Blog number 1858. ಒಂದು ಕಾಲದ ಶರಾವತಿ ನದಿ ದಂಡೆಯಿಂದ ವರದಾ ನದಿ ದಂಡೆಗೆ ಸಂಚರಿಸುತ್ತಿದ್ದ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ಪುತ್ರ ಸಾಗರದ ಪ್ರಖ್ಯಾತ ಉಡುಪಿ ಮೆಡಿಕಲ್ಸ್ ಚಂದ್ರಶೇಖರ್ ರ ನೂತನ ಮನೆ ಅಪ್ಪಯ್ಯ ಗೃಹ ಪ್ರವೇಶ.
#ಶ್ರೀ_ವರದಾ_ಮೋಟಾರ್_ಸರ್ವಿಸ್ #ಶರಾವತಿ_ನದಿಗೂ_ವರದಾ_ನದಿಗೂ_ಸಂಪರ್ಕಿಸಿದ_ಮೊದಲ_ಖಾಸಾಗಿ_ಬಸ್ #ಮಾಲಿಕರಾದ_ಮುತ್ತಣ್ಣ_ನಾಗಪ್ಪಣ್ಣ #ನಾಗಪ್ಪಣ್ಣರ_ಪುತ್ರರೇ_ಸಾಗರದ_ಪ್ರಖ್ಯಾತ_ಉಡುಪಿ_ಮೆಡಿಕಲ್ಸ್_ಚಂದ್ರಶೇಖರ್ #ಇವರ_ತಾಯಿಯ_ಸಹೋದರ_ತುಪ್ಪೂರಿನ_ಅಂತಣ್ಣ_ನಾಯಕರು #ಚಂದ್ರು_ನೂತನ_ಮನೆಗೆ_ಅಪ್ಪಯ್ಯ_ಎಂಬ_ನಾಮಾಂಕಿತ_ಗೃಹ_ಪ್ರವೇಶ #ಈ_ಮೂಲಕ_ವರದಾ_ಬಸ್ಸು_ನಾಗಪ್ಪಣ್ಣ_ಮುತ್ತಣ್ಣರ_ನೆನಪುಗಳು. ಮೊನ್ನೆ ತಡವಾಗಿ ಆಫೀಸಿಗೆ ತಲುಪಿದಾಗ ಸಾಗರದ ಪ್ರಖ್ಯಾತ #ಉಡುಪಿ_ಮೆಡಿಕಲ್_ಸ್ಟೋರ್ಸ್ ಮಾಲಿಕ ಚಂದ್ರಶೇಖರ್ ನೂತನವಾಗಿ ನಿರ್ಮಿಸಿರುವ ಅವರ ಮನೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ತಲುಪಿತು. ಚಂದ್ರು ತಮ್ಮ ನೂತನ ಮನೆಗೆ #ಅಪ್ಪಯ್ಯ ಅಂತ ನಾಮಕರಣ ಮಾಡಿದ್ದಾರೆ ಕಳೆದ ತಿಂಗಳು ಶರಾವತಿ ಮುಳುಗಡೆ ಪ್ರದೇಶದ ಕರೂರಿನ ಜಿ.ಟಿ. ಸತ್ಯನಾರಾಯಣ್ ಅವರ ತಂದೆ ಪೇಟೆ ತಿಮ್ಮಣ್ಣರ ಆತ್ಮ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿದ್ದರು ಆ ಪುಸ್ತಕದ ಶಿರೋನಾಮೆ ಕೂಡ #ಅಪ್ಪಯ್ಯ ಹಾಗಾಗಿ ಇಲ್ಲಿ ಚಂದ್ರು ಅಪ್ಪಯ್ಯ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ನೆನಪುಗಳನ್ನು ದಾಖಲಿಸಿದ್ದೇನೆ. 70 ರ ದಶಕದಲ್ಲಿ ಶರಾವತಿ ನದಿಗೆ ಆಣೆಕಟ್ಟು ನಿರ್ಮಾಣದಿಂದ ಕರೂರು ಬಾರಂಗಿ ಹೋಬಳಿಗೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು ಆಗಿನ ಏಕ ಮಾತ್ರ ಸಣ್ಣ ಬಾರ್ಜ್ ನಿಂದ ಜನ ಸಂಚರಿಸುತ್ತಿದ್ದ ಕಾಲ, ಆಗ ಸಾಗರದಿಂದ ಮೊದಲ ...