Skip to main content

Posts

Showing posts with the label Dondiya Wagh History should be join in Keladi kings history

Blog number 2236. ಕೆಳದಿ ಸಾಮ್ರಾಜ್ಯದ ವೀರ ದೊಂಡಿಯಾ ವಾಘ್ ಕೆಳದಿ ಸಾಮ್ರಾಜ್ಯದ ಇತಿಹಾಸದಲ್ಲಿ ಸೇರಬೇಕು

#ದೊಂಡಿಯಾ_ವಾಘ್_ಭಾಗ_1 #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತ #ಚೆನ್ನಗಿರಿಯ_ವೀರ_ಸೇನಾನಿ #ಶಿಕಾರಿಪುರದ_ಕಾಡಿನಲ್ಲಿ_ಸ್ಥಳೀಯ_ಬಂಜಾರ_ಜನರಿಂದ #ಶಶ್ರೂಸೆ_ಸಹಕಾರ_ಪಡೆದು_ಶಿಕಾರಿಪುರದ #ಪುರದೈವ_ಹುಚ್ಚರಾಯ_ಸ್ವಾಮಿಗೆ_ತನ್ನ_ವೀರಕತ್ತಿ_ಅರ್ಪಿಸುವ_ದೊಂಡಿಯಾ_ವಾಘ್ #ವಿಜಯದಶಮಿಯಲ್ಲಿ_ತಾಲ್ಲೂಕು_ದಂಡಾದಿಕಾರಿ_ಈ_ಕತ್ತಿಯಿಂದ_ಬನ್ನಿಯ_ಬಾಳೆಕಂದು_ಕಡಿಯುತ್ತಾರೆ.    ಧೊಂಡಿಯ ಚೆನ್ನಗಿರಿಯಲ್ಲಿ ೧೮ನೇ ಶತಮಾನದ ಉತ್ತರ ಭಾಗದಲ್ಲಿ ಹುಟ್ಟಿದ. ಮರಾಠಿ ಪವಾರ್ ಪಂಗಡದ ಒಂದು ಸಾಮಾನ್ಯ ಪರಿವಾರದಲ್ಲಿ ಅಥವ ಬಂಜಾರ ಸಮಾಜದಲ್ಲಿ ಇವರ ಜನನ.     ಆ ಕಾಲ ಘಟ್ಟದಲ್ಲಿ ಚೆನ್ನಗಿರಿಯು ಕೆಳದಿಯ ಸಂಸ್ಥಾನದ ಅಡತಕ್ಕೆ ಒಳಪಟ್ಟಿತ್ತು.     ಧೊಂಡಿಯ ಕೆಳದಿಯ ಚೆನ್ನಮ್ಮನ ಕಥೆಗಳನ್ನು ಕೇಳುತ್ತಾ ಬೆಳದವನು,ಗುರು ಸಿದ್ದಪ್ಪ ಶೆಟ್ಟರ ಗರಡಿಯಲ್ಲಿ ಅಶ್ವಾರೋಹಣ, ಕತ್ತಿ ವರಸೆ, ಮಲ್ಲಯುದ್ಧಗಳ ಅಭ್ಯಾಸವನ್ನು ಮಾಡಿ ಇಡೀ ಚೆನ್ನಗಿರಿ ಸೀಮೆಗೆ ಉದಯೋನ್ಮುಖ ಯೋಧನೆನಿಸಿಕೊಂಡಿದ್ದ.  ಆ ಸಮಯದಲ್ಲಿ ಕೆಳದಿಯ ರಾಜಮನೆತನದಲ್ಲಿ ಅಂತಃಕಲಹಗಳು ಏರ್ಪಟ್ಟಿತ್ತು. ಇವೆಲ್ಲದರ ನಡುವೆ ಎತ್ತರದ ನಿಲುವಿನ, ಶಕ್ತಿಶಾಲಿ, ಯುವ ಪ್ರಭಾವಿ ವ್ಯಕ್ತಿತ್ವದ ಧೊಂಡಿಯನಿಗೆ ಕೆಳದಿಯ ಸಂಸ್ಥಾನದ ಸೈನ್ಯ ಸೇರಲು ಊರಿನ ಜನ ಹುರಿದುಂಬಿಸಿದರು.    ಧೊಂಡಿಯ ಕೆಳದಿಯ ಸಂಸ್ಥಾನದ ಭಾಗವಾಗಿದ್ದ ಶಿಕಾರಿಪುರದಲ್ಲಿ ಒಬ್ಬ ಕರಣಿಕರಿಗೆ ಸಹಾಯಕನ...