Skip to main content

Posts

Showing posts from March, 2017

HOW THIS MOUTH CANCER CURED?.A MIRACLE MEDICINE OF VAIDYA NARAYAN MURTHY NARASIPURA.

  MR SANDEEP MAHAJAN FROM DEHLI 34 YEAR OLD STAYED IN OUR LODGE OCTOBER 2016 WITH HIS BROTHER FOR TREATMENT OF HIS MOUTH CANCER.     THAT DAY THESE BROTHERS NO HOPE IN AYURVEDIC MEDICINE BUT ALLOPATHY DOCTORS TOLD NO FURTHER MEDICINE TO CURE HIM.     SANDEEP GOT MEDICINE FROM VAIDYAJI AND STARTED HIS COURSE OF MEDICINE.     SECOND VISIT HIS BROTHER CAME,VAIDYAJI ADVICED THAT SHORTLY CANCER TUMOUR WILL COMEOUT AND STARTS HEALING.     VAIDYAJI MEDICINE IS POWDER WITH HONEY HE HAS TO APPLY INSIDE OF MOUTH, A VERY SIMPLE METHOD OF TREATMENT.     AFTER FORTY DAYS COMPLETED,I RECEIVED CALL FROM SANDEEP WITH CRYING,HIS MOUTH WOUND BECOME BIG SIZE SO HE AFRAID.    THEN I DISCUSSED WITH VAIDYAJI,HE SAID WAIT FOR SOME DAYS,HIS CHEEKS WILL OPEN AND ALL TUMER COME OUT THEN IT WILL HEAL.      WITH IN TEN DAYS THAT DAY COME,THESE BROTHERS WORRIED LOT.      NOW SIX MONTHS OVER,DOCTORS ALSO WONDER, SANDEEP MAHAJAN FACE IS CHANGED,HE IS HAVING SOME HOPE IN HIS FEATURE LIFE.      WE ARE HAVING

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವಿದ್ಯುತ್ ಯೋಜನೆ ಉದ್ಘಾಟನೆ ಸಮಯದಲ್ಲಿ ಆಗಿನ ಮುಖ್ಯ ಮ

ಕು೦ದಾದ್ರಿ ಎಂಬ ಸುಂದರ ಪವ೯ತ ತಾಣ

ಕುOದಾದ್ರಿ ಬೆಟ್ಟ.   ಶಿವಮೊಗ್ಗದಿಂದ 80 ಕಿಮಿ ಆಗುಂಬೆ (ತೀಥ೯ಹಳ್ಳಿ) ಮಾಗ೯ದಲ್ಲಿ ಸಾಗಿದರೆ ಕುಂದಾದ್ರಿ ಸಿಗುತ್ತದೆ, ಗುಡ್ಡೆಕೇರಿ ಎಂಬ ಊರಿಂದ ಎಡಕ್ಕೆ ಹೋಗಬೇಕು ಇಲ್ಲಿ೦ದ ಆಗುOಬೆ ಸಮೀಪದಲ್ಲಿದೆ. ಕುವೆಂಪುರವರು ಕುಂದಾದ್ರಿ ಬೆಟ್ಟದಲ್ಲಿ ಸೂಯೋ೯ದಯ ವೀಕ್ಷಿಸಲಿಕ್ಕಾಗಿ ಸಮೀಪದ ಸಂಬಂದಿಗಳ ಮನೆಯಲ್ಲಿ ರಾತ್ರಿ ತಂಗಿ ಬೆಳಗಾಗುವ ಮುನ್ನ ಬೆಟ್ಟ ಏರಿ ಸೂಯೋ೯ದಯ ವೀಕ್ಷಿಸಿದ ಅನುಭವ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.     ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದ ಸುಪದಿ೯ಯಲ್ಲಿರುವ ಈ ಸ್ಥಳ ಇತ್ತೀಚಿನವರೆಗೆ ನಕ್ಸಲೇಟ ಪೀಡಿತ ವ್ಯಾಪ್ತಿ ಪ್ರದೇಶವಾದ್ದರಿಂದ ಪ್ರವಾಸಿಗಳಿಗೆ ಪ್ರವೇಶಕ್ಕೆ ಮಿತಿ ಇತ್ತು, ಈಗ ಅಂತಹ ನಿಬ೯೦ದವಿಲ್ಲ.    ಸುಮಾರು 2000 ವಷ೯ದ ಹಿಂದೆ ಜೈನ ಆಚಾಯ೯ ಮುನಿಗಳಾದ ಕುಂದ ಕುಂದಾಚಾಯ೯ರು ದಟ್ಟಡವಿಯ ಸಮುದ್ರ ಮಟ್ಟದಿಂದ 3200 ಅಡಿ ಎತ್ತರದ ಇಲ್ಲಿ ತಪಸ್ಸು ಮಾಡಿದ್ದರು ಮತ್ತು ಜೈನರ ಪವಿತ್ರ ಗ್ರಂಥ ಅನುಸರಣ ಇಲ್ಲೇ ರಚಿಸಿದ್ದರಿಂದ ಈ ಸ್ಥಳ ದೇಶದ ಜೈನರಿಗೆ ಅತ್ಯಂತ ಪವಿತ್ರ ಮತ್ತು ಪುಣ್ಯ ಸ್ಥಳವಾಗಿದೆ.   ಈಗ ಇಲ್ಲಿಗೆ ವಾಹನಗಳು ಸರಾಗವಾಗಿ ತಲುಪುತ್ತದೆ ಆದರೂ ಕಡಿದಾದ ತಿರುವು, ಅಲ್ಲಿಂದ ಅತ್ಯಂತ ಆಳದಲ್ಲಿ ಕಾಣುವ ಊರು, ಮನೆಗಳು ಭಯ ಉoಟು ಮಾಡುತ್ತದೆ, ಶ್ರೀಮತಿ ಕಾಡಮ್ಮ ನಾಗಪ್ಪ ಹೆಗ್ಗಡೆ ದಂಪತಿಗಳು ಇಲ್ಲಿಗೆ ರಸ್ತೆ ಮಾಡಿಸಿಕೊಟ್ಟ ದಾನಿಗಳOತೆ.    ಇತ್ತೀಚಿಗೆ ಬೆಟ್ಟದ ತುದಿಯಲ್ಲಿ ಪಾವಟಿಗೆ ಅಳವಡಿಸಿ, ಸುಂದರವಾದ ಪ್ರವಾ

ಚೊಮನ ದುಡಿಯ ಚಲನ ಚಿತ್ರ ನಟಿ ಪದ್ಮಾ ಕುಮಟಾ.

  ಚೊಮನ ದುಡಿ ಸಿನಿಮಾ ಶಿವರಾಂ ಕಾರಂತರ ಕಾದಂಬರಿ ಆದರಿತ ಸಿನಿಮಾ.    ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು, ಆಗ ಈ ಎಲ್ಲಾ ಸುದ್ದಿ ಆಕಾಶವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯ ಮೂಖಾ೦ತರ ಮಾತ್ರ ಗೊತ್ತಾಗಿತ್ತು.    ಆಗೆಲ್ಲ ರೇಡಿಯೋ ಇದ್ದವರು ರೇಡಿಯೋ ಲೈಸೆನ್ಸ್ ಹೊಂದಿರ ಬೇಕಿತ್ತು ಮತ್ತು ಪ್ರತಿ ವಷ೯ ನವೀಕರಿಸಬೇಕಿತ್ತು, ಇದನ್ನ ಪರಿಶೀಲಿಸಲು ಅಂಚೆ ಇಲಾಖೆ ಇನ್ಸಸ್ಪೆಕ್ಟರ್ ಬರುತಿದ್ದರು, ಮನೆಯ ಮೇಲೆ ನೇತುಹಾಕುತ್ತಿದ್ದ ಬಲೆಯ೦ತಹ ಬಟ್ಟಿ ರೀತಿಯ ಅಂಟೆನಾ ನೋಡಿ ಆ ಮನೆಯಲ್ಲಿ ರೆಡಿಯೋ ಇದೆ ಅಂತ ಕಂಡು ಹಿಡಿತಿದ್ದರು.     ನಮ್ಮ ಮನೇಲಿ ರೇಡಿಯೋ ಇತ್ತು ಹಾಗೆ ನಿತ್ಯ ಪ್ರಜಾವಾಣಿ ಪತ್ರಿಕೆ ಬರುತ್ತಿತ್ತು.    ನಮ್ಮ ತಂದೆ ಮತ್ತು ತಾಯಿ ಶಿವರಾಮ ಕಾರಂತರ ಈ ಕಾದ೦ಬರಿ ಓದಿದ್ದರು ಮತ್ತು ಇದು ಸಿನಿಮಾ ಆಗಿದ್ದು, ರಾಷ್ಟ್ರ ಪ್ರಶಸ್ತಿ ಬಂದಿದ್ದು , ಸಿನಿಮಾದ ನಾಯಕ ನಟಿ ಪದ್ಮಾ ಕುಮುಟಾ ಸಾಗರದದವರು ಎಂಬುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ಅದೇ ಸ೦ದಭ೯ದಲ್ಲಿ ಈ ಸಿನೆಮಾ ಆನಂದಪುರಂಗೆ 10 ಕಿಮೀ ದೂರದ ರಿಪನ ಪೆಟೆಯ ಚಿತ್ರ ಮಂದಿರದಲ್ಲಿ ಈ ಸಿನೆಮಾ ಹಾಕಿದ್ದರು, ಅವತ್ತೇ ಕೊನೆ ದಿನ ಯಾಕೆಂದರೆ ಜನ ಈ ಸಿನೆಮಾ ನೋಡಲು ಹೆಚ್ಚು ಬರದಿದ್ದರಿಂದ ತೆಗಿತಾರೆ ಇವತ್ತೇ ಈ ಸಿನಿಮಾ ನೋಡೊಣ ತಯಾರಾಗಿ ಅಂತ ನಮ್ಮ ತಂದೆ ಹೇಳಿದಾಗ ನಾವೆಲ್ಲ ಹೊರಟೆವು.     ಕ್ರಿಸ್ತಿನಾ ಬಾಯಿರವರ ಎತ್ತಿನ ಗಾಡಿ ಅವರ ಮಗ ಅಂತೋನಿ ಲೋಬೋ ತಂದ ಅದರಲ್ಲಿ ಎಲ್ಲರೂ ಸಿನೆಮಾ ನೋಡ

ಜೇನು ಡಾಕ್ಟರ್ ಎಂದು ನಾವೆಲ್ಲ ಕರೆಯುವ ಸತ್ಯಣ್ಣ

ಜೇನು ಕೃಷಿ ವಿಶಿಷ್ಟ, ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೇಶವಪುರದವರಾದ ಕೃಷಿಕ ಸತ್ಯಣ್ಣ ಪರಿಣಿತರು.      ನಮ್ಮ ಮನೆಯಲ್ಲಿ ಎರಡು ಜೇನು ಕುಟುಂಬಗಳ ಪೆಟ್ಟಿಗೆಗಳನ್ನ ಸಾಗರದ ಜೇನು ಸಹಕಾರಿ ಸಂಘದ ಅಧ್ಯಕ್ಷರಾದ ಗೆಳೆಯ ನಾಗೇಂದ್ರ ಸಾಗರರಿಂದ ಖರೀದಿಸಿದೆ, ನಂತರ ಇದರಲ್ಲಿಡಲು ಜೇನು ಕುಟುಂಬಗಳನ್ನ ಈ ಸತ್ಯಣ್ಣನಿಂದ ಖರೀದಿಸಿದೆ.      ಸತ್ಯಣ್ಣ ಸ್ಥಳಿಯ ಜೇನು ತಜ್ಞ ಆದರೆ ಸದಾ ಮದ್ಯದ ಅಮಲಿನಲ್ಲಿ ಇರುತಾರಾದ್ದರಿಂದ ಅನೇಕರು ಇವರ ಮಾತು ಆಲಿಸುವುದಿಲ್ಲ ಆದರೆ ಸತ್ಯಣ್ಣ ಪ್ರಾಮಾಣಿಕ ಮತ್ತು ಜೇನಿನ ಬಗ್ಗೆ ಅಪಾರ ಅನುಭವ ಇರುವಾತ, ಅವರು ಎಷ್ಟು ಕುಡಿದು ಬಂದರೂ ನನ್ನ ಆಪೀಸಲ್ಲಿ ಅವರಿಗೆ ಸಿಗುವ ಗೌರವ ಮತ್ತು ಜೇನು ತಂದದ್ದು, ಅದರಿಂದ ಜೇನು ತೆಗೆಯುವುದು ನೋಡಿ, ನಮ್ಮ ಲಾಡ್ಜನ ಮಂಜುಳಮ್ಮ ಜೇನಿನ ಡಾಕ್ಟರ್ ಅಂತ ಸತ್ಯಣ್ಣನನ್ನ ಕರೆಯುತ್ತಾಳೆ ಯಾಕೆಂದರೆ ದನ ಮತ್ತು ನಾಯಿಗೆ ಚಿಕಿತ್ಸೆಗೆ ದನದ ಡಾಕ್ಟರ್ ಬರುತ್ತಾರೆ ಅದೇ ರೀತಿ ಜೇನಿಗೆ ಜೇನು ಡಾಕ್ಟರ್ ಹಾಗಾಗಿ ಸತ್ಯಣ್ಣ ನಮ್ಮಲ್ಲಿ ಎಲ್ಲಾ ಕೆಲಸದವರ ಬಾಯಲ್ಲಿ ಜೇನುಡಾಕ್ಟರ್ ಆಗಿದ್ದಾರೆ.      ಪ್ರತಿ ಮನೆಯಲ್ಲೂ  ಎರೆಡು ಪೆಟ್ಟಿಗೆ ಜೇನು ಕೃಷಿ ಮಾಡಿದರೆ ಮನೆ ಬಳಕೆಗೆ ಪರಿಶುದ್ಧ ಜೇನುತುಪ್ಪ ಸಿಗುತ್ತದೆ, ಕನಿಷ್ಠ 10 ಜೇನು ಪೆಟ್ಟಿಗೆ ಇಟ್ಟರೆ ಮಾರಾಟವೂ ಮಾಡಬ ಹುದು.     

ಈ ನದಿಯ ಬಂಡೆ ಮೇಲೆಲ್ಲ ಈಶ್ವರ ಲಿಂಗ, ಸಹಸ್ರ ಲಿಂಗ.

ಉ.ಕ.ಜಿಲ್ಲೆಯ ಸಿಸಿ೯ಯಿ೦ದ ಯಲ್ಲಾಪುರ ರಸ್ತೆಯಲ್ಲಿ ಸಹ ಸಹಸ್ರ ಲಿಂಗ ಎಂಬ ಸ್ಥಳವಿದೆ ಇಲ್ಲಿ ಶಾಲ್ಮಲ ಎಂಬ ನದಿ ಹರಿಯುತ್ತದೆ. ಈ ನದಿಯಲ್ಲಿ ಅಸ೦ಖ್ಯ ಬಂಡೆಗಲ್ಲುಗಳಿವೆ ಆ ಎಲ್ಲಾ ಬಂಡೆಗಲ್ಲು ಗಳ ಮೇಲೆ ಈಶ್ವರ ಲಿಂಗಳನ್ನ ಕೆತ್ತಿದ್ದಾರೆ.   ಹರಿಯುವ ಜುಳು ಜುಳು ನೀರಿನ ತಂಪಿನ ದಟ್ಟ ಕಾಡಿನ ಮಧ್ಯದ ಈ ಸ್ಥಳದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಪ್ರವಾಸಿಗರಿಗಾಗಿ ಪಾಕಿ೯೦ಗ್, ಕ್ಯಾ೦ಟೀನ್ ಮತ್ತು ಟಾಯಿಲೆಟ್ ವ್ಯವಸ್ಥೆ ಮಾಡಿರುವುದರಿ೦ದ ಪ್ರವಾಸಿಗಳಿಗೆ ಅನುಕೂಲ ಆಗಿದೆ.   ಸೋದೆಯ ರಾಜ ಅಲಸಪ್ಪ ನಾಯಕರಿಗೆ ಸಂತಾನ ಭಾಗ್ಯ ಇಲ್ಲದ್ದರಿಂದ ಜೋತಿಷಿಗಳು ಸಹಸ್ರ ಲಿಂಗ ಕೆತ್ತಿಸಿ ಪೂಜಿಸಿದರೆ ಮಕ್ಕಳಾಗುತ್ತಾರೆ ಎಂದಿದ್ದರಿಂದ ರಾಜ ಈ ಲಿಂಗ ಕೆತ್ತಿಸಿ ಪೂಜಿಸಿದರೆಂದು ಇದರಿಂದ ಅವರಿಗೆ ಮಕ್ಕಳ ಬಾಗ್ಯ ದೊರಕಿತೆಂದು ಇತಿಹಾಸವಿದೆ.   ನದಿಯಲ್ಲಿ ಗಣಪತಿಯೂ ಇದ್ದಾನೆ ಮು೦ಜಾನೆ ಇಲ್ಲಿ ಅಡಿಕೆಯ ಹೂವಿನ ಹಿಂಗಾರ ಮುಡಿಸಿ ಅಚ೯ಕರು ಪೂಜೆ ಮಾಡಿ ಹೋಗುತ್ತಾರೆ, ಬರುವ ಪ್ರವಾಸಿಗಳು ನದಿಯಲ್ಲಿ ಎಲ್ಲಾ ಲಿಂಗಗಳನ್ನ ದಶಿ೯ಸುತ್ತಾರೆ, ನೀರಲ್ಲಿ ಈಜಾಡುತ್ತಾರೆ.    ಆಯಾಸವಾದಾಗ ಮರಗಳ ತಂಪು ನೆರಳಲ್ಲಿ ವಿರಮಿಸುತ್ತಾರೆ, ಕಾಲನ್ನ ಹರಿಯುವ ತಣ್ಣನೆಯ ನೀರಲ್ಲಿ ಇಳಿಬಿಟ್ಟರೆ ಇಲ್ಲಿನ ನೈಸಗಿ೯ಕ ಮೀನುಗಳಿಂದ ಪೆಡಿಕ್ಯುರ್ ಆಗುತ್ತೆ.   ಇದೊಂದು ಸುಂದರ ತಾಣ.