ಚೊಮನ ದುಡಿ ಸಿನಿಮಾ ಶಿವರಾಂ ಕಾರಂತರ ಕಾದಂಬರಿ ಆದರಿತ ಸಿನಿಮಾ.
ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು, ಆಗ ಈ ಎಲ್ಲಾ ಸುದ್ದಿ ಆಕಾಶವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯ ಮೂಖಾ೦ತರ ಮಾತ್ರ ಗೊತ್ತಾಗಿತ್ತು.
ಆಗೆಲ್ಲ ರೇಡಿಯೋ ಇದ್ದವರು ರೇಡಿಯೋ ಲೈಸೆನ್ಸ್ ಹೊಂದಿರ ಬೇಕಿತ್ತು ಮತ್ತು ಪ್ರತಿ ವಷ೯ ನವೀಕರಿಸಬೇಕಿತ್ತು, ಇದನ್ನ ಪರಿಶೀಲಿಸಲು ಅಂಚೆ ಇಲಾಖೆ ಇನ್ಸಸ್ಪೆಕ್ಟರ್ ಬರುತಿದ್ದರು, ಮನೆಯ ಮೇಲೆ ನೇತುಹಾಕುತ್ತಿದ್ದ ಬಲೆಯ೦ತಹ ಬಟ್ಟಿ ರೀತಿಯ ಅಂಟೆನಾ ನೋಡಿ ಆ ಮನೆಯಲ್ಲಿ ರೆಡಿಯೋ ಇದೆ ಅಂತ ಕಂಡು ಹಿಡಿತಿದ್ದರು.
ನಮ್ಮ ಮನೇಲಿ ರೇಡಿಯೋ ಇತ್ತು ಹಾಗೆ ನಿತ್ಯ ಪ್ರಜಾವಾಣಿ ಪತ್ರಿಕೆ ಬರುತ್ತಿತ್ತು.
ನಮ್ಮ ತಂದೆ ಮತ್ತು ತಾಯಿ ಶಿವರಾಮ ಕಾರಂತರ ಈ ಕಾದ೦ಬರಿ ಓದಿದ್ದರು ಮತ್ತು ಇದು ಸಿನಿಮಾ ಆಗಿದ್ದು, ರಾಷ್ಟ್ರ ಪ್ರಶಸ್ತಿ ಬಂದಿದ್ದು , ಸಿನಿಮಾದ ನಾಯಕ ನಟಿ ಪದ್ಮಾ ಕುಮುಟಾ ಸಾಗರದದವರು ಎಂಬುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ಅದೇ ಸ೦ದಭ೯ದಲ್ಲಿ ಈ ಸಿನೆಮಾ ಆನಂದಪುರಂಗೆ 10 ಕಿಮೀ ದೂರದ ರಿಪನ ಪೆಟೆಯ ಚಿತ್ರ ಮಂದಿರದಲ್ಲಿ ಈ ಸಿನೆಮಾ ಹಾಕಿದ್ದರು, ಅವತ್ತೇ ಕೊನೆ ದಿನ ಯಾಕೆಂದರೆ ಜನ ಈ ಸಿನೆಮಾ ನೋಡಲು ಹೆಚ್ಚು ಬರದಿದ್ದರಿಂದ ತೆಗಿತಾರೆ ಇವತ್ತೇ ಈ ಸಿನಿಮಾ ನೋಡೊಣ ತಯಾರಾಗಿ ಅಂತ ನಮ್ಮ ತಂದೆ ಹೇಳಿದಾಗ ನಾವೆಲ್ಲ ಹೊರಟೆವು.
ಕ್ರಿಸ್ತಿನಾ ಬಾಯಿರವರ ಎತ್ತಿನ ಗಾಡಿ ಅವರ ಮಗ ಅಂತೋನಿ ಲೋಬೋ ತಂದ ಅದರಲ್ಲಿ ಎಲ್ಲರೂ ಸಿನೆಮಾ ನೋಡಿ ಬಂದ ನೆನಪು ನಾವೆಲ್ಲ ಅತಿ ಸಣ್ಣವರಾದ್ದರಿಂದ ಸಿನೆಮಾ ಅಥ೯ವಾಗಲಿಲ್ಲ ಆದರೆ ಎತ್ತಿನ ಗಾಡಿಯಲ್ಲಿ ಈ ಕಾದ೦ಬರಿ ಓದಿದ್ದ ಆಪ್ಪ, ಅಮ್ಮ ಮತ್ತು ಕ್ರಿಸ್ತಿನಾ ಬಾಯಿ ಸಂಬಾಷಣೆಯಿ೦ದ ನಮಗೆ ಸಿನಿಮಾ ಆಥ೯ ಆಗಿತ್ತು.
2001 ರಲ್ಲಿ ಸಾಗರದ ಪುರಸಭೆಗೆ ಜನತಾರಂಗ ಹೆಸರಲ್ಲಿ ಅಭ್ಯಥಿ೯ಗಳನ್ನ ಚುನಾವಣೆಗೆ ನಿಲ್ಲಿಸಿದಾಗ ಇವರ ಸಹೋರಿಯ ಪರವಾಗಿ ಇವರು ಚುನಾವಣಾ ಪ್ರಚಾರಕ್ಕೆ ಬಂದಿದ್ದರು, ಅವಾಗ ಇವರೊ೦ದಿಗೆ ಅದ೯ ದಿನ ಸಾಗರ ಪಟ್ಟಣದಲ್ಲಿ ಒಡಾಡಿದಾಗ ಅನ್ನಿಸಿದ್ದು ಇವರೊಬ್ಬ ಸರಳ ವ್ಯಕ್ತಿತ್ವದ ಅಪೂವ೯ ಕಲಾವಿದೆ.
ಪದ್ಮಾಕುಮಟಾ ಸಾಗರದ ಸಮಾಜವಾದಿ S. S. ಕುಮಾಟರ ಕುಟುಂಬದವರು ಅವರು ನಮ್ಮ ತಾಲ್ಲೂಕಿನವರೆಂಬ ಹೆಮ್ಮೆ ನಮಗೆ.
6 ಮಾಚ೯ 2017 ರಂದು ಕನ್ನಡ ದಾರಾವಹಿ ಚಿತ್ರಿಕರಣದ ಸಂದಭ೯ದಲ್ಲಿ ತೀವ್ರ ಹೃದಯಾಘಾತದಿಂದ ನಿದನರಾದ ಸುದ್ದಿ ಕೇಳಿ ತುಂಬಾ ಬೇಸರವಾಯಿತು ಫೆಬ್ರವರಿ 2017ರಂದು ಸಾಗರದ ಪ್ರಸಿದ್ದ ಮಾರಿಕಾಂಭಾ ಜಾತ್ರೆ ಸಂದಭ೯ದಲ್ಲಿ ಸಾಗರಕ್ಕೆ ಬಂದಿದ್ದರು, ಮಾರಿಕಾಂಬಾ ದೇವಾಲಯದಲ್ಲಿ ದೇವಿ ದಶ೯ನ ಮಾಡಿದ್ದರು,ಮಾರಿಕಾಂಬಾ ಸಮಿತಿಯಿ೦ದ ಸನ್ಮಾನ ಸ್ವೀಕರಿಸಿದ್ದು ಒಂದು ನೆನಪು.
ಸಾಗರದ ಖ್ಯಾತ ಕಲಾವಿದೆಗೆ ಇದು ನನ್ನ ನುಡಿ ನಮನ.
Comments
Post a Comment