ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕರ ದುರ೦ತ ಪ್ರೇಮ ಕಥೆಯ ಸ್ಮಾರಕ ಚಂಪಕ ಸರಸ್ಸು ವಿಗೆ ಕೆಳದಿ ರಾಜವಂಶಸ್ಥರಾದ ಚಂದ್ರಕಾಂತ ಸಂಗ ನಾಯ್ಕ ದಂಪತಿಗಳು ಮತ್ತು ಕೆಳದಿ ಇತಿಹಾಸ ಸಂಶೋದಕ ಗುಂಡಾಜೋಯಿಸರ ಬೇಟಿ, ಸ್ಥಳಿಯ ಇತಿಹಾಸ ನಿರ್ಲಕ್ಷಿಸಿ ಇತಿಹಾಸ ತಿರುಚ ಬಾರದಾಗಿ ಕರೆ ನೀಡಿದ್ದಾರೆ
#ಆನಂದಪುರಂನ_ಚಂಪಕ_ಸರಸ್ಸು_ಪುನಶ್ಚೇತನ. #ಕಳೆದ_ವಾರ_ವಿಶೇಷ_ಅತಿಥಿಗಳ_ಆಗಮನ #ಕೆಳದಿ_ಇತಿಹಾಸ_ಸಂಶೋದಕರಾದ_ಗುಂಡಾಜೋಯಿಸರಿಂದ_ಚಂಪಕ_ಸರಸ್ಸು_ಫುನಶ್ಚೇದನ_ಕಾರ್ಯ_ವೀಕ್ಷಣೆ. #ಕೆಳದಿ_ರಾಜ_ವಂಶಸ್ಥರಾದ_ಚಂದ್ರಕಾಂತ_ಸಂಗನಾಯಕ_ದಂಪತಿಗಳಿಂದ_ಚಂಪಕ_ಸರಸ್ಸು_ವೀಕ್ಷಣೆ #ಇತಿಹಾಸ_ಪರಂಪರೆ_ಉಳಿಸಿ_ಟ್ರಸ್ಟ್ #ಆನಂದಪುರಂ_ಸಾಹಿತ್ಯ_ಪರಿಷತ್_ಘಟಕ #ಆನಂದಪುರಂ_ಪತ್ರಕರ್ತರ_ಕೂಟ #ಆನಂದಪುರಂ_ಈಜು_ಬಳಗದ_ಪರಿಶ್ರಮ_ಶ್ಲಾಘನೀಯ 2024ಕ್ಕೆ ಚಂಪಕ ಸರಸ್ಸು ಸ್ಮಾರಕಕ್ಕೆ 400 ನೇ ವಷಾ೯ಚಾರಣೆ (ನಾಲ್ಕು ಶತಮಾನ) ಬಹುಶಃ ಈ ನಾಲ್ಕುನೂರು ವರ್ಷ ಈ ಸ್ಮಾರಕ ಹೊರ ಪ್ರಪಂಚಕ್ಕೆ ತೆರೆದುಕೊಳ್ಳದೇ ಅಜ್ಞಾತವಾಗಿತ್ತು ಮತ್ತು ಸೂಸೈಡ್ ಪಾಯಿಂಟ್ ಎಂಬ ಭಯ ಹುಟ್ಟಿಸುವ ಸ್ಥಳವಾಗಿತ್ತು. ಇದಕ್ಕೆ ಕಾರಣ ಕೆಳದಿ ರಾಜ ವೆಂಕಟಪ್ಪ ನಾಯಕ ಬೆಸ್ತರ ಕುಲದ ಸುಂದರಿ ಚಂಪಕಾಳ ಮನಮೋಹಕ ರಂಗೋಲಿಗೆ ಮನಸೋತು ವಿವಾಹ ಆಗಿದ್ದು ಈ ಅಂತರ್ಜಾತಿ ವಿವಾಹ ವಿರೋದಿಸಿದ ಪಟ್ಟದ ರಾಣಿ ಭದ್ರಮ್ಮಾಜಿ ಅನ್ನಹಾರ ತ್ಯಜಿಸಿ ಜೀವ ತ್ಯಾಗ ಮಾಡಿದ್ದು ಇದರಿಂದ ಕೆಳದಿ ರಾಜ್ಯದಲ್ಲಿ ಚಂಪಕ ಮಾಯಾವಿ ಅನ್ಯ ಆಹಾರ ಸುರಾಪಾನ ಮಾಡುತ್ತಾಳೆ೦ಬ ಸುಳ್ಳು ಸುದ್ದಿ ಹರಡಿ ಪ್ರಜೆಗಳು ರಾಜ ವೆಂಕಟಪ್ಪ ನಾಯಕರನ್ನು ಖಳನಾಯಕರಂತೆ ಬಾವಿಸಿದ್ದರಿಂದ ನೊಂದ ಚಂಪಕ ವಜ್ರದ ಪುಡಿ ಮಿಶ್ರಿತ ಹಾಲು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ತನ್ನ ಪ್ರೀತಿಯ ಪತ್ನಿ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಈ...