Skip to main content

4037. ಭಾಗ -1 ಘಟ್ಟಕ್ಕೆ ವಲಸೆ ಬಂದ ಕರಾವಳಿ ಜನ

ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ...

#ಭಾಗ_1.

#ಯಾಕೆ_ಈ_ರೀತಿ_ವಲಸೆ_ಬಂದರು?....

  ಎಷ್ಟನೇ ಇಸವಿಯಿಂದ ಇದು ಪ್ರಾರಂಭವಾಯಿತು?...

  ಆ ಕಾಲದ ಪ್ರಯಾಣ ಹೇಗಿತ್ತು?...
 ವಲಸೆ ಬಂದವರ ಜೀವನ ಶೈಲಿ?...

     ಗೆಳೆಯರಾದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಕರಾವಳಿ ಭಾಗದ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ಈ ಲೇಖನ ಬರೆಯಲು ಪ್ರೇರಣೆ ಆಯಿತು, ಈ  ಲೇಖನ ದೀರ್ಘವಾಗಿರುವುದರಿಂದ ಕೆಲವು ಭಾಗಗಳಲ್ಲಿ ಪ್ರಕಟಿಸುತ್ತೇನೆ.

ಕರಾವಳಿ ಜನರ ವಲಸೆಯು ಪ್ರಮುಖವಾಗಿ ಹವಾಮಾನ ವೈಪರೀತ್ಯಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ನಗರೀಕರಣದಿಂದ ಉಂಟಾಗುತ್ತಿತ್ತು.

 ಸಾವಿರಾರು ಜನ ಈಗ ಘಟ್ಟ ವಾಸಿಗಳಾಗಿದ್ದಾರೆ ಅವರಿಗೆ ಅವರ ಕುಟುಂಬಗಳು ವಲಸೆ ಬಂದ ಕಥೆ ಮರೆತು ಹೋಗಿರಬಹುದು.

#ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ಎಂಬುದು ಕರ್ನಾಟಕದ ಸಾಮಾಜಿಕ ಮತ್ತು ಅರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅದ್ಯಾಯವಾಗಿದೆ.

  ಈ ಕರಾವಳಿ ಜನರ ವಲಸೆ ಬಗ್ಗೆ ಶಿವರಾಮ ಕಾರಂತರು ತಮ್ಮ ಕಾದಂಬರಿಯಲ್ಲಿ ದಾಖಲಿಸಿದ್ದಾರೆ ಅದು ಸಿನಿಮಾ ಕೂಡ ಆಗಿ ಪ್ರಸಿದ್ಧಿ ಪಡೆದಿತ್ತು.

   ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ #ಚೋಮನದುಡಿಯಲ್ಲಿ ಕರಾವಳಿ ಭಾಗದ ವಲಸೆಯ ಚಿತ್ರಣವು ಕೇವಲ ಭೌಗೋಳಿಕ ಸ್ಥಳಾಂತರವಾಗಿರದೆ ಅದು ಅಂದಿನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ಜಾತಿಯ ವ್ಯವಸ್ಥೆಯ ಕ್ರೂರ ಮುಖವನ್ನು ಅನಾವರಣಗೊಳಿಸುತ್ತದೆ.

  ​ಕರಾವಳಿ ಕರ್ನಾಟಕದ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಿನ್ನೆಲೆಯಲ್ಲಿ ನಡೆಯುವ ಈ ಕಾದಂಬರಿಯಲ್ಲಿ ವಲಸೆಯು ಹೇಗೆ ಅನಿವಾರ್ಯವಾಗಿತ್ತು ಮತ್ತು ಅದರ ಪರಿಣಾಮಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

 ​ಚೋಮ ಮತ್ತು ಆತನ ಕುಟುಂಬದವರು ಅಸ್ಪೃಶ್ಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಅವರಿಗೆ ಸ್ವಂತ ಭೂಮಿ ಹೊಂದುವ ಹಕ್ಕಿರುವುದಿಲ್ಲ. 

  ಸ್ಥಳೀಯ ಜಮೀನ್ದಾರ ಶಂಕರಪ್ಪನವರ ಮನೆಯಲ್ಲಿ ಸಾಲದ ಸುಳಿಗೆ ಸಿಲುಕಿ ಜೀತದಾಳಾಗಿ ದುಡಿಯುವ ಚೋಮನಿಗೆ ತನ್ನ ಕುಟುಂಬವನ್ನು ಸಲಹುವುದು ಕಷ್ಟವಾಗುತ್ತದೆ. 

  ಈ ಬಡತನ ಮತ್ತು ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ಕರಾವಳಿಯ ಜನರು ಎದುರಿಸುತ್ತಿದ್ದ ಏಕೈಕ ದಾರಿ ಎಂದರೆ ಘಟ್ಟದ ಮೇಲಿನ ಮೂಡಿಗೆರೆ, ಚಿಕ್ಕಮಗಳೂರು, ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದ  ಕಾಫಿ/ ಅಡಿಕೆತೋಟಗಳಿಗೆ ವಲಸೆ ಹೋಗುವುದು.

 ತೋಟಗಳ ಮಾಲೀಕರು ಅಥವಾ ಅವರ ಏಜೆಂಟರು /ಮೇಸ್ತ್ರಿಗಳು ಕರಾವಳಿಯ ಬಡ ದಲಿತರಿಗೆ ಮುಂಗಡ ಹಣದ ಅಡ್ವಾನ್ಸ್ ಆಮಿಷ ಒಡ್ಡುತ್ತಿದ್ದರು. 

  ಚೋಮನ ಮಕ್ಕಳಿಬ್ಬರಾದ ಚನಿಯ ಮತ್ತು ಗುರುವು ತಂದೆಯ ಸಾಲವನ್ನು ತೀರಿಸಲು ಮತ್ತು ನಾಲ್ಕು ಕಾಸು ಸಂಪಾದಿಸಲು ಘಟ್ಟದ ಮೇಲಿನ ಕಾಫಿ ತೋಟಕ್ಕೆ ವಲಸೆ ಹೋಗುತ್ತಾರೆ ಆದರೆ ಅಲ್ಲಿಯೂ ಅವರಿಗೆ ಸಿಗುವುದು ನೆಮ್ಮದಿಯ ಜೀವನವಲ್ಲ ಬದಲಿಗೆ ಮತ್ತೊಂದು ಹಂತದ ತೀವ್ರ ಶೋಷಣೆ.

  ​ಕರಾವಳಿಯ ಹವಾಮಾನಕ್ಕೆ ಒಗ್ಗಿಕೊಂಡ ಜನರಿಗೆ ಘಟ್ಟದ ಮೇಲಿನ ಮಲೆನಾಡಿನ ಚಳಿ ಮತ್ತು ಮಳೆ ತಡೆದುಕೊಳ್ಳುವುದು ಕಷ್ಟವಾಗುತ್ತಿತ್ತು. 

  ಕಾದಂಬರಿಯಲ್ಲಿ ವಲಸೆ ಹೋದ ಕರಾವಳಿಯ ಕಾರ್ಮಿಕರು ಎದುರಿಸುವ ಅತಿ ದೊಡ್ಡ ಶತ್ರು 'ಮಲೇರಿಯಾ' ಕಾಡು ಜ್ವರ, ಕಾಫಿ ತೋಟದ ಅತಿಯಾದ ದುಡಿಮೆ, ಪೌಷ್ಟಿಕಾಂಶದ ಕೊರತೆ ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದೆ ಚೋಮನ ಹಿರಿಯ ಮಗ ಚನಿಯ ಜ್ವರದಿಂದ ಅಲ್ಲೇ ಸಾವನ್ನಪ್ಪುತ್ತಾನೆ, ವಲಸೆಯು ಬಡವರ ಪಾಲಿಗೆ ಜೀವವನ್ನೇ ಬಲಿ ತೆಗೆದುಕೊಳ್ಳುವ ದುರಂತವಾಗಿ ಪರಿಣಮಿಸುತ್ತದೆ.

