Skip to main content

Posts

Showing posts with the label These two persons since 50 years solving village dispute by councilling

ಕುಂಸಿಯಲ್ಲಿ 50 ವಷ೯ದಿಂದ ಜನರ ವ್ಯಾಜ್ಯ ಸ್ಥಳಿಯವಾಗಿ ಬಗೆಹರಿಸುವ ಪಂಚಾಯಿತಿದಾರ ಜೋಡಿ ಸಂಜೀವಪ್ಪ ಮತ್ತು ರಾಮಪ್ಪ .

#ಕುಂಸಿ_ಎಂಬ_ಮಿನಿಭಾರತ  #ಸತತ_50_ವಷ೯ದಿಂದ_ಜನರ_ವ್ಯಾಜ್ಯ_ಬಗೆಹರಿಸುವ_ಪಂಚಾಯಿತಿದಾರ_ಜೋಡಿ #ಕುಂಸಿ_ಸಂಜೀವಪ್ಪ_ಮತ್ತು_ರಾಮಪ್ಪ   ಶಿವಮೊಗ್ಗ ಸಾಗರ ಮಾಗ೯ದ ಕುಂಸಿ ಬಗ್ಗೆ ತಿಳಿದಷ್ಟು ಕಡಿಮೆ, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ನಿಲ್ದಾಣ ಹೊಂದಿರುವ ಈ ಊರು ತಾಲ್ಲೂಕ್ ಕೇಂದ್ರ ಆಗಬೇಕೆಂಬ ಬಹುಕಾಲದ ಜನರ ಒತ್ತಾಯ ಇನ್ನೂ ಈಡೇರಿಲ್ಲ.   ಈ ಊರಲ್ಲಿ ಜಾತಿಗೊಂದು ಕೇರಿ ಮತ್ತು ಕೇರಿಗೊಂದು ಜಾತಿಯ ದೇವಾಲಯ ಇದೆ.  ಬಹುಶಃ ಜಾತಿ ವ್ಯವಸ್ಥೆಯ ಊರಿನ ಕೇರಿಗಳು ಉಳಿದಿರುವ ರಾಜರ ಕಾಲದ ಪಳಿಯುಳಿಕೆ ಈ ಊರು.   ಉದಾಹರಣೆ ಉಪ್ಪಾರ ಕೇರಿ ಅಲ್ಲಿ ಆ ಸಮಾಜದ ದುಗ೯ಮ್ಮ ದೇವಾಲಯ,ಕುರುಬರ  ಎರೆಡು ಕೇರಿ  ಅಲ್ಲಿ ಮಾಯಮ್ಮ ಮತ್ತು ಸಿದ್ದೇಶ್ವರ ದೇವಾಲಯ, ಮಡಿವಾಳರ ಕೇರಿ ಅಲ್ಲಿ ಮಾಚಿದೇವರು ಮತ್ತು ಹಳದಮ್ಮ ದೇವಾಲಯ ಇದೆ, ಲಿಂಗಾಯಿತರ ಎರೆಡು ಕೇರಿ ಅಲ್ಲಿ ವೀರಭದ್ರ ಮತ್ತು ಬಸವಣ್ಣ ದೇವಾಲಯ ಇದೆ, ಬ್ರಾಹ್ಮಣರ ಕೇರಿ ಅಲ್ಲಿ ಆಂಜನೇಯ ಮತ್ತು ತಿರುಪತಿ ಶ್ರೀನಿವಾಸ, ಮೈಸೂರು ರಾಜಾಶ್ರಯದ ಜಟ್ಟಿಗಳ ಕೇರಿ ಅಲ್ಲಿ ನಿಂಬುಜಾ ದೇವಿ ದೇವಸ್ಥಾನ, ವಡ್ಡ ಬೋವಿ ಕಾಲೋನಿ ಅಲ್ಲಿ ಗುಳ್ಳಮ್ಮ ಮತ್ತು ದುರ್ಗಮ್ಮ ದೇವಸ್ಥಾನ, ಬ್ಯಾಡರ ಕೇರಿ ಅಲ್ಲಿ ದುರ್ಗಮ್ಮ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ, ಗಂಗಾಮತಸ್ಥರ ಕೇರಿ ಅಲ್ಲಿ ಗಂಗಾ ಪರಮೇಶ್ವರಿ ದೇವಸ್ಥಾನ, ಚೆಲುವಾದಿಯರಕೇರಿ, ಮೇದಾರ ಕೇರಿ, ಹರಿಜನರ ಕೇರಿಯಲ್ಲಿ ಯ...