https://www.facebook.com/share/p/15rwQsz4H4/ *#ಭೈರಣ್ಣದಂಪತಿಗಳು.* *ಶತಾಯುಷಿಗಳಾಗಲಿ ಎಂದು ಹಾರೈಸುತ್ತೇನೆ.* *ಬೈರಣ್ಣನಿಗೆ 90 ವರ್ಷ ದಾಟಿರಬಹುದು, ನಿನ್ನೇ ಇವರ ಊರಿನ ಯೋಗೇಂದ್ರ ಎಂಬ ಗೆಳೆಯ ಬಂದಾಗ ಬೈರಣ್ಣನ ಸುದ್ದಿ ಮಾತಾಡಿದಾಗ ಅವರಿಗೆ ಬೈರಣ್ಣ ದಂಪತಿಗಳ ಫೋಟೋ ತೆಗೆದು ವಾಟ್ಸಪ್ ಮಾಡಲು ಹೇಳಿದ್ದೆ.* *ಯೋಗೇಂದ್ರ ರಾತ್ರಿಯೇ ಬೈರಣ್ಣ ದಂಪತಿಯನ್ನು ಭೇಟಿ ಮಾಡಿ ಈ ಫೋಟೋ ಕಳಿಸಿದ್ದಾರೆ.* *ಸದ್ಯದಲ್ಲೇ ಈ ದಂಪತಿಗಳನ್ನ ಭೇಟಿ ಮಾಡಬೇಕು ಅನಿಸುತ್ತಿದೆ.* #Anandapuram #yadehalli #shivamogga #arrak #ExciseDepartment #koralikoppa #navaturu #andasura #agedcare #couples #couplegoals *ನಮ್ಮ ಊರು ಆನಂದಪುರಂನಿಂದ ರಿಪ್ಪನಪೇಟೆ ಮಾರ್ಗದಲ್ಲಿ ಎರಡು ಕಿಲೋಮೀಟರ್ ದೂರದಲ್ಲಿರುವ ಕೊರಲಿಕೊಪ್ಪ ಎಂಬ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮದಲ್ಲಿ ತನ್ನ ಮನೆಯಲ್ಲಿ ಸರಾಯಿ ವ್ಯಾಪಾರ ಮಾಡುತ್ತಿದ್ದರು.* *ಬೈರಣ್ಣ ನನ್ನ ಹಿರಿಯ ಮಿತ್ರರು ಇವರಿಗೆ ನಮ್ಮ ಊರಲ್ಲಿ ಜನ ಕರಿಯುವುದು ಸರಾಯಿ ಭೈರಣ್ಣ ಅಂತ ಇದಕ್ಕೆ ಕಾರಣವೂ ಇದೆ, ಏನೆಂದರೆ ಯಾವಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ಸರಾಯಿ ಅಂಗಡಿ ಪ್ರಾರಂಭವಾಯಿತೋ ಅವತ್ತಿನಿಂದ ಸರಾಯಿ ರದ್ದಾಗುವ ತನಕ ಬೈರಣ್ಣ ಆನಂದಪುರಂನಿಂದ ರಿಪ್ಪನ್ ಪೇಟೆ ಮಾರ್ಗದಲ್ಲಿ ಎರಡು ಕಿಲೋಮೀಟರ್ ದೂರದಲ್ಲಿರುವ ಕೊರಲಿಕೊಪ್ಪ ಎಂ...