ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿಯ ಹೊದಿಗೆರೆಯಲ್ಲಿ (ಈಗ ದಾವಣಗೆರೆ ಜಿಲ್ಲೆ) ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಮತ್ತು ಹೊಸನಗರ ತಾಲ್ಲುಕಿನ ಅರಮನೆ ಕೊಪ್ಪದಲ್ಲಿ ಇವರ ಮಗ ಛತ್ರಪತಿ ರಾಜಾರಾಮ್ ಮಹಾರಾಜ ಕೆಳದಿ ರಾಣಿ ಚೆನ್ನಮ್ಮರ ರಕ್ಷಣೆಯಲ್ಲಿ ಎರೆಡು ವರ್ಷ ತಂಗಿದ್ದ ಅರಮನೆ ಇದೆ.
#ಛತ್ರಪತಿ_ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮ_ಮಹಾರಾಜರನ್ನು_ಕೆಳದಿ_ರಾಣಿ_ಚೆನ್ನಮ್ಮ_ಆಶ್ರಯದಲ್ಲಿದ್ದದ್ದು #ಮರಾಠಿ_ಟೀವಿ_ಎಬಿಪಿ_ಮಾಜಾ_ಡಾಕ್ಯುಮೆಂಟರಿ_ಮಾಡಿ_ಮೊನ್ನೆ_21_ಮಾಚ್೯_2021_ಪ್ರಸಾರ_ಮಾಡಿದೆ. #ಇತಿಹಾಸ_ಆಸಕ್ತರಿಗಾಗಿ_ಮಾಹಿತಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಚೆನ್ನಗಿರಿ ಸಮೀಪದ ಹೊದಿಗೆರೆಯಲ್ಲಿದೆ, ಇವರ ಮಗ ಛತ್ರಪತಿ ರಾಜಾರಾಮ ಮಹಾರಾಜರನ್ನು ಕೆಳದಿ ರಾಣಿ ಚೆನ್ನಮ್ಮ ಆಶ್ರಯ ನೀಡಿ ರಹಸ್ಯವಾಗಿ ಬಚ್ಚಿಟ್ಟ ಮನೆ ಬಿದನೂರು ನಗರದ ಸಮೀಪದ ಅರಮನೆ ಕೊಪ್ಪದಲ್ಲಿದೆ. ವಿಶೇಷ ಅಂದರೆ ಬಿದನೂರಿನಿಂದ 17 ಕಿಮಿ ದೂರದ ಮತ್ತಿ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ಕೊಪ್ಪ ಎಂಬಲ್ಲಿ (ಕೊಲ್ಲೂರು ಮಾಗ೯ದಲ್ಲಿ) ಹಾಲಿ ಮಂಜುನಾಥ ಭಟ್ಟರ ಸುಪದಿ೯ಯಲ್ಲಿರುವ ಬೃಹತ್ ಮನೆ (ಒಂದು ಕಾಲದಲ್ಲಿ ಅರಮನೆ) ಯಲ್ಲಿ ಸುಮಾರು ಎರೆಡು ವರ್ಷ ಛತ್ರಪತಿ ರಾಜಾರಾಮ ಮಹಾರಾಜರನ್ನ ರಾಣಿ ಚೆನ್ನಮ್ಮ ರಹಸ್ಯವಾಗಿ ರಕ್ಷಿಸಿದ್ದಳು, ಈ ಕಾಲದಲ್ಲಿಯೆ ಛತ್ರಪತಿ ರಾಜಾರಾಮರು ಬಿದನೂರು ನಗರದಲ್ಲಿ ಸುಬ್ರಮಣ್ಯ ಮತ್ತು ಪಾರ್ವತಿ ದೇವಾಲಯ ನಿಮಿ೯ಸುತ್ತಾರೆ. ಈ ಟೇವಿ ತಂಡವನ್ನು ಈ ಅರಮನೆ ಕೊಪ್ಪಕ್ಕೆ ಕರೆದೊಯ್ದು ಮಾಹಿತಿ ನೀಡಿದವರು ಹಾಲಿ ಬಿದನೂರು ವಾಸಿ ಆಗಿರುವ ಇತಿಹಾಸ ಸಂಶೋದಕರು ಮತ್ತು ಅನೇಕ ಕೆಳದಿ ಇತಿಹಾಸದ ಪುಸ್ತಕ ಪ್ರಕಟಿಸಿರುವ ಅಂಬ್ರಯ್ಯ ಮಠರವರು. ಅಂಬ್ರಯ್ಯ ಮಠರವರು ಬರೆದು ಪ್ರಕಟಿಸಿರುವ "ಗ...