Blog number 992. ತಾಳಗುಪ್ಪದ ರಾ.ಹೆ. 69 ಕ್ಕೆ ಅತಿ ಸಮೀಪದ ಶರಾವತಿ ನದಿ ಮುಳುಗಡೆಯ ಜನವಸತಿ ಕೇಂದ್ರ ಬೆಳ್ಳೆಣ್ಣೆ ಮತ್ತು ಅಲ್ಲಿನ ಪ್ರಾಚೀನ ಕಾಲದ ಭಕ್ತಿ-ಶಕ್ತಿಯ ಶಂಭೂಲಿಂಗೇಶ್ವರ ದೇವಾಲಯ.
#ಬೆಳ್ಳೆಣ್ಣೆಯ_ಪುರಾತನ_ಶ೦ಭು_ಲಿಂಗೇಶ್ವರ #ಪ್ರಾಚೀನ_ಪುಣ್ಯಕ್ಷೇತ್ರ. #ಶರಾವತಿ_ಮುಳುಗಡೆಯಿಂದ_ವಿರಳ_ಜನವಸತಿ. #ಖೇಚರಿ_ವಿದ್ಯೆ_ಪಾರಂಗಿತ_ಕಲ್ಸೆ_ಸ್ವಾಮಿಗಳು_ಈ_ದೇವಾಲಯದ_ಹಿಂದಿನ_ಬಂಡೆಯ_ಗುಹೆಯಲ್ಲಿ_ತಪಸ್ಸು_ಮಾಡಿದ್ದರು. #ಆಕರ್ಷಕ_ಬೃಹತ್_ಲಿಂಗ. #ತಾಳಗುಪ್ಪದ_ಪೋಲಿಸ್_ಠಾಣೆ_ಪಕ್ಕದಿಂದ_ಕೇವಲ_5ಕಿಮಿ #ರಾಷ್ರೀಯ_ಹೆದ್ದಾರಿ_69ಕ್ಕೆ_ಅತಿ_ಸಮೀಪದ_ಶರಾವತಿ_ಮುಳುಗಡೆ_ಪ್ರದೇಶ_ದರ್ಶನ. https://youtube.com/shorts/ujNYu34w6-4?feature=share ಪ್ರಖ್ಯಾತ ಜೋಗ ಜಲಪಾತಕ್ಕೆ ನೀವು ಮುಂದಿನ ಬಾರಿ ವೀಕ್ಷಣೆಗೆ ಹೋಗುವಾಗ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ ದಾಟಿ ತಾಳಗುಪ್ಪ ಎಂಬ ಹೋಬಳಿ ಕೇಂದ್ರ (ಕೊನೆಯ ರೈಲು ನಿಲ್ದಾಣದ ಊರು)ದ ಪೋಲಿಸ್ ಠಾಣೆಯ ಎಡಕ್ಕೆ ತಿರುಗಿ ಸುಮಾರು 3 ಕಿಮಿ ಸಾಗಿದರೆ ಬೆಳ್ಳೆಣ್ಣೆ ಎಂಬ ಊರು ಪ್ರಾರಂಭದ ಬೋರ್ಡ್ ನೋಡುತ್ತೀರಿ ಅಲ್ಲಿಂದ ಮುಂದೆ ಹೊದರೆ ಪ್ರಾಚೀನವಾದ ಶಂಭುಲಿಂಗೇಶ್ವರ ದೇವಾಲಯ ಸಿಗುತ್ತದೆ. ಈ ದೇವಾಲಯದ ರಚನೆ, ಪೌಳಿಗಳು ಒಂದು ಕಾಲದ ಈ ದೇವಾಲಯದ ಶ್ರೀಮಂತಿಕೆ ಮತ್ತು ಮುಳುಗಡೆಯ ಮೊದಲಿನ ಜನ ವಸತಿ ಕೇಂದ್ರದ ಆರಾಧ್ಯ ಕೇಂದ್ರವಾಗಿದ್ದರ ಕುರುಹು ಆಗಿದೆ. ಮುಜರಾಯಿ ಇಲಾಖೆಗೆ ಈ ದೇವಳ ಸೇರಿದೆ, ಇಲ್ಲಿನ ದೇವರ ಬೆಳ್ಳಿ ಕವಚದಲ್ಲಿ ಭಕ್ತರು ದರ್ಶನದಲ್ಲಿ ಒಂದು ರೀತಿಯ ರುದ್ರ ರೂಪ ನೋಡಬ...