Skip to main content

Posts

Showing posts with the label Farmers leader N.D.Vasanth Kumar replied to Last year article poste in FB

Blog number 1836. ಸಾಮಾಜಿಕ ಜಾಲ ತಾಣದ ವ್ಯಾಪ್ತಿ ... ಗೆಳೆಯ ರೈತ ಹೋರಾಟಗಾರ ಎನ್.ಡಿ. ವಸಂತ ಕುಮಾರ್ ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿರುವುದು ಅವರಿಗೆ ಸಿದ್ಧ ಸುಮಾದಿ ಯೋಗದ ತರಬೇತಿಯಿಂದ ಲಭಿಸಿದ ಮಾನಸಿಕ ಸ್ಥಿರತೆ ಮತ್ತು ಮನೋದೈರ್ಯಕ್ಕೆ ಕಾರಣವಾಗಿದೆ.

#ಸಾಮಾಜಿಕ_ಜಾಲ_ತಾಣದ_ವ್ಯಾಪ್ತಿ. #ನಾನು_ಅವರ_ಹೆಸರು_ಬಳಸದೆ_ಲೇಖನ_ಬರೆದೆ #ಅವರೇ_ಪ್ರತಿಕ್ರಿಯಿಸಿ_ಇದು_ನನ್ನದೇ_ಕಥೆ_ನನ್ನ_ಹೆಸರು_ಹೇಳಲು_ಅವಮಾನ_ಇಲ್ಲ_ಎಂದಿದ್ದರು. #ಆದ್ದರಿಂದ_ಗೆಳೆಯ_ಹೋರಾಟಗಾರ_ಎನ್_ಡಿ_ವಸಂತಕುಮಾರ್_ಅವರ_ಪೋಟೋ_ಪ್ರತಿಕ್ರಿಯೆಯೊಂದಿಗೆ. #ಸಿದ್ದ_ಸಮಾದಿ_ಯೋಗದ_ತರಬೇತಿ_ಅವರಿಗೆ_ಈ_ಮಾನಸಿಕ_ಸ್ಥಿರತೆ_ದೈರ್ಯ_ತಂದಿದೆ.  #ಮೊದಲಿಗೆ_ಅವರ_ಪ್ರತಿಕ್ರಿಯೆ_ಓದಿ_ಈ_ಪ್ರತಿಕ್ರಿಯೆಗೆ_ಕಾರಣವಾದ_ನನ್ನ_ಲೇಖನ_ಕೊನೆಯಲ್ಲಿ_ಇದೆ ...      "ನೀವು ಬರೆದದ್ದು ಕಥೆಯಲ್ಲ ಸತ್ಯಕಥೆ. ನಾನೇ ಪೂರ್ಣ ಮರೆತಿರುವ ಒಂದೊಂದು ಶಬ್ದವನ್ನೂ ನೆನಪಿಟ್ಟುಕೊಂಡಿರುವ ನಿಮ್ಮ ಸ್ಮರಣ ಶಕ್ತಿಗೆ  ಹ್ಯಾಟ್ಸಾಪ್."   #ಅರುಣ್_ಪ್ರಸಾದ್_ರವರಿಗೆ_ನಮಸ್ಕಾರಗಳು.  ವ್ಯಕ್ತಿಯ ಹೆಸರು ಹೇಳಲಿಚ್ಚಿಸದ ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು. ಆದರೆ ಆ ವ್ಯಕ್ತಿ ನಾನೇ(#ಎನ್_ಡಿ_ವಸಂತಕುಮಾರ್) ಎಂದು ಹೇಳಿಕೊಳ್ಳಲು ನನಗೆ ಯಾವುದೇ ಅವಮಾನವಿಲ್ಲ. ಏಕೆಂದರೆ ನೀವು ಹೇಳಿರುವುದು ಅಕ್ಷರಷಃ ಸತ್ಯ.  ನಮ್ಮ ಕೊನೆಯ ಮಗ ರಿಷಿಗೆ 3 ತಿಂಗಳಾಗಿರುವಾಗ 2003 ಅಕ್ಟೋಬರ್‌ ತಿಂಗಳಲ್ಲಿ ಸಾಗರದ ಡಾಕ್ಟರ್ ಕೈ ಚಲ್ಲಿದ್ದಾಗ ನನ್ನಲ್ಲಿ ಹಣವಿಲ್ಲದೇ ಪರಿತಪಿಸುತ್ತಾ ಕುಳಿತಿದ್ದಾಗ ನೀವು ಅಕಸ್ಮಾತ್ ದೇವರಂತೆ ಬಂದು ಜೋಬಲ್ಲಿರುವ ಎಲ್ಲಾ ಹಣವನ್ನು ಕೊಟ್ಟು ಶಿವಮೊಗ್ಗಕ್ಕೆ ಕಳಿಸಿದಿರಿ. ಸಂಜಪ್ಪ ಆಸ್ಪತ್ರೆಯಲ್ಲಿ ತುಂಬಾ ಶ್ರಮಪಟ್ಟು ಮಗನ...