Skip to main content

Posts

Showing posts with the label JP visited Kagodu Horatada ruvari H.Ganapathiyappa at Sagar jail

Blog number 1400. ಜಯಪ್ರಕಾಶ್ ನಾರಾಯಣ್ ಸಾಗರದ ಜೈಲಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರಿಗೆ ಹುರಿದುಂಬಿಸಿ ಹಾರೈಸಿದ್ದರು.

#ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪ #ಭಾರತೀಯ_ರೈತ_ನಾಯಕ #ನೆನಪು_2   21- ಸೆಪ್ಟೆಂಬರ್ -1951ರಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಕಾಗೋಡು ಸತ್ಯಾಗ್ರಹಕ್ಕೆ ಬೆಂಬಲಿಸಲು ಬರುತ್ತಾರೆ, ಅವರ ಜೊತೆ ಅವರ ದಮ೯ಪತ್ನಿ ಶ್ರೀಮತಿ ಪ್ರಭಾವತಿ ದೇವಿ, ಜನ ನಾಯಕ ಜಾಜ್೯ ಪನಾ೯೦ಡೀಸ್ ಮತ್ತು ಸಮಾಜವಾದಿ ದುರೀಣ ಜಿ.ಸದಾಶಿವ ರಾಯರು ಒಂದಾಗಿ ಬರುತ್ತಾರೆ.   ಲೋಹಿಯಾರು ಬಂದು ಮೂರು ತಿಂಗಳ ನಂತರ ಇವರ ಬೇಟಿ ಇದಾಗಿರುತ್ತದೆ.   ಸಾಗರಕ್ಕೆ ಬಂದವರೇ ನೇರವಾಗಿ ಸಾಗರದ ಜೈಲಿನಲ್ಲಿ ಇದ್ದ ಗಣಪತಿಯಪ್ಪರನ್ನು ಬೇಟಿಯಾಗಲು ದೌಡಾಯಿಸುತ್ತಾರೆ, ಇವರು ಜೈಲಿಗೆ ಬೇಟಿ ನೀಡುವ ಸುದ್ದಿಯನ್ನು ಜೈಲಿನಲ್ಲಿದ್ದ ಸತ್ಯಾಗ್ರಹಿಗಳಿಗೆ ಮೊದಲೇ ತಿಳಿಸಲಾಗಿರುತ್ತದೆ.   ಸಾಗರದ ಜೈಲಿನ ಬಾಗಿಲಿಗೆ ಬಂದವರೇ ಜೈಲಿನ ಕಾವಲುಗಾರ ಸಿಬ್ಬಂದಿಗೆ "ಕಿಸಾನ್ ನೇತಾರ ಕಹಾಃ ಹೈ?" ಎನ್ನುತ್ತಾ ಒಳಗೆ ಬರುತ್ತಾರೆ, ಜೈಲಿನ ಒಳಗಡೆ ಇದ್ದ ಸತ್ಯಾಗ್ರಹಿ ಬಂಧಿಗಳೆಲ್ಲ ಸಾಲಾಗಿ ಅವರಿಗೆ ಗೌರವ ಸೂಚಿಸುತ್ತಾರೆ.   " ಜಯಪ್ರಕಾಶ್ ನಾರಾಯಣ್ ಜಿಂದಾಬಾದ್ "   " ಪ್ರಭಾವತಿ ದೇವಿ ಜಿಂದಾಬಾದ್" ಎಂದು ಘೋಷಣೆ ಹಾಕುತ್ತಾರೆ, ರೈತ ಸತ್ಯಾಗ್ರಹಿಗಳು ಇವರೇ ನಮ್ಮ ನಾಯಕ #ಗಣಪತಿಯಪ್ಪ ಎಂದು ಪರಿಚಯಿಸುತ್ತಾರೆ.     ಕೂಡಲೇ ಜೆ ಪಿ ಯವರು ತಮ್ಮ ಎರಡೂ ಬಾಹುಗಳಿಂದ ಗಣಪತಿಯಪ್ಪನವರನ್ನು ತಬ್ಬಿಕೊಂಡು "ನಿಮ್ಮ ಹೋರಾಟದ ವಿಷಯ ಇಡೀ ರಾಷ...