Skip to main content

4023. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಗೋಪಾಲಕೃಷ್ಣ ಬೇಳೂರುರವರಿಗೆ ಮಂತ್ರಿ ಸ್ಥಾನ ಸಿಗಲಿ.

ಸಾಗರನ_ವಿಧಾನಸಭಾ_ಕ್ಷೇತ್ರಕ್ಕೆ_ಮಂತ್ರಿ_ಸ್ಥಾನ_ಸಿಗಲಿ.

  ಶಾಸಕರಾದ #ಗೋಪಾಲಕೃಷ್ಣಬೇಳೂರು ನೂತನ ಮುಖ್ಯಮಂತ್ರಿ #ಡಿ_ಕೆ_ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಲಿ ಎಂದು ಹಾರೈಸುತ್ತೇನೆ.

  ನಮ್ಮ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ದೊರೆತರೆ ಈ ಮೂಲಕ ನಮ್ಮ ಸಾಗರ ವಿಧಾನ ಸಭಾ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ ಆದ್ದರಿಂದ ಯಾವುದೇ ಪಕ್ಷದ ಶಾಸಕರಾಗಿದ್ದರೂ ಅವರ ಪಕ್ಷದ ಸರ್ಕಾರದಲ್ಲಿ ಮಂತ್ರಿ ಆಗಲಿ ಎಂದು ಬಯಸುತ್ತೇನೆ.

 ನಮ್ಮ ಸಾಗರ ವಿದಾನ ಸಭಾ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಮಂತ್ರಿ - ಸ್ಪೀಕರ್ ಆಗಿದ್ದರು, ನಮ್ಮ ಆನಂದಪುರಂನವರೇ ಆಗಿದ್ದ ಬದರಿನಾರಾಯಣ ಅಯ್ಯಂಗಾರ್ ಮತ್ತು ನಮ್ಮ ತಾಲ್ಲೂಕಿನವ ರೇ ಆಗಿದ್ದ ಕೆ.ಹೆಚ್. ಶ್ರೀನಿವಾಸರು ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರೂ ಮಂತ್ರಿ ಆಗಿರಲಿಲ್ಲ ಇವರುಗಳು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆದಾಗ ಮಂತ್ರಿ ಆಗಿದ್ದು ಇತಿಹಾಸ.

ಶಿವಮೊಗ್ಗ ಜಿಲ್ಲೆಯ ಕಡಿದಾಳು ಮಂಜಪ್ಪ, ಬಂಗಾರಪ್ಪ, ಜೆ. ಹೆಚ್. ಪಟೇಲರು ಮತ್ತು ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು, ಶಿಕಾರಿಪುರದ ಯಂಕಟಪ್ಪ, ಬಸವಣ್ಯಪ್ಪ , ಕಿಮ್ಮನೆರತ್ನಾಕರ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಮತ್ತು ಮಧು ಬಂಗಾರಪ್ಪ ಮಂತ್ರಿಗಳಾಗಿದ್ದವರು.

  ನಮ್ಮ ಸಾಗರದ ಮೂವರು ಅಳಿಯಂದಿರು ತಮಕೂರಿನ ನಾಗೇಶ್, ಕಾರ್ಕಳದ ಸುನಿಲ್ ಕುಮಾರ್, ಸಾಗರ ತಾಲೂಕಿನ ಸೊಸೆ ಚಿತ್ರ ನಟಿ ಜಯಮಾಲ ಮಂತ್ರಿಗಳಾಗಿದ್ದರು
ಮತ್ತು ಈಗಿನ ಕೇರಳ ಸರ್ಕಾರದ ವಿಷ್ಣುನಾದನ್ ಮಂತ್ರಿಗಳಾಗಿದ್ದಾರೆ.

ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಗೋಪಾಲಕೃಷ್ಣ ಬೇಳೂರು ಮತ್ತು ಭದ್ರಾವತಿ ವಿದಾನ ಸಭಾ ಕ್ಷೇತ್ರದ ಸಂಗಮೇಶ್ ಅತ್ಯಂತ ಹಿರಿಯ ಶಾಸಕರು ಮತ್ತು ಮಂತ್ರಿಗಳಾಗುವ ಅರ್ಹತೆ ಅವರ ಪಕ್ಷದಲ್ಲಿ ಇವರಿಗೆ ಇದೆ.

 ಪಕ್ಷ -ಪಾರ್ಟಿಗಳು ಚುನಾವಣೆಗೆ ಮಾತ್ರ ಸೀಮಿತ ಆಗಲಿ, ದ್ವೇಷದ ರಾಜಕಾರಣ ಬದಿಗಿಟ್ಟು ನಮ್ಮ ಸಾಗರ ಕ್ಷೇತ್ರದ ಅಭಿವೃದ್ಧಿ ಪರವಾಗಿ ಯೋಚಿಸೋಣ.

   ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಮಂತ್ರಿ ಆದರೆ ನಮ್ಮ ಕ್ಷೇತ್ರದ ಅಭಿವೃದ್ದಿಗೆ ವೇಗ ದೊರೆಯುತ್ತದೆ ಆದ್ದರಿಂದ ನಾನು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನೂತನ ಸರ್ಕಾರದ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಲಿ ಎಂದು ಆಶಿಸುತ್ತೇನೆ.
 
   ಶಾಸಕರು ಮಂತ್ರಿಯಾದರೆ ಅವರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಅಭಿವೃದ್ಧಿ ಕಾಮಗಾರಿಗಳ ಜೊತೆ ಪ್ರಭಾವ ಹೆಚ್ಚುತ್ತದೆ,
ಶಾಸಕರು ಸಚಿವರಾಗುವುದರಿಂದ ಕ್ಷೇತ್ರಕ್ಕೆ ನೇರವಾಗಿ ಸಿಗುವ ಕೆಲವು ಪ್ರಮುಖ ಲಾಭಗಳಲ್ಲಿ ಹೆಚ್ಚುವರಿ ಅನುದಾನ ಕೂಡ ಒಂದು.

  ಸಚಿವರು ತಮ್ಮ ಇಲಾಖೆಯ ಬಜೆಟ್‌ನಿಂದ ವಿಶೇಷ ಅನುದಾನಗಳನ್ನು ಮತ್ತು ಸರ್ಕಾರಿ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಸುಲಭವಾಗಿ ಮಂಜೂರು ಮಾಡಿಸಿಕೊಳ್ಳಬಹುದು.

  ಅಭಿವೃದ್ಧಿ ಯೋಜನೆಗಳಲ್ಲಿ ಮುಖ್ಯವಾಗಿ ರಸ್ತೆ, ನೀರಾವರಿ, ಆಸ್ಪತ್ರೆ ಮತ್ತು ಬೃಹತ್ ಕೈಗಾರಿಕೆಗಳಂತಹ ದೊಡ್ಡ ಯೋಜನೆಗಳು ಕ್ಷೇತ್ರದ ಪಾಲಾಗುತ್ತವೆ.

   ಮಂತ್ರಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಾರೆ, ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ಮೇಲೆ ಸಚಿವರಿಗೆ ನೇರ ನಿಯಂತ್ರಣ ಇರುವುದರಿಂದ ಕೆಲಸಗಳು ವೇಗವಾಗಿ ಮತ್ತು ಸುಲಭವಾಗಿ ನಡೆಯುತ್ತವೆ.

  ಶಾಸಕರು ಮಂತ್ರಿಯಾದರೆ (ಒಬ್ಬ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದರೆ) ಅವರ ಜವಾಬ್ದಾರಿಗಳು, ಅಧಿಕಾರ ಮತ್ತು ಕರ್ತವ್ಯಗಳಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. 

  ಇದರ ಪ್ರಮುಖ ಅಂಶಗಳು ಹೆಚ್ಚುವರಿ ಜವಾಬ್ದಾರಿ ಮತ್ತು ಅಧಿಕಾರ ​ಕ್ಷೇತ್ರದ ಜೊತೆಗೆ ರಾಜ್ಯದ ಹೊಣೆ.

  ಶಾಸಕರಾಗಿದ್ದಾಗ ಕೇವಲ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕಿರುತ್ತದೆ ಆದರೆ ಮಂತ್ರಿಯಾದ ತಕ್ಷಣ ಅವರಿಗೆ ವಹಿಸಲಾದ ಇಲಾಖೆಯ ಮೂಲಕ ಇಡೀ ರಾಜ್ಯದ ಜವಾಬ್ದಾರಿ ಅವರ ಹೆಗಲಿಗೆ ಬೀಳುತ್ತದೆ.

​ನೀತಿ ನಿಯಮಗಳ ರಚನೆ ಜೊತೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಕಾನೂನುಗಳು, ಯೋಜನೆಗಳು ಮತ್ತು ನೀತಿಗಳನ್ನು ರೂಪಿಸುವ ಮಹತ್ವದ ಅಧಿಕಾರ ಅವರಿಗೆ ಸಿಗುತ್ತದೆ.

​  ಸಚಿವ ಸಂಪುಟದ ಸದಸ್ಯತ್ವದಿಂದ  ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಗಳಲ್ಲಿ ಭಾಗವಹಿಸುವ ಹಕ್ಕು ಸಿಗುತ್ತದೆ.

  ​ರಾಜ್ಯದ ಪ್ರಮುಖ ನಿರ್ಧಾರಗಳು, ಬಜೆಟ್ ಹಂಚಿಕೆ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸುತ್ತಾರೆ.

​ಇಲಾಖೆಯ ಮೇಲ್ವಿಚಾರಣೆ ಮತ್ತು ಆಡಳಿತ ​ತಮಗೆ ನೀಡಲಾದ ಇಲಾಖೆಯ ಐಎಎಸ್  ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಮಂತ್ರಿಗಳಿಗಿರುತ್ತದೆ.

​ಇಲಾಖೆಯ ಹಣಕಾಸು ವೆಚ್ಚಗಳು ಮತ್ತು ಯೋಜನೆಗಳ ಅನುಷ್ಠಾನದ ಸಂಪೂರ್ಣ ಹೊಣೆಗಾರಿಕೆ ಇವರದ್ದಾಗಿರುತ್ತದೆ.

​  ​ಒಟ್ಟಾರೆಯಾಗಿ ಹೇಳುವುದಾದರೆ, ಶಾಸಕರು ಮಂತ್ರಿಯಾದರೆ ಅವರ ಅಧಿಕಾರ ಮತ್ತು ಗೌರವ ಹೆಚ್ಚುತ್ತದೆ ಜೊತೆಗೆ ಇಡೀ ರಾಜ್ಯದ ಜನರಿಗೆಉತ್ತರದಾಯಿಯಾಗಿರಬೇಕಾದ ಜವಾಬ್ದಾರಿಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.

   ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಮೂರು ಅವದಿಗೆ ಶಾಸಕರಾಗಿ ಅನುಭವ ಹೊಂದಿರುವ ಹಿರಿಯ ಶಾಸಕರಾಗಿದ್ದಾರೆ, ಇವರ ಒಂದು ಆಡಳಿತದ ವಿಶೇಷ ಅಂದರೆ  ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಕ್ಷೇತ್ರದ ಅಭಿವೃದ್ಧಿಯ ಆಡಳಿತ ಇವರದ್ದು ಇದು ನನಗೆ ಹೆಚ್ಚು ಇಷ್ಟವಾಯಿತು.
  
    ನಾನು ಸಾಗರ ವಿಧಾನಸಭಾ ಕ್ಷೇತ್ರದವನಾಗಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಗೋಪಾಲಕೃಷ್ಣ ಬೇಳೂರು ಮಂತ್ರಿ ಆಗಲಿ ಎಂದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...