶಾಂತೇಶನ ಪಾದದಲ್ಲಿ ಅತೀ ಶ್ರೇಷ್ಠವಾದ ಸಾಲಿಗ್ರಾಮ ಸ್ಥಾಪಿಸಲಾಗಿದ್ದು, ಒಂದೇ ದಿನ ಈ ಮೂವರು ದೇವರ ದರ್ಶನ ಪಡೆದರೆ ಇಷ್ಟಾರ್ಥ ಈಡೇರುತ್ತದೆ ಎಂಬ ಪ್ರತೀತಿ ಇದೆ.
ದರ್ಶನ ಮಾಡುವಾಗ ಈ ಸಾಲಿಗ್ರಾಮಗಳನ್ನೂ ಭಕ್ತರು ಕಣ್ತುಂಬಿಕೊಳ್ಳುವುದು ಮಹತ್ವದ್ದು.
ಈ ಮೂರು ಊರುಗಳ ದೇವಾಲಯದಲ್ಲಿನ ಹನುಮನ ಮೂರ್ತಿಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ #ದೂರ್ವಾಸ, #ವಶಿಷ್ಠ ಮತ್ತು #ವ್ಯಾಸಮುನಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಕೂಡ ಇದೆ.
ಈ ಮೂವರು ಹನುಮಂತ ದೇವರುಗಳು ಅಧಿಕ ಮಾಸ ಅಥವಾ ಶ್ರಾವಣ ಮಾಸದಲ್ಲಿ ಹೆಚ್ಚಿನ ಭಕ್ತರನ್ನು ಆಕರ್ಷಿಸುತ್ತಾರೆ ಅಂತಹ ದಿನಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.
ಈ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಶನಿ ಕಾಟದಂತಹ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ಶಾಂತೇಶ, ಕಾಂತೇಶ, ಭ್ರಾಂತೇಶ ಮಹಿಮೆ ಅಪಾರ,ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡಲಗಿಯ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ದರ್ಶನ ಪಡೆದರೆ ಕಾಶಿ ಫಲಯಾತ್ರೆ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.
ಹೀಗಾಗಿ ಈ ಆಂಜನೇಯರಿಗೆ ಅಪಾರ ಭಕ್ತಸಮೂಹವಿದೆ.
#KashiYatre #kanthesha #branthesha #Shantesha #shikaripura #kadaramundaragi
#satenahalli #haveri #Maruthi #anjaneya
Comments
Post a Comment