Skip to main content

Posts

Showing posts with the label Doctor with spots spirit and humanity concer Shimoga diabetes specialist Dr Pritham

Blog number 1632. ಕ್ರೀಡಾ ಮನೋಭಾವದ ಮಾನವೀಯ ಅಂತಃಕರಣದ ಶಿವಮೊಗ್ಗದ ಡಯಾಬಿಟಿಸ್ ತಜ್ಞ ಡಾ.ಪ್ರೀತಂ ಮತ್ತು ಅವರ ಡಯಾಬಿಟೀಸ್ ತಜ್ಞ ಚಿಕಿತ್ಸೆ

ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು   ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂದು 600 ಔಷದಿಗೆ  ಒಟ್ಟು 1000 ಕಳಿಸಿ ಅಂದರು.   ಹೀಗೆ ನಾನು ಆಗಾಗ ನನ್ನ ಹತ್ತಿರ ಬರುವ ಅತ್ಯಂತ ಬಡವರನ್ನ ಇವರ ಹತ್ತಿರ ಇವರು ಸಿಗದಿದ್ದರೆ ಮೆಗಾನ್ ಆಸ್ಪತ್ರೆಯಲ್ಲಿ ನ ವೈದ್ಯ ದಂಪತಿ ನಾಗರಾಜ್ ಮತ್ತು ಶ್ರೀಮತಿ ರಾಜ ಲಕ್ಷ್ಮಿ ಹತ್ತಿರ ಕಳಿಸುತ್ತೇನೆ.   ಸಂಜೆ ರೋಗಿ ಮಗನೊಂದಿಗೆ ಬಂದ ತಾಯಿ ಮೊಗದಲ್ಲಿ ಬೆಳಿಗ್ಗೆ ಇದ್ದ ಆತಂಕ ಕಳೆದು ನೆಮ್ಮದೀಯ ಜೀವನೋತ್ಸವ ಇತ್ತು, ವೈದ್ಯರು ಅವರ ಚಿಕಿತ್ಸೆಯ ಹಣವೂ ಪಡೆಯದೆ ಪರೀಕ್ಷೆ ಮಾಡಿ ಒಂದು ತಿಂಗಳ ಔಷಧಿ ಕಳಿಸಿದ್ದಾರೆ.   ಶಿವಮೊಗ್ಗದ ಅನೇಕ ವೈದ್ಯರ ಪರಿಚಯ ಇದೆ ಆದರೆ ಅವರಾರು ಈ ಕೂಲಿ ಕಾಮಿ೯ಕರ, ಸಣ್ಣ ಜಾತಿಗಳ ಜನರ ಚಿಕಿತ್ಸೆಗೆ ಕಳಿಸಿದರೆ ಆಸಕ್ತಿ ತೋರಿಸುವುದಿಲ್ಲ, ಶ್ರೀಮಂತ ರೋಗಿಗಳೆ ಅವರ ಟಾಗೆ೯ಟ್ ಅದು ತಪ್ಪು ಅಲ್ಲ ಯಾಕೆಂದರೆ ಕಾಪೊ೯ರೇಟ್ ಆಸ್ಪತ್ರೆಗಳ ಅಘೋಷಿತ ನಿಯಮ ಕೂಡ.   ಡಾ.ಪ್ರೀತಂ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ಪರಿಣಿತ ವೈದ್ಯರು, ಹಾಲಿ ದುಗಿ೯ಗುಡಿಯ ರಾಜ್ ಕುಮಾರ್ ಡಯೋಗ್ನೀಸ್ ಸೆಂಟರ್ ಇವರೆ ವಹಿಸಿಕೊಂಡಿದ್ದಾರೆ ಇವರ ತಂದೆ ಡಾ. ಈಶ್ವರಪ್ಪನವರು ಸೊರಬ ಮೂಲದವರು, ಇವರು ...