# ಬಿದನೂರು ನಗರದ ಈ ಸು೦ದರ ಈಜು ಕೊಳಗಳ ಸಂಕೀಣ೯ಕ್ಕೆ ಒಮ್ಮೆಯಾದರೂ ಬೇಟಿ ನೀಡಿ.# ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ. ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ. ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿಪ್ರಾರಂಭ ಆಗಿದೆ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ಸಂಶೋದನೆಗೆ ಆಹ೯ವಾಗಿದೆ. ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ. ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದಾರೆ, ಇದರ ಮದ್ಯೆ ರಾಣಿ ಪರಿವಾರದವರಿಗಾಗಿ ಕಲ್ಲಿನ ಸುಂದರ ತೊಟ್ಟಿಲು ಅಲ್ಲಿಗೆ ತಲುಪಲು ಕಲ್ಲಿನ ಸಂಕ ಇದೆ. ಈಜು ಕೊಳದ ಸುತ್ತಲೂ ಸುಂದರವಾದ ಕಟಾಂಜನ, ಕೊಳಕ್ಕೆ ಇಳಿಯಲು ವಿಶಾಲವಾದ ಪಾವಟಿಗೆಗಳಿದೆ. ದೊಡ್ಡ ಕೊಳದ ನೀರು ಹರಿಯುವ ದಿಕ್ಕಿನಲ್ಲಿ ವಿವಿಧ ಆಕೃತಿಯ, ಅಳತೆಯ ಮತ್ತು ಆಳದ 7 ಕೊಳಗಳಿದೆ. ವಷ೯ ಪೂತಿ೯ ಈ ಕೊಳಗಳಲ್ಲಿ ನೀರು ಹರಿಯುವುದರಿಂದ ಇದರ ನೀರು ಮಲೀನವಾಗುವುದಿಲ್ಲ, ಈ ಕೊಳಕ್ಕೆ ಬೆಟ್ಟದ ಮೇಲಿನ ದೊಡ್ಡಕೆರೆಯಿOದ ನ...