Blog number 1092. ಗೋರಕ್ ಪುರದ ನಾಥಪಂತದ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಸೇರಿದ ಕುಂದಾಪುರ ತಾಲ್ಲೂಕಿನ ಕಮಲಶಿಲೆ ಸಮೀಪದ ಯಡಮೊಗೆಯ ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವರಿ ಮಠದ ಶ್ರೀ ಫೀರ್ ಯೋಗಿ ಜಗದೀಶ್ ನಾಥಜೀ ನನ್ನ ಸಂಸ್ಥೆಗೆ ಬೇಟಿ ನೀಡಿದಾಗ
ಬಾರ ಪಂತ್ ಗೆ (ನಾಥ ಪoತದ) ಸೇರಿದ ಉಡುಪಿ ಜಿಲ್ಲೆಯ ಹಲವಾರಿ ಮಠದ ಶ್ರೀ ಜಗದೀಶ್ ಸ್ವಾಮಿಜಿ . 2017ರಲ್ಲಿ ನಾಸಿಕ್ ನಿ೦ದ ನಡೆದು ಬಂದ 630 ಸನ್ಯಾಸಿಗಳ ಬಾರ ಪಂತ್ ಯಾತ್ರೆ ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಕಮಲಶಿಲೆ ಹತ್ತಿರದ 5000ಕ್ಕೂ ಹೆಚ್ಚು ವಷ೯ದ ಇತಿಹಾಸ ಪ್ರಸಿದ್ದ ಹಲವಾರಿ ಮಠಕ್ಕೆ ಶ್ರೀ ಜಗದೀಶ್ ಸ್ವಾಮಿಜಿಯವರನ್ನ ಮಠದ ಅಧಿಪತಿ ಆಗಿ ನಿಯಮಿಸಿದ್ದಾರೆ. ಈ ಮಠದಲ್ಲಿ 34 ವಷ೯ ದೀಘ೯ ಅವದಿಗೆ ಸ್ವಾಮಿಗಳಾಗಿದ್ದ ಶ್ರೀ ಸೋಮನಾಥ ಪೀರ್ ಸ್ವಾಮಿಜಿ ಬಾರ ಪಂತ್ ಬರುವ 2 ವಷ೯ ಮೊದಲೇ ಇಹಲೋಕ ತ್ಯಜಿಸಿದ್ದರು. ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆದಿತ್ಯನಾಥರು ಗೋರಕ್ ಪುರದ ಸಂತರು ಇವರಿಗೆ ಮುಖ್ಯಸ್ಥರು. ಹಿಂದಿನ ಸೋಮನಾಥ ಪೀರ್ ಸ್ವಾಮಿಗಳು ನನ್ನ ಗುರುಗಳು, ಇವತ್ತು ಅವರ ಕೃಪಕಟಾಕ್ಷ ನನ್ನ ಮೇಲಿದೆ ಅಂತಹ ಅನೇಕ ಆಗೋಚರ ಅನುಭವ ನನ್ನ ಮೇಲೆ ಆಗುತ್ತಿರುತ್ತದೆ. ಜಗದೀಶ್ ಸ್ವಾಮಿಗಳು ಆದಿಚುಂಚನ ಗಿರಿ ಸ್ವಾಮಿಜಿಗಳ ಆಮಂತ್ರಣದ ಮೇರೆಗೆ ಆದಿಚುಂಚನಗಿರಿಯ ಕಾಲ ಬೈರವೇಶ್ವರ ಸನ್ನಿದಿಗೆ ಹೋಗುವ ಮಾಗ೯ದಲ್ಲಿ ನಮ್ಮ ನೂತನ ಲಾಡ್ಜ್ ಕಚೇರಿಗೆ ಆಗಮಿಸಿದ್ದರು. ಸೋಮನಾಥ ಪೀರ್ ಸ್ವಾಮಿಗಳು ಇದ್ದಾಗ ಕುಂದಾಪುರದಿಂದ ಬರುವಾಗ ಒಂದು ರಾತ್ರಿ ನಾನು ಹಲವಾರಿ ಮಠಕ್ಕೆ ಹೋದಾಗ ಇದೇ ಜಗದೀಶ್ ಸ್ವಾಮಿಜಿ ...