Blog number 922. ಶಿವಮೊಗ್ಗ ಜಿಲ್ಲೆಯ ಮ್ಯಾಜಿಕ್ ವಿಸ್ಮಯ ಸಂಸ್ಥೆ ಪ್ರಖ್ಯಾತ ಜಾದುಗಾರರಾದ ಪ್ರಶಾಂತ ಹೆಗಡೆ ಜಾದುಗಾರರದ್ದು ಇದು ದೇಶ ವಿದೇಶಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ ದಾಖಲೆಯ ಶಿವಮೊಗ್ಗದ ಏಕೈಕ ಜಾದುಗಾರರ ಸಂಸ್ಥೆ.
#ಶಿವಮೊಗ್ಗ_ಜಿಲ್ಲೆಯ_ಪ್ರಶಾಂತಹೆಗಡೆ_ಜಾದೂಗಾರ್_ನನ್ನ_ಅತಿಥಿ #ಇವರ_ಮ್ಯಾಜಿಕ್_ವಿಸ್ಮಯ_ತಂಡದ_ದೇಶ_ವಿದೇಶದಲ್ಲಿನಪ್ರದರ್ಶನ_ಸಾವಿರಕ್ಕೂ_ಮಿಕ್ಕಿದೆ. #ಕಾಯ೯ಕ್ರಮ_ಆಯೋಜಿಸುವವರ_ಕೈಸುಡದಂತೆ_ಅವರ_ಬಜೆಟ್_ಅನುಗುಣವಾಗಿ_ಮ್ಯಾಜಿಕ್_ಮಾಡಿ_ತೋರಿಸುತ್ತಾರೆ. #ಶಿವಮೊಗ್ಗ_ಜಿಲ್ಲೆಯ_ಮ್ಯಾಜಿಕ್_ಸಾಧನೆಗೈದ_ಏಕೈಕ_ತಂಡ. #ಮ್ಯಾಜಿಷಿಯನ್_ಜೀವನದಲ್ಲಿ_ಛಲಗಾರನಾಗಿ_ಗುರಿಮುಟ್ಟಿದ_ಇವರ_ಜೀವನದ_ಕಥೆ. #ಒಂದು_ಕಾಲದಲ್ಲಿ_ಶಿವಮೊಗ್ಗದಲ್ಲಿ_ಪ್ರಖ್ಯಾತ_ಬ್ಯಾನರ್_ಬರಹಗಾರರೂ_ಆಗಿದ್ದರು. #ಇವರ_ಪ್ರದಶ೯ನದ_ಉದ್ಘಾಟನೆ_ಎಣ್ಣೆಯ_ಬದಲು_ನೀರು_ಸುರಿದು_ದೀಪ_ಬೆಳಗಿಸುತ್ತಾರೆ!! ಶಿವಮೊಗ್ಗದ ಪ್ರಶಾಂತ ಹೆಗಡೆ ಜಾದೂಗಾರ್ ನನ್ನ ಪೇಸ್ ಬುಕ್ ಗೆಳೆಯರಲ್ಲಿ ವಿಶೇಷ ಗೆಳೆಯರು ಕಾರಣ ಇವರು ಬಾಲ್ಯದಲ್ಲಿ ಬೇಸಿಗೆ ರಜೆ ಆನಂದಪುರಂನ ಆಗಿನ ಪ್ರಖ್ಯಾತ ಕೋಮಲ ವಿಲಾಸ್ ಕುಟುಂಬದಲ್ಲಿ ಕಳೆಯುತ್ತಿದ್ದರಂತೆ ಹಾಗಾಗಿ ಇವರಿಗೆ ಆನಂದಪುರಂ ಚಿರಪರಿಚಿತ. ಆನಂದಪುರಂನ ಕೋಮಲ ವಿಲಾಸ್ ನ ಜಯವೀರ ನಾಯಕರ ಪತ್ನಿ ಇವರ ತಾಯಿ ತಂಗಿ ಅಂದರೆ ಚಿಕ್ಕಮ್ಮ ಈಗ ಅವರಾರು ಆನಂದಪುರಂನಲ್ಲಿ ಇಲ್ಲ. ಪ್ರಶಾಂತ ಹೆಗಡೆ ಜಾದೂಗಾರರ ತಂಡದ ಹೆಸರು #ಮ್ಯಾಜಿಕ್_ವಿಸ್ಮಯ ಇದು ಸಾವಿರಕ್ಕೂ ಮಿಕ್ಕಿ ದೇಶ ವಿದೇಶಗಳಲ್ಲಿ ಪ್ರದರ್ಶನ ಮಾಡುವ ಮೂಲಕ ಶಿವಮೊಗ್ಗದ ಏಕೈಕ ಜಾದೂ ಸಂಸ್ಥೆ ಎಂಬ ಖ್ಯಾತಿಗಳಿಸಿದೆ. ಸ್ವತಃ ಕಲಾವಿದರಾದ ಪ್ರಶಾಂತ ಹೆಗಡೆ ಜಾದುಗಾರ್ ...