https://youtu.be/mc3Y0JsH5zU?feature=shared #ನನ್ನ_ಮೊದಲ_ಪಾದರಕ್ಷೆಗಳು_ಹವಾಯ್_ಚಪ್ಪಲಿಗಳು. #ಪಾದ_ರಕ್ಷಣೆಗೆ_ಚಪ್ಪಲಿ_ಬೇಕಾ_ಏಕೆ_ಎಂಬ_ಕಾಲ_ಅದು. #ಬಡವ_ಶ್ರೀಮಂತ_ಎಂಬ_ಬೇದ_ಹವಾಯಿ_ಚಪ್ಪಲಿಗೆ_ಇಲ್ಲ #ಅಕ್ಯೂಪ್ರಷರ್_ಹವಾಯಿ_ಚಪ್ಪಲಿಗಳು_ಉಪಯುಕ್ತ #ಹವಾಯಿ_ಚಪ್ಪಲಿ_ಮೂಲ? ಐದನೆ ತರಗತಿಯಿಂದ 7 ನೇ ತರಗತಿವರೆಗೆ ಮದ್ಯಾಹ್ನ ಊಟದ ಬೆಲ್ ಹೊಡೆದ ಕೂಡಲೆ ಆನಂದಪುರಂನ ದಾಸಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಿಂದ ಯಡೇಹಳ್ಳಿ ತನಕ 2 ಕಿಮಿ ಓಡುತ್ತಾ ಬಂದು ಅವಸರದಲ್ಲಿ ಗಬಗಬ ಊಟ ಮಾಡಿ ಪುನಃ ವಾಪಾಸ್ 2 ಕಿಮಿ ಓಡಿ ಮಧ್ಯಾಹ್ನದ ತರಗತಿಗೆ ತಲುಪುತ್ತಿದ್ದ ನಮ್ಮ ಯಡೇಹಳ್ಳಿ ವಿದ್ಯಾರ್ಥಿಗಳ ನಿತ್ಯದ ಹವ್ಯಾಸ ಆಗಿತ್ತು. ಬಿರು ಬೇಸಿಗೆಯಲ್ಲಿ ಕಾಲು ಸುಡುವ ಟಾರ್ ರಸ್ತೆಗಳು, ಕಲ್ಲು-ಮುಳ್ಳಿನ ಬಯಲುಗಳಲ್ಲೂ ಬರಿಗಾಲಲ್ಲಿ ಓಡಿಯೂ ಕಾಲಿನ ಪಾದ ಸುರಕ್ಷಿತವಾಗಿ ಇಟ್ಟುಕೊಳ್ಳುವ ಕೌಶಲ್ಯ ನಮ್ಮದಾಗಿತ್ತು ಆದ್ದರಿಂದ ಚಪ್ಪಲಿಗಳು ನಮಗೆ ಲೆಕ್ಕಕ್ಕೆ ಇರಲಿಲ್ಲ. 8 ನೇ ತರಗತಿಗೆ ಸಾಗರದಲ್ಲಿ ಇಂಗ್ಲೀಷ್ ಮೀಡಿಯಂಗೆ ಸೇರಿದಾಗ ಅನಿವಾರ್ಯವಾಗಿ ಹವಾಯಿ ಚಪ್ಪಲಿ ತೊಡುವಂತಾಯಿತು. ಹವಾಯಿ ಚಪ್ಪಲಿ ಕಡಿಮೆ ಬಜೆಟ್ ನ ಪಾದ ರಕ್ಷಣೆಯ ಚಪ್ಪಲಿ ಇದರ ಮೂಲ ಜಪಾನಿನ ಸ್ಯಾಂಡಲ್ ಝೋರಿ ಎನ್ನುತ್ತಾರೆ ನಂತರ ಅಮೇರಿಕಾದ ಹೊನಲೂಲು ರಾಜ್ಯದ ರಾಜಧಾನಿ ಹವಾಯಿ ದ್ವೀಪದ ಟಿ ಮರದ ರಬ್ಬರ್ ಶೀಟ್ ಬ...