Skip to main content

Posts

Showing posts with the label This heritage natural stone bridge unscientfically repaired

ಹೆರಿಟೇಜ್ ನೈಸರ್ಗಿಕ ಕಲ್ಲಿನ ಕಾಲು ಸಂಕ ಸಂರಕ್ಷಣೆ ಹೆಸರಲ್ಲಿ 25 ಲಕ್ಷ ಹಣದಿಂದ ವಿರೊಪಗೊಳಿಸಿದ ಸರ್ಕಾರದ ಕಾಮಗಾರಿ !? ಜೋಗ್ ಫಾಲ್ಸ್ ಸಮೀಪದ ಮಸವಳ್ಳಿ (ಅಡುಗೋಡಿ ಅಂಚೆ, ಸಿದ್ಧಾಪುರ ತಾ. ಉತ್ತರ ಕನ್ನಡ ಜಿಲ್ಲೆ)

#ಕಲ್ಲಿನ_ನೈಸರ್ಗಿಕ_ಕಾಲು_ಸಂಕ_ವಿರೂಪಗೊ೦ಡಿದೆ. #ಸಾಗರ_ಸಿದ್ದಾಪುರ_ಗಡಿಯ_ಮಸವಳ್ಳಿಯ_ಈ_ಕಾಲು_ಸಂಕ. #ಹೆರಿಟೇಜ್_ನೈಸರ್ಗಿಕ_ಕಲ್ಲಿನ_ಕಾಲು_ಸಂಕ_ಈಗ_ಕಾಂಕ್ರಿಟ್_ಸಂಕವಾಗಿದೆ. #ವಿರೂಪಗೊಳಿಸಿದ್ದು_ಸರ್ಕಾರದ_ಇಂಜಿನಿಯರ್_ಇಲಾಖೆ_ಇದಕ್ಕೆ_25_ಲಕ್ಷ_ಹಣವೂ_ಖಾಲಿ. #ನಮ್ಮ_ದೇಶದಲ್ಲಿ_ತಿರುಮಲ_ಬೆಟ್ಟದಲ್ಲಿ_ವಿಶಾಖಪಟ್ಟಣದಲ್ಲಿ_ಇಂತಹ_ನೈಸರ್ಗಿಕ_ಸಂಕಗಳಿದೆ.    ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಸಿದ್ಧಾಪುರ ತಾಲ್ಲೂಕಿನ ಆಡುಕಟ್ಟಾ ಅಂಚೆ ವ್ಯಾಪ್ತಿಯ ಮಸವಳ್ಳಿಯಲ್ಲಿ ನೈಸರ್ಗಿಕ ಕಲ್ಲಿನ ಕಾಲು ಸಂಕವೊಂದು ವರದಾ ನದಿಗೆ ಸೇರುವ ಹಳ್ಳಕ್ಕೆ ಸಾವಿರಾರು ವರ್ಷಗಳಿಂದ ಇದೆ.   ಸುಮಾರು 60 ಅಡಿ ಉದ್ದ (20 Mtr) 4 ಅಡಿ ಅಗಲದ 2 ರಿಂದ 3 ಅಡಿ ದಪ್ಪದ ಕಾಲು ಸಂಕ ನೈಸರ್ಗಿಕವಾಗಿ ಪಿಲ್ಲರ್ ಗಳಿಲ್ಲದೆ ಇದೆ ಇದರ ಕೆಳಗೆ 10 ಅಡಿ ಆಳದಲ್ಲಿ ಹಳ್ಳದ ನೀರು ಮಳೆಗಾಲದಲ್ಲಿ ಹರಿಯುತ್ತದೆ.    ನಮ್ಮ ದೇಶದಲ್ಲಿ ತಿರುಮಲದ ಬೆಟ್ಟದಲ್ಲಿ ಮತ್ತು ವಿಶಾಖಪಟ್ಟಣದಲ್ಲಿ ಕೂಡ ಇಂತಹ ನೈಸರ್ಗಿಕ ಕಾಲು ಸಂಕವಿದೆ.   ವಿಶ್ವದಾದ್ಯಂತ ಇಂತಹ ಶಿಲಾರಚನೆಯ ಕಮಾನುಗಳು ಹಿಮಗಳ, ಮಳೆ ಮತ್ತು ಗಾಳಿಯ ಸವಕಳಿಯಿಂದ ಲಕ್ಷಾಂತರ ವರ್ಷಗಳಲ್ಲಿ ರೂಪುಗೊಂಡಿರುವ ಕಾರಣದಿಂದ ಇಂತವುಗಳನ್ನು ಸಂರಕ್ಷಿಸುತ್ತಾರೆ ಈ ಬಗ್ಗೆ ಅಧ್ಯಯನ ಮಾಡುವವರು ಇದನ್ನೆಲ್ಲ ಸಂದರ್ಶಿಸುತ್ತಾರೆ.   ಚೀನಾ ದೇ...