  ​ವಲಸೆಯು ಕೇವಲ ಪುರುಷರನ್ನಷ್ಟೇ ಅಲ್ಲದೆ ಹೆಣ್ಣುಮಕ್ಕಳನ್ನೂ ಶೋಷಣೆಗೆ ಒಳಪಡಿಸುತ್ತದೆ, ಚೋಮನ ಮಗಳು ಬೆಳ್ಳಿ ಕೂಡ ತೋಟದ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ ಅಲ್ಲಿನ ಮುಸ್ಲಿಂ ಮೇಸ್ತ್ರಿ ಹಣದ ಮತ್ತು ಕೆಲಸದ ಆಮಿಷವೊಡ್ಡಿ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಾನೆ ಇದು ಕರಾವಳಿಯ ವಲಸೆ ಕಾರ್ಮಿಕ ಹೆಣ್ಣುಮಕ್ಕಳು ಎದುರಿಸುತ್ತಿದ್ದ ಲೈಂಗಿಕ ಶೋಷಣೆಯ ಕಹಿಸತ್ಯಕ್ಕೆ ಕನ್ನಡಿಯಾಗಿದೆ.

 ​ವಲಸೆ ಹೋದ ಜಾಗದಲ್ಲಿ ಕರಾವಳಿಯ ದಲಿತರು ತಮ್ಮ ಸಾಮಾಜಿಕ ಗುರುತನ್ನು ಕಳೆದುಕೊಳ್ಳುವ ಭೀತಿಯಲ್ಲಿರುತ್ತಾರೆ, ಸ್ಥಳೀಯವಾಗಿ ಜಾತಿ ಪದ್ಧತಿಯಿಂದ ನೊಂದ ಚೋಮನ ಇನ್ನೊಬ್ಬ ಮಗ ಗುರುವ ಕಾಫಿ ತೋಟದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಾನೆ ಅಂದರೆ ವಲಸೆಯು ಕರಾವಳಿಯ ಜನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಚೌಕಟ್ಟನ್ನು ಹೇಗೆ ಬದಲಾಯಿಸಿತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

#ಚೋಮನ_ದುಡಿ ಯಲ್ಲಿ ಕರಾವಳಿ ಭಾಗದ ವಲಸೆಯು ಕೇವಲ ಒಂದು ಪ್ರಾದೇಶಿಕ ಬದಲಾವಣೆಯಲ್ಲ ಅದು ಹಸಿವು, ಸಾಲ ಮತ್ತು ಜಾತಿ ಪದ್ಧತಿಯಿಂದ ಜರ್ಜರಿತರಾದ ಕರಾವಳಿಯ ಕೆಳವರ್ಗದ ಜನರಿಗೆ ಬದುಕಿನ ಅನಿವಾರ್ಯ ಅನ್ವೇಷಣೆಯಾಗಿತ್ತು.

 ಆದರೆ ಹೋದ ಕಡೆಯೂ ಶೋಷಣೆ, ರೋಗ ಮತ್ತು ಸಾವು ಅವರನ್ನು ಬೆನ್ನಟ್ಟುತ್ತವೆ ಎಂಬುದನ್ನು ಕಾರಂತರು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

   ವಾಸ್ತವವಾಗಿ ಇದು ಕರಾವಳಿಯ ಅಸ್ಪಶ್ಯರು ಮಾತ್ರರಲ್ಲ ಇತರೆ ಹಿಂದುಳಿದ ವರ್ಗಗಳಿಗೂ ಅನ್ವಯಿಸುತ್ತದೆ ಈ ರೀತಿ ವಲಸೆ ಬಂದವರಲ್ಲಿ ಪೂಜಾರಿ - ಬಂಟರು - ಕುಲಾಲರು - ಮೊಗೇರರು - ವಿಶ್ವಕರ್ಮದವರು ಸಾಕಷ್ಟು ಸಂಖ್ಯೆಯಲ್ಲಿದ್ದರು.

#shivaramakaranth #chomanadudi #novels 
#cinema #GirishKasaravalli #coastal 
#karavali #migration

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...