Skip to main content

Posts

Showing posts with the label Aravind Chokkadi book ILLADA THIRHAHALLI Very sensational stoya about his father

Blog number 1318. ನನ್ನ ಮನಸ್ಸಲ್ಲಿ ಹೆಚ್ಚು ಕಾಡುವ ಈ ಪುಸ್ತಕ ಖ್ಯಾತ ಲೇಖಕ ಅರವಿಂದ ಚೊಕ್ಕಾಡಿ ಅವರು ಅವರ ತಂದೆಯನ್ನು ಕೇಂದ್ರವಾಗಿಸಿ ಬರೆದ "ಇಲ್ಲದ ತೀರದಲ್ಲಿ" ಸಂವೇದನೆಯ ಸಂವಾದ

#ಮತ್ತೆ_ಮತ್ತೆ_ಮನಸ್ಸನ್ನು_ತಲ್ಲಣಿಸುವ_ಪುಸ್ತಕ #ಅರವಿಂದಚೊಕ್ಕಾಡಿಯವರಇಲ್ಲದತೀರದಲ್ಲಿಕೃತಿ  ಇವರ ಅಜ್ಜನಿಗೆ ಹುಟ್ಟಿನಿ೦ದ ಬ್ರಾಹ್ಮಣಿಕೆ ಬರುತ್ತೆ ಎಂಬ ನಂಬಿಕೆ, ಇವರ ತಂದೆಗೆ ಕಮ೯ದಿOದ ಬರುತ್ತೆ ಎಂಬ ನಂಬಿಕೆ, ಇವರಿಗೆ ಒಳ್ಳೆಯ ಮನುಷ್ಯನಾಗಿ ಬದುಕಲು ಜಾತಿ ಆಗತ್ಯವಿಲ್ಲ ಎಂಬ ನಂಬಿಕೆ.   "ಇಲ್ಲದ ತೀರದಲ್ಲಿ"ಕೃತಿ ಕನಾ೯ಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಪಡೆದ ಕೃತಿ, ಇವರ ತಂದೆ ಬದುಕಿನೊಂದಿಗಿನ ಸಂವಾದ ಈ ಪುಸ್ತಕ, ಈ ಪುಸ್ತಕ ಖರೀದಿಸಲು ಆಸಕ್ತಿ ಇದೆ ಅಂದಾಗ ಅರವಿ೦ದವರು ನಾಕಾರು ಪ್ರತಿ ತಮ್ಮ ಹತ್ತಿರ ಇದೆ, ಹಣ ಪಡೆಯುವುದಿಲ್ಲ ವಿಳಾಸ ಕಳಿಸಿ ಕಳಿಸುತ್ತೇನೆ ಅಂದಿದ್ದರು.   ಪೇಸ್ ಬುಕ್ನಲ್ಲಿ ಗೆಳೆಯರಾದ ಅರವಿಂದ ಚೊಕ್ಕಾಡಿಯವರು ಸಾಹಿತಿಗಳು, ವಾಗ್ಮಿಗಳು, ತರಬೇತಿದಾರರು. ಇವರ ತಕ೯ ಬದ್ದ ಚಚೆ೯ಗಳು ನನಗಿಷ್ಟ.   ಪುಸ್ತಕ ಕಳಿಸುವಾಗ ಈ ಪುಸ್ತಕ ಓದಿ ವಿಮಷೆ೯ ಮಾಡಬೇಕಾಗಿಲ್ಲ, ಓದದೇ ಇದ್ದರೂ ನನಗೆ ಬೇಸರ ಇಲ್ಲ, ಓದಲಿಲ್ಲ ಅಂತ ನಾಚಿಕೆ ಮಾಡಿಕೊಳ್ಳಬೇಕಾಗಿಯೂ ಇಲ್ಲ ಎಂಬ ಅಥ೯ದಲ್ಲಿ ಬರೆದಿದ್ದರು.  ಇಡೀ ಪುಸ್ತಕ ಪ್ರತಿಯೊಬ್ಬನ ಜೀವನದ ಒಂದಲ್ಲ ಒಂದು ಘಟನೆಯ ತಳುಕಿದೆ ಆದರೆ ಇಡೀ ಜೀವನದ ಘಟನೆಗಳನ್ನ ತಕ೯ ಬದ್ದವಾಗಿ ಇದ್ದದ್ದು ಇದ್ದ೦ತೆ ಕಪ್ಪು ಬಿಳುಪಿನಲ್ಲಿ ಇವರ ರೀತಿ ಬರೆಯುವ ಕ್ರಮ, ದೈಯ೯ ಮತ್ತು ನೇರವ೦ತಿಕೆ ಎಲ್ಲರಲ್ಲೂ ಇರಲು ಸಾಧ್ಯವಿಲ್ಲ.   "ಅಪ್ಪ ಅಮ್ಮ ನಮಗೆ ಯಾವ ಸಂಪತ್ತನ್ನು...