Skip to main content

Posts

Showing posts with the label MAVINAGUNDI 24 Hours buicy little town near World famous Jogfalls

Blog number 1259. ದಿನದ 24 ಗಂಟೆಯೂ ಎಚ್ಚರವಾಗಿರುವ ರಾಜ್ಯದ ಏಕೈಕ ಪುಟ್ಟ ಊರು ಮಾವಿನಗುಂಡಿ ಜೋಗ್ ಜಲಪಾತದ ಪಕ್ಕದಲ್ಲಿದೆ.

#ಮಾವಿನಗುಂಡಿ_ಎಂಬ_ಮಾಯಾ_ಜಗತ್ತು #ಶಿವಮೊಗ್ಗ_ಜಿಲ್ಲೆಯ_ಅಂಚು_ಉತ್ತರಕನ್ನಡ_ಜಿಲ್ಲೆ #ಇದು_ಪಶ್ಚಿಮಘಟ್ಟದ_ಉತ್ತರ_ದಕ್ಷಿಣ_ಪೂರ್ವ_ಪಶ್ಚಿಮ_ಸಂಪರ್ಕಿಸುವ_ಹೆಬ್ಬಾಗಿಲು #ಮಹಿಳಾ_ಸತ್ಯಾಗ್ರಹಿಗಳ_ಊರು #ಮಳೆಗಾಲದ_ಮಾವಿನಗುಂಡಿ_ಪಾಲ್ಸ್ #ಜೋಗಜಲಪಾತದಿಂದ_ಕೇವಲ_ಮೂರು_ಕಿಮಿ #ಅನಾನಸ್_ಹಣ್ಣಿನ_ಮೌಲ್ಯವರ್ಧನೆ_ಮೊದಲು_ಮಾಡಿದ_ಐನಕೈ_ಅಶೋಕಹೆಗಡೆ_ಊರು #ದಿನದ_ಇಪ್ಪತ್ನಾಲ್ಕು_ಗಂಟೆಯೂ_ಎಚ್ಚರವಾಗಿರುವ_ಪುಟ್ಟ_ಊರು.    ಮಾವಿನಗುಂಡಿ ಅನ್ನುವ ಊರೇ ಒಂದು ವಿಸ್ಮಯ ಅಲ್ಲಿ ಮೂರು ರಸ್ತೆ ಸೇರುತ್ತದೆ, ಪಶ್ಚಿಮ ಘಟ್ಟದ ಮಧ್ಯದ ಈ ಪುಟ್ಟ ಊರಿ೦ದ ಜೋಗ ಜಲಪಾತ 3 ಕಿ.ಮಿ ಮಾತ್ರ.   ಈ ಊರಿನ ಹೆಸರಿನದ್ದೇ 292 ಮೀಟರ್ ಎತ್ತರದ ಜಲಪಾತ ಮಳೆಗಾಲದ ಜೂನ್ ನಿಂದ ನವೆಂಬರ್ ತನಕ ವೀಕ್ಷಿಸಬಹುದು.   ಈ ಊರಿಗೆ ಕೇರಳ - ಗೋವಾ ಮತ್ತು ಕರಾವಳಿಯ ಸಂಪರ್ಕದ ಹೊನ್ನಾವರ - ಬೆಂಗಳೂರು ಘಾಟಿ ರಸ್ತೆಗೆ ನೂರಾರು ವರ್ಷದ ಇತಿಹಾಸ ಇದೆ ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ಆಳಿದ ಗೇರುಸೊಪ್ಪೆಗೆ ಸಿರ್ಸಿ - ಸಿದ್ಧಾಪುರ - ಸಾಗರಗಳಿಂದ ಇದೇ ಮಾರ್ಗದಲ್ಲಿ ಸಾಗಬೇಕಾಗಿತ್ತು.   ಇಲ್ಲಿಂದ ಸಿದ್ದಾಪುರ - ಸಿರ್ಸಿ - ಹುಬ್ಬಳ್ಳಿಗೂ ಒಂದು ರಸ್ತೆ ಇದೆ.    ಅರಬ್ಬೀ ಸಮುದ್ರದಿಂದ ಶರಾವತಿ ನದಿಯಲ್ಲಿ ಇಲ್ಲಿಯವರೆಗೆ ನದಿ ಮಾರ್ಗವೂ ಒಂದು ಕಾಲದಲ್ಲಿ ಬಳಕೆಯಲ್ಲಿತ್ತು ಈಗ ಮಧ್ಯದಲ್ಲಿ ಗೇರುಸೊಪ್ಪೆಯಲ್ಲಿ ಆಣೆಕಟ್ಟು ನಿರ್ಮಾಣವಾಗಿದ...