ಅನ್ನದಾನದ_ಮುಂದೆ_ಅನ್ಯ_ದಾನವಿಲ್ಲ_ಸರ್ವಜ್ಞ
ಹಸಿದವರ ಹೊಟ್ಟೆ ತುಂಬಿಸುವುದೇ ಶ್ರೇಷ್ಠ ಧರ್ಮ ಮತ್ತು ಮಾನವೀಯತೆಯ ಲಕ್ಷಣ,ಆತ್ಮಶುದ್ಧಿಯಿಂದ,ಗೌರವದಿಂದ ಹಸಿದವರಿಗೆ ಅನ್ನ ಬಡಿಸಿದರೆ ಮಾತ್ರ ತಿಂದವರಿಗೆ ಆತ್ಮತೃಪ್ತಿ ಮತ್ತು ಸಂತೃಪ್ತಿ.
#ಅನ್ನ_ಬಡಿಸುವಾಗ ಅನ್ನ ಚೆಲ್ಲುವುದು ಅನ್ನಪೂರ್ಣೇಶ್ವರಿ ದೇವಿಗೆ ಮಾಡುವ ಅಪಮಾನ ಮತ್ತು ದಾರಿದ್ರ್ಯದ ಸಂಕೇತವೆಂದು ಭಾರತೀಯ ಸಂಪ್ರದಾಯದಲ್ಲಿ ನಂಬಲಾಗುತ್ತದೆ.
ಇದು ಮನೆಯಲ್ಲಿ ಆರ್ಥಿಕ ನಷ್ಟ ಅಥವಾ ಆಹಾರದ ಕೊರತೆ ಉಂಟಾಗುವ ಸೂಚನೆ ಎಂದು ಹಿರಿಯರು ಹೇಳುತ್ತಾರೆ.
ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಚೆಲ್ಲಿದ ಅನ್ನವನ್ನು ತೆಗೆದು ಕೈಮುಗಿದು ಕ್ಷಮೆ ಯಾಚಿಸುವುದು ರೂಢಿ.
ಆದರೆ ಈಗಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಮಠಗಳಲ್ಲಿ ಅನ್ನಸಂತರ್ಪಣೆಗಳು ಮಾತ್ರ ಅನೇಕ ರೀತಿಯ ಅವ್ಯವಸ್ಥೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಆಗುತ್ತಿದೆ.
#ಅತಿಥಿದೇವೋಭವ' ಎಂದರೆ ಅತಿಥಿಯನ್ನು ದೇವರಿಗೆ ಸಮಾನವಾಗಿ ಕಾಣುವುದು ತೈತ್ತಿರೀಯ ಉಪನಿಷತ್ತಿನಿಂದ ಬಂದ ಈ ಪವಿತ್ರ ಮಂತ್ರವು ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ಸತ್ಕಾರಕ್ಕೆ ನೀಡಲಾಗುವ ಅತ್ಯುನ್ನತ ಗೌರವ ಮತ್ತು ಆದ್ಯತೆಯನ್ನು ಸಾರುತ್ತದೆ.
ಈ ತತ್ವದ ಪ್ರಮುಖ ಅಂಶಗಳು ದೈವತ್ವದ ಗೌರವ,ಮನೆಗೆ ಬರುವ ಅತಿಥಿಗಳನ್ನು ಯಾವುದೇ ಭೇದಭಾವವಿಲ್ಲದೆ ದೇವರೆಂದು ಪರಿಗಣಿಸಿ ಉಪಚರಿಸುವುದು.
ಸಾಂಪ್ರದಾಯಿಕ ಮೌಲ್ಯವಾಗಿ ಕೇವಲ ಭಾರತೀಯ ಹಿಂದೂ-ಬೌದ್ಧ ತತ್ವಶಾಸ್ತ್ರವಲ್ಲದೆ ಭಾರತೀಯ ಪ್ರವಾಸೋದ್ಯಮದಲ್ಲಿ ಇದು ಭಾರತದ ಹೆಮ್ಮೆಯ ಘೋಷಣೆಯಾಗಿದೆ.
#ಸರ್ವಜ್ಞನ_ತ್ರಿಪದಿಗಳಲ್ಲಿ ಅನ್ನದಾನ ಮತ್ತು ಅನ್ನ ಬಡಿಸುವ ಬಗೆಯ ಸಾರಾಂಶ ಹೀಗಿದೆ...ಹಸಿದವರಿಗೆ ಜಾತಿ-ಭೇದ ನೋಡದೆ, ಮುಖದಲ್ಲಿ ಪ್ರೀತಿ ಮತ್ತು ನಗುವನ್ನು ಇಟ್ಟುಕೊಂಡು ಅನ್ನವನ್ನು ಬಡಿಸಬೇಕು.
ಅನ್ನಕ್ಕೆ ಮಿಗಿಲಾದ ದೇವರಿಲ್ಲ ಎಂದು ಸಾರಿದ ಸರ್ವಜ್ಞನು, ಹಸಿದವರ ಹೊಟ್ಟೆ ತುಂಬಿಸುವುದೇ ಶ್ರೇಷ್ಠ ಧರ್ಮ ಮತ್ತು ಮಾನವೀಯತೆಯ ಲಕ್ಷಣ ಎಂದು ಪ್ರತಿಪಾದಿಸಿದ್ದಾನೆ.
#ಚರಕ_ಸಂಹಿತೆಯಲ್ಲಿನ ವೈದ್ಯಕೀಯ ಹಿನ್ನೆಲೆಯ ಜೊತೆಗೆ, ಭಾರತೀಯ ಸಂಸ್ಕೃತಿಯಲ್ಲಿ ಅನ್ನ ಸಂತರ್ಪಣೆಯು ದಾನದ ಶ್ರೇಷಷ್ಠ ರೂಪವಾಗಿದೆ.
ಹಸಿದವರಿಗೆ ಅನ್ನ ನೀಡುವುದರಿಂದ ದೈಹಿಕ ತೃಪ್ತಿ ಮಾತ್ರವಲ್ಲದೆ, ಮಾನಸಿಕ ನೆಮ್ಮದಿ ಮತ್ತು ಸತ್ಫಲಗಳು ಸಿಗುತ್ತವೆ ಎಂಬುದು ನಂಬಿಕೆಯಾಗಿದೆ.
#ಅನ್ನ_ಬಡಿಸುವ_ಕ್ರಮ
ಸಾಂಪ್ರದಾಯಿಕವಾಗಿ ಮತ್ತು ಗೌರವದಿಂದ ಮತ್ತು ಮರ್ಯಾದೆಯಿಂದ ಅನ್ನ ಬಡಿಸುವ ಕ್ರಮವು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ತನ್ನದೇ ಆದ ವಿಶಿಷ್ಟ ನಿಯಮಗಳನ್ನು ಹೊಂದಿದೆ.
ಅನ್ನ ಬಡಿಸುವ ಕ್ರಮ ಮತ್ತು ನಿಯಮಗಳು:ಸ್ಥಳ ಮತ್ತು ಭಂಗಿ, ಊಟ ಬಡಿಸುವಾಗ ಬಡಿಸುವವರು ಸ್ವಚ್ಛತೆಯಿಂದ ಇರಬೇಕು. ನೆಲದ ಮೇಲೆ ಕುಳಿತು ಊಟ ಮಾಡುವವರಿಗೆ ಎಲೆಯ ಅಥವಾ ತಟ್ಟೆಯ ಎಡಭಾಗದಲ್ಲಿ ಕುಡಿಯುವ ನೀರಿನ ಲೋಟವಿರಬೇಕು.
ಊಟ ಬಡಿಸುವಾಗ ಅತಿಥಿಗಳಿಗೆ ಅಥವಾ ಹಿರಿಯರಿಗೆ ಮೊದಲು ಬಡಿಸಬೇಕು.
ಊಟದ ಎಲೆಯನ್ನು ಹಾಕಿದಾಗ ಬಡಿಸುವ ಕ್ರಮ ಎಲೆಯ ಮೇಲೆ ಮೊದಲು ಉಪ್ಪು, ಉಪ್ಪಿನಕಾಯಿ, ಕೋಸಂಬರಿ/ಸಲಾಡ್ ಬಡಿಸಬೇಕು,ನಂತರ ಪಲ್ಯ ಮತ್ತು ಬಿಸಿ ಬಿಸಿ ಅನ್ನವನ್ನು ಎಲೆಯ ಮಧ್ಯಭಾಗದಲ್ಲಿ ಬಡಿಸಬೇಕು.
ಆರಂಭದಲ್ಲಿ ಅನ್ನವನ್ನು ಸ್ವಲ್ಪ ಪ್ರಮಾಣದಲ್ಲಿ ಬಡಿಸಬೇಕು, ಅನ್ನದ ಜೊತೆಗೆ ತುಪ್ಪ ಅಥವಾ ಸಾಂಬಾರನ್ನು ಬಡಿಸಿ, ಆ ನಂತರವೇ ಇತರ ಸಿಹಿತಿಂಡಿಗಳನ್ನು ಬಡಿಸುವುದು ಸಂಪ್ರದಾಯ.
#ಬಡಿಸುವವರ_ನಡವಳಿಕೆ
ಆಹಾರ ಬಡಿಸುವ ಪರಿಚಾರಕರು ಅಥವಾ ಸೇವಕರು ಸ್ವಚ್ಛವಾದ ಉಡುಗೆಯನ್ನು ತೊಟ್ಟಿರಬೇಕು ಅವರು ಶಿಸ್ತುಬದ್ಧವಾಗಿ, ನಿಷ್ಠೆಯಿಂದ ಮತ್ತು ಪ್ರಶಾಂತ ಮನಸ್ಸಿನಿಂದ ಬಡಿಸಬೇಕು.
ಆಹಾರವನ್ನು ಹಸಿದವರ ತಟ್ಟೆಗೆ ಅಥವ ಎಲೆಗೆ ಎಸೆಯುವುದು, ಚೆಲ್ಲುವುದು ಯಾವ ಕಾರಣಕ್ಕೂ ಮಾಡಬಾರದು, ಹಸಿದವರ ಪಂಕ್ತಿಯಲ್ಲಿ ಊಟಕ್ಕೆ ಕುಳಿತವರ ಅಸಹನೆಗೆ ಜಗಳ ಕಾಯಬಾರದು.
ಊಟದ ಪಂಕ್ತಿಯಲ್ಲಿ ಅಂದು - ಬಂಧುಗಳು-ಶತೃಗಳು ಕುಳಿತಿದ್ದ ರೂ ಬಡಿಸುವವರು ರಾಗಾ- ದ್ವೇಷಗಳನ್ನ ಮರೆತು ಎಲ್ಲರೂ ಅತಿಥಿಗಳೆಂದೇ ಭಾವಿಸಿ #ಅತಿಥಿ_ದೇವೋಭವ ಎಂಬಂತೆ ಕಾಯ೯ ನಿರ್ವಹಿಸಬೇಕು.
ಅನ್ನದಾನಿಗಳ ಅಥವ ಅನ್ನದಾನದ ಸ್ಥಳದಲ್ಲಿನ ತಪ್ಪುಗಳನ್ನ ಸಮರ್ಥನೆ ಮಾಡುವ ಮೊದಲು ಇದೆಲ್ಲ ಅರಿತಿರಬೇಕು.
#guestreview #home #temple #MidDayMeal
#athithi #hungry #foodserving
Comments
Post a Comment