Skip to main content

Posts

Showing posts with the label K.Shivaram IAS Memories part 4.He provided suitable posting to my village PWD Gangmens

Blog number 1986.ಕೆ.ಶಿವರಾಮ್ ನೆನಪುಗಳು ಭಾಗ-4. ನಮ್ಮ ಊರಿನ PWD ಗ್ಯಾಂಗ್ ಮನ್ ರಿಗೆ ಸೂಕ್ತ ಇಲಾಖೆಯಲ್ಲಿ ಪೋಸ್ಟಿಂಗ್ ನೀಡಿದ ಶಿವರಾಮ್ ಸಾಹೇಬರ ಮರೆಯಲು ಸಾಧ್ಯವೆ?..

#ಕೆ_ಶಿವರಾಂ_ನೆನಪುಗಳು_ಭಾಗ_4 #ನಮ್ಮ_ಊರಿನ_PWD_ಗ್ಯಾಂಗ್_ಮನ್_ರಿಗೆ #ಸೂಕ್ತ_ಕಛೇರಿಗಳಲ್ಲಿ_ಪೋಸ್ಟಿಂಗ್_ಕೊಡಿಸಿದ್ದರು #ಬಡವರಿಗೆ_ಮನೆ_ನಿವೇಶನ_ಕೊಡುವ_ಇವರ_ಕೆಲಸ_ಕೆಲವರಿಗೆ_ಕಣ್ಣು_ಕೆಂಪಾಗಿಸಿತ್ತು #ದಾವಣಗೆರೆಯಲ್ಲಿ_ಹನ್ನೆರೆಡು_ಸಾವಿರ_ಮನೆ_ನಿರ್ಮಿಸಿ_ಹಂಚಿದ_ದಾಖಲೆ #ಬಡವರ_ಉದ್ದಾರ_ಸಹಿಸದ_ಸಮಾಜ .   ಶಿವರಾಂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾಗಲೇ ಲೋಕೋಪಯೋಗಿ ಇಲಾಖೆ ತನ್ನ ಗ್ಯಾಂಗ್ ಮನ್ ಗಳನ್ನು ರದ್ದು ಮಾಡುವ ತೀರ್ಮಾನ ಆಗಿತ್ತು, ಅನೇಕ ವರ್ಷಗಳಿಂದ ಪಿಡಬ್ಲುಡಿ ಇಲಾಖೆಯ  ದಿನಗೂಲಿ ನೌಕರರಾಗಿದ್ದವರನ್ನು ಸರ್ಕಾರದ ವಿವಿಧ ಇಲಾಖೆಗೆ ಡಿ ದರ್ಜೆ ಹುದ್ದೆಗೆ ನೌಕರರಾಗಿ ನೇಮಿಸುವ ತೀರ್ಮಾನ ರಾಜ್ಯ ಸರ್ಕಾರದ ಸಂಪುಟ ತೆಗೆದುಕೊಂಡಿತ್ತು.    ಆದ್ದರಿಂದ ಅವರೆಲ್ಲ ಸೂಕ್ತ ಪೋಸ್ಟಿಂಗ್ಗಾಗಿ ಒದ್ದಾಡುತ್ತಿದ್ದರು, ನಮ್ಮ ಸಾಗರ  ತಾಲೂಕಿನ ಸುಮಾರು 15 ರಿಂದ  20 ಜನ ಅಂತವರಿಗೆ ತಾಲೂಕು ಪಂಚಾಯತ್ ಕಛೇರಿ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಕಛೇರಿ, ಸರ್ಕಾರಿ ಆಸ್ಪತ್ರೆ, ಸರ್ವೆ ಇಲಾಖೆ ಮುಂತಾದ ಕಡೆಗೆ ನನ್ನ ವಿನಂತಿ ಮೇರೆಗೆ ಶಿವರಾಮ ಅವರು ಅವರಿಗೆಲ್ಲ ಉದ್ಯೋಗಾವಕಾಶ ನೀಡಿದ್ದ ನಾನು ಮರೆಯಲಾರೆ.   ನಮ್ಮ ಊರಿನ ತಾವರೆಹಳ್ಳಿವಿಶ್ವನಾಥರಿಗೆ ಸಾಗರದ ಜಿಲ್ಲಾ ಪಂಚಾಯತ್ ಅಸಿಸ್ಟೆಂಟ್ ಇಂಜಿನಿಯರಿಂಗ್ ಕಛೇರಿಗೆ, ಆನಂದಪುರಂ ಹುಚ್ಚರಾಯರಿಗೆ ಆನಂದಪುರಂ ವೆಟ...