ಭಾಗ -42, ಆನಂದಪುರಂ ಇತಿಹಾಸ, ಆನಂದಪುರ೦ನ ಒಂದು ಕಾಲದಲ್ಲಿ ಸುಮಾರು ನಾಲ್ಕು ದಶಕ ನಡೆದ ಪ್ರಖ್ಯಾತ ಪ್ರಸಿದ್ದ ಹೋಟೆಲ್ ಕೋಮಲಾ ವಿಲಾಸ್
#ಭಾಗ_42. #ಆನಂದಪುರಂ_ಇತಿಹಾಸ #ಆ_ಕಾಲದ_ಸುಪ್ರಸಿದ್ಧ_ಹೋಟೆಲ್_ಕೋಮಲವಿಲಾಸ್ #ಜಯವೀರನಾಯಕ್_ತಂದೆ_ಆನಂದನಾಯಕರಿಂದ_ಪ್ರಾರಂಭ. #ಜಯವೀರನಾಯಕ್_ಮಾವ_ರಾಮಕಿಣಿಯಿಂದ_ಉತ್ತುಂಗಕ್ಕೆ. #ಶುಚಿ_ರುಚಿಯ_ಅದುನಿಕ_ರೆಸ್ಟೋರೆಂಟ್. ಆನಂದನಾಯಕರು ಆನಂದಪುರಂಗೆ ಬಂದು ಅಯ್ಯಂಗಾರ್ ಕುಟುಂಬದ ಬಸ್ ಸ್ಟ್ಯಾಂಡ್ ಎದುರಿನ ಜಾಗದಲ್ಲಿ ವೆಜ್ ರೆಸ್ಟೋರೆಂಟ್ ಮಾಡಲು ವೆಂಕಟಾಚಲಯ್ಯಂಗಾರರಲ್ಲಿ ವಿನಂತಿಸಿದಾಗ ಅವರು ಅಭಿವೃದ್ದಿ ಹೊಂದಲಿರುವ ಆನಂದಪುರಂಗೆ ಹೋಟೆಲ್ ಅವಶ್ಯವಿರುವುದು ಅರಿತಿರುತ್ತಾರೆ. ಆಗಲೇ ಅವರ ತಾಯಿ ಸ್ಮರಣಾರ್ಥ ನಿರ್ಮಿಸಿದ ಕನಕಮ್ಮಾಳ್ ಆಸ್ಪತ್ರೆಗೆ ಬರುವವರಿಗಾಗಿ ಒಂದು ಸುಸಜ್ಜಿತ ರೆಸ್ಟೋರಂಟ್ ಕೊರತೆ ಇತ್ತು ಹಾಗಾಗಿ ತಮ್ಮ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರರಿಗೆ ಮನ ಒಲಿಸಿ ಆನಂದಪುರಂ ಬಸ್ ಸ್ಟಾಂಡ್ ಎದುರಿನ ಮತ್ತು ತಮ್ಮ ಮನೆಯ ಹಿಂಬಾಗದ ಕೊಟ್ಟಿಗೆಯ ಎದುರಿನ ಚಿಲುಮೆ ಎದುರಿನ ಜಾಗ ಬಾಡಿಗೆಗೆ ನೀಡುತ್ತಾರೆ. ಅದೇ #ಕೋಮಲ_ವಿಲಾಸ್ ಆನಂದಪುರಂನ ಸುಮಾರು 40 ವರ್ಷ ಸುಪ್ರಸಿದ್ದ ಹೋಟೆಲ್ ಆಗಿ ವಿಜೃಂಬಿಸಿತು, ಕೋಮಲ ವಿಲಾಸ್ ಗೆ ಹೋಗಿ ಮಸಾಲೆ ತಿಂದು ಕಾಫಿ ಟೀ ಕುಡಿಯುವುದು ಆ ಕಾಲಕ್ಕೆ ಒ0ದು ಪ್ರತಿಷ್ಟೆಯ ವಿಚಾರ. ಪ್ರತಿ ದಿನ ಸಂಜೆ ಆನಂದಪುರಂ ಪೋಲಿಸ್ ಠಾಣೆಯಿಂದ ವಿಲೇಜ್ ಪಂಚಾಯತ್ ಕಛೇರಿ ತನಕ ಕೋಮಲ ವಿಲಾಸ್ ನ ಮಸಾಲೆದೋಸೆ ಸುವಾಸನೆ ಇಲ್ಲಿ ಸಾಗುತ...