Skip to main content

Posts

Showing posts with the label He is first person written Kagodu Raith Sathyagraha Book

Blog number 920. ಕಾಗೋಡು ಸತ್ಯಾಗ್ರಹದ ಮೊದಲ ಪುಸ್ತಕ ಬರೆದು ಅನೇಕರಿಗೆ ಪ್ರೇರಣೆ ನೀಡಿದ ಚಿಂತಕ ಬರಹಗಾರ ಜಿ.ರಾಜಶೇಖರ್ ಇನ್ನು ನೆನಪು ಮಾತ್ರ.

#ಶ್ರದ್ದಾ೦ಜಲಿಗಳು #ಚಿಂತಕ_ಬರಹಗಾರ_ಜಿ_ರಾಜಶೇಖರ್ #ಶಿವಮೊಗ್ಗಜಿಲ್ಲೆಯ_ಕಾಗೋಡು_ರೈತಸತ್ಯಾಗ್ರಹದ_ಮೊದಲ_ಪುಸ್ತಕ_ಬರೆದವರು. ಉಡುಪಿ ಮೂಲದ ಚಿಂತಕರು, ಬರಹಗಾರರಾದ ಜಿ.ರಾಜಶೇಖರ್ ಇಹ ಲೋಕ ತ್ಯಜಿಸಿದ್ದಾರೆ ಅವರಿಗೆ ಶ್ರದ್ದಾಂಜಲಿ ಅಪಿ೯ಸುತ್ತಾ ಅವರಿಗಾಗಿ ಈ ನುಡಿ ನಮನ.   ಐತಿಹಾಸಿಕ ಭೂ ಹೋರಾಟ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿನ ಸಾಗರ ತಾಲ್ಲೂಕಿನ ಕಾಗೋಡಿನಲ್ಲಿ ಹೋರಾಟದ ಕಿಡಿ ಎದ್ದು ಜ್ವಾಲೆಯಾಗಿ ಅದಕ್ಕೆ ರಾಷ್ಟಮಟ್ಟದಲ್ಲಿ ಬೆಂಬಲ ಸಿಕ್ಕಿದ್ದು ಇತಿಹಾಸವೇ.   ಈ ಹೋರಾಟದ ಬಗ್ಗೆ ಕನ್ನಡದಲ್ಲಿ 144 ಪುಟಗಳ #ಕಾಗೋಡು_ರೈತ_ಸತ್ಯಾಗ್ರಹ ಎಂಬ ಮೊದಲ ಪುಸ್ತಕ ಬರೆದವರು ಈ ಜಿ.ರಾಜಶೇಖರ್.   ಈ ಪುಸ್ತಕ ಪ್ರಕಟಿಸಿದವರು ಹೆಗ್ಗೋಡಿನ ಕೆ.ವಿ.ಸುಬ್ಬಣ್ಣರ ಅಕ್ಷರ ಪ್ರಕಾಶನ.   ವಿಶೇಷ ಅಂದರೆ ಜಿ.ರಾಜಶೇಖರ್ ಕಾಗೋಡು ಹೋರಾಟದ ಭೂಮಿಯಲ್ಲಿ ಓಡಾಡಿ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಸ್ಥಳಿಯ ಹೋರಾಟಗಾರರನ್ನು ಬೇಟಿ ಮಾಡಿದ್ದರು.   ಮರೆತು ಹೋಗುತ್ತಿದ್ದ ಕಾಗೋಡು ಚಳವಳಿಯನ್ನು ಜನರ ಸೃತಿಯಲ್ಲಿ ಖಾಯಂ ಆಗಿ ಉಳಿಯುವಂತೆ ಮತ್ತು ಮುಂದಿನ ದಿನಗಳಲ್ಲಿ ಕಾಗೋಡು ರೈತ ಹೋರಾಟದ ಅನೇಕ ಪುಸ್ತಕಗಳು ಬರಲು ಪ್ರೇರಣೆ ಆದವರು ಜಿ.ರಾಜಶೇಖರ್.