#ಆನಂದಪುರಂನ_ಜನಪರ_ವಾಸು_ವಕೀಲರು. #ಮಗನ_ವಿವಾಹ_ಆರತಕ್ಷತೆ_ನಮ್ಮ_ಕಲ್ಯಾಣ_ಮ೦ಟಪದಲ್ಲಿ_ನೆರವೇರಿತು. #ವೃತ್ತಿ_ಜೀವನದಂತೆ_ನಿತ್ಯ_ಜೀವನದಲ್ಲೂ_ಶಿಸ್ತು_ಕಾಪಾಡಿದ್ದಾರೆ. #ವಿನಯತೆಯಿಂದ_ಎಲ್ಲರ_ಜೊತೆ_ಗೌರವದಿಂದ_ನಡೆದುಕೊಳ್ಳುವ_ವಾಸುಲಾಯರ್_ನನಗೆ_ಇಷ್ಟವಾದರು. ಆನಂದಪುರಂನ ವಾಸು ವಕೀಲರು ಅವರ ವೃತ್ತಿ ಜೀವನ ಪ್ರಾರಂಬಿಸಿ 25 ವರ್ಷ ಆಗಿರಬಹುದು ಅವತ್ತಿನಿಂದ ಇವತ್ತಿನವರೆಗೂ ಅವರ ನಡತೆಯಲ್ಲಿ ನಾನು ವ್ಯತ್ಯಾಸ ಕಂಡಿಲ್ಲ. ಇವರ ಪತ್ನಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಇವರು ಸಾಗರದ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ, ಏಕೈಕ ಪುತ್ರನ ವಿವಾಹ ಕಳೆದ ಭಾನುವಾರ ಸಾಗರದಲ್ಲಿ ನಡೆಯಿತು. ನಿನ್ನೆ ಮ೦ಗಳವಾರ ