Blog number 1064. ರವಿ ಬೆಳೆಗೆರೆ ಅಸ್ತಂಗತರಾಗಿದ್ದಾರೆ ಆದರೆ ಅವರು ಪತ್ರಿಕೊದ್ಯಮ, ಟೆಲಿವಿಷನ್ ಮಾಧ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಮಾಡಿರುವ ಸಾದನೆ ಅಸಮಾನ್ಯ, ಅವರ ಅಭಿಮಾನಿ ಆಗಿ ಅವರಿಗೆ ಅತಿಥ್ಯ ನೀಡುವ ಕೆಲವು ಅವಕಾಶ ನನಗೆ ದೊರಕಿತ್ತು ಎಂಬುದು ಜೀವಮಾನ ಪೂರ್ತಿ ನೆನಪಿನಲ್ಲಿ ಉಳಿಯುವುದು.
ರವಿಬೆಳೆಗೆರೆ_ಹಾಯ್_ಬೆಂಗಳೂರು #ರವಿ ಬೆಳೆಗೆರೆ ಅಸ್ತoಗತರಾಗಿ ಇವತ್ತಿಗೆ ಎರೆಡು ವರ್ಷ. ಅವತ್ತು ಅಂದರೆ 2020ರ ನವೆಂಬರ್ 13ರ ಮಧ್ಯ ರಾತ್ರಿ ಪ್ರಜಾವಾಣಿ ವಿಭಾಗೀಯ ಪ್ರಸರಾಣಾಧಿಕಾರಿ ಸಂಗಣ್ಣ ಪ್ರಕಾಶ್ ವಾಟ್ಸ್ ಪ್ ನಲ್ಲಿ ರವಿ ಬೆಳೆಗೆರೆ ಅಸ್ತಂಗತ ಅಂತ ಸುದ್ದಿ ಕಳಿಸಿದ್ದು ನೋಡಿ ನನ್ನ ಮನಸ್ಸು ಸೂತಕದ ಮನೆ ಅಂತಾಯಿತು. ಮೊದಲ ಪ್ರತಿ ಹಾಯ್ ಬೆಂಗಳೂರಿಂದ ಇವತ್ತಿನ ಸಾವಿರದ ಇನ್ನೂರು ದಾಟಿದ ಪ್ರತಿ ಪತ್ರಿಕೆ, ಅವರು ಬರೆದ ಅನುವಾದಿಸಿದ ಎಲ್ಲಾ ಪುಸ್ತಕ ಓದಿದ್ದೇನೆ. ನನ್ನ ಜೀವನದ ಎಲ್ಲಾ ಏಳು ಬೀಳಿನಲ್ಲಿ ರವಿ ಬೆಳೆಗೆರೆಯ ಬರಹಗಳು ಅವರ ಜೀವನದ ಅನುಭವ ನನಗೆ ವಿಪರೀತ ಪ್ರಭಾವ ಉಂಟು ಮಾಡಿತ್ತು. ಇವರ ನನ್ನ ಮೊದಲ ಬೇಟಿ ಹೇಗಾಯಿತೆ೦ದರೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕೋಟ್ಯಾಂತರ ರೂಪಾಯಿ ಹಣ ಕಳಪೆ ಔಷದಿ ಖರೀದಿಸಿ ಲಕ್ಷಾಂತರ ರೂಪಾಯಿ ಹೊಡೆದು ತಿಂದ ಕಥೆ ಅವತ್ತಿನ ಜಿಲ್ಲಾ ಸಜ೯ನ್ ರಹಸ್ಯವಾಗಿ ತಿಳಿಸಿದ್ದನ್ನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಿ ತನಿಖೆಗೆ ಒತ್ತಾಯಿಸಿದ್ದರಿಂದ ಅವತ್ತು ರಾತ್ರಿಯೇ ಈ ಔಷದಿ ಗೋದಾಮ ವಿದ್ಯುತ್ ಅವಘಡದಿಂದ ಸುಟ್ಟು ಹೋಯಿತೆಂದು ಮಾಡಿ ಇದನ್ನು ಪ್ರತಿಭಟಿಸಿದ ನನ್ನ ಮೇಲೆ ಸುಳ್ಳು ಕೇಸ್ ಮಾಡಿ ಜೈಲಿಗೆ ಕಳಿಸಿದ ಪ್ರಕರಣದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಅಧಿಕಾರ ಹೊಂದಿದ್ದ ಎಲ್ಲಾ ರಾಜಕಾರಣಿಗ...