ನನ್ನ ಜನ್ಮ ದಿನಾಂಕ ಪೆಬ್ರವರಿ - 9 - ಮಂಗಳವಾರ - 1965 ನಾಳೆ -ಬುದವಾರ - 9 - ಫೆಬ್ರುವರಿ-2022ಕ್ಕೆ 57 ವಷ೯ದ ಆಯಸ್ಸು ದಾಟಲಿದೆ. ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟ. ಅಂದರೆ ನನಗೆ ನನ್ನ ಜೀವಿತದ 57 ವರ್ಷ ಕಳೆದು 58ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ. ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ. ಯಾವುದೂ ಅಂತ್ಯವೂ ಅಲ್ಲ ಆರಂಭವೂ ಅಲ್ಲ ರೂಪಾಂತರ ಮಾತ್ರ ಎಂಬಂತೆ ಅನೇಕ ಉದರ ನಿಮಿತ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು, ಮಿತ್ರ ದ್ರೋಹದ ಫಲ ಕೂಡ ಸ್ವೀಕರಿಸಾಯಿತು ಇದು ಎಲ್ಲರ ಜೀವನದಲ್ಲೂ ನಡೆಯುವಂತದ್ದೇ. ನಮ್ಮ ಆತ್ಮೀಯ ಖಾಸಾ ವೈದ್ಯರಾದ ಶಿವಮೊಗ್ಗದ ಡಯಾಬಿಟೀಸ್ ತಜ್ಞರಾದ ISLETS ಆಸ್ಪತ್ರೆ ಮಾಲಿಕರಾದ #ಡಾಕ್ಟರ್_ಪ್ರೀತಂ ಕೇಳುತ್ತಿದ್ದರು ನೀವು ಏನೇನೆಲ್ಲ ಉದ್ಯೋಗ ಮಾಡಿದ್ದೀರಿ ಅಂತ. ಈಗ 57 ವರ್ಷ ಪೂರೈಸಿದಾಗ ಅದೆಲ್ಲ ನೆನಪು ಮಾಡಿಕೊಂಡು ಇಲ್ಲಿ ಬರೆದಿದ್ದೇನೆ. 1. ವಜಿ೯ನಿಯಾ ತಂಬಾಕು ಬೆಳೆಯಲು ನಮ್ಮದೇ ನರ್ಸರಿಯಲ್ಲಿ ತಂಬಾಕು ಸಸಿ ನಾನೇ ನಿತ್ಯ ನೀರು ಹಾಕಿ ಬೆಳೆಸಿದ್ದು ನಂತರ ತಂಬಾಕು ಎಲೆ ಬ್ಯಾರನ...