Skip to main content

Posts

Showing posts with the label Famous advocate Divakar joined Aam Admi Party

Blog number 870, ಸಾಗರ ಮೂಲದ ಹೈಕೋರ್ಟನ ಖ್ಯಾತ ವಕೀಲರಾದ ದಿವಾಕರ್ ವಕೀಲರು ಆಮ್ ಆದ್ಮಿ ಪಾರ್ಟಿ ಯಾಕೆ ಸೇರಿದರು?

#ಸಾಗರದ_ದಿವಾಕರ್_ವಕೀಲರು_ಹೈಕೋರ್ಟಿನ_ಪ್ರಖ್ಯಾತ_ವಕೀಲರು #ಮುಖ್ಯಮಂತ್ರಿಗಳ_ಕಾನೂನು_ಸಲಹೆಗಾರರಾಗಿದ್ದವರು #ಕೆ_ಎಸ್_ಐ_ಡಿ_ಸಿ_ನಿಗಮದ_ಅಧ್ಯಕ್ಷರಾಗಿದ್ದವರು #ಮೊನ್ನೆ_ದೆಹಲಿಯಲ್ಲಿ_ಕೇಜ್ರಿವಾಲರ_ಸಮ್ಮುಖ_ಆಮ್_ಆದ್ಮಿ_ಪಾರ್ಟಿ_ಸೇರಿದ್ದಾರೆ. #ಸಾಗರ_ವಿದಾನಸಭಾ_ಕ್ಷೇತ್ರದಿಂದ_ಸ್ಪರ್ಧಿಸಲು_ತಯಾರಿ_ನಡೆಸಿದ್ದಾರೆ.  https://youtu.be/NNHeMgE1qK0  ಇವತ್ತು ನಮ್ಮ ಲಾಡ್ಜ್ ನ ಲಿಪ್ಟ್ ಮೆಷಿನ್ ರೂಂ ಗೆ 30 ಅಡಿ ಎತ್ತರದ ಕಬ್ಬಿಣದ ಸ್ಟೇರ್ ಕೇಸ್ ಅಳವಡಿಸುವ ಸ್ವಲ್ಪ ಕಷ್ಟದ ಕೆಲಸ, ಮೈ ಮರೆತರೆ ಅಪಾಯದ ಕೆಲಸವೂ ಆದ ಕೆಲಸದಲ್ಲಿ ನಮ್ಮ ಕೆಲಸಗಾರರಿಗೆ ಅವರ ಕೆಲಸದಲ್ಲಿ ರಕ್ಷಣೆಯ ನೆಪದಲ್ಲಿ ಅವರ ಜೊತೆ ಇದ್ದೆ, ನಮ್ಮ ಕೆಲಸಗಾರರು ಕೆಲಸದ ಮಧ್ಯೆ ದೇಶದ ರಾಜಕೀಯನೂ ಮಾತಾಡುತ್ತಾರೆ, ಪ್ರತಿಯೊಬ್ಬರ ಮನೆಯಲ್ಲಿ ಟೀವಿ ಇದೆ, ಅಂಗೈಯಲ್ಲಿ ಮೊಬೈಲ್ ಹಾಗಾಗಿ ಅವರಿಗೆ ಪ್ರಚಲಿತ ವಿಷಯಗಳು ಗೊತ್ತಿರುತ್ತದೆ.     ಲಿಫ್ಟ್ ರೂಂನ 70 ಅಡಿ ಎತ್ತರದಲ್ಲಿ ಸ್ವಲ್ಪ ಕಸ ಇತ್ಯಾದಿ ಬಿದ್ದಿದ್ದು ಅದನ್ನು ತೆಗೆಯಲು ಪೊರಕೆ ಬೇಕು ಅಂದಾಗ ದೆಹಲಿಯ ಕೇಜ್ರಿವಾಲನ (ಸಾಮಾನ್ಯವಾಗಿ ಹಿಂದಿನಿಂದ ಎಲ್ಲರಿಗೂ ಏಕವಚನ ಬಳಸುತ್ತಾರೆ) ಪೊರಕೆನೆ ಈ ಸಾರಿ ಕರ್ನಾಟಕದಲ್ಲಿ ಗ್ಯಾರಂಟಿ ಅಂತ ಅವರವರೆ ಮಾತಾಡುತ್ತಿದ್ದರು.      ಯಾಕ್ರೋ ಬಿಜೆಪಿ-ಕಾಂಗ್ರೇಸ್ -ಜೆಡಿಎಸ್ ಬಿಟ್ರಾ?, ಅಂದೆ ಇನ್ನೇನಣ್ಣಾ ಎಲ್ಲ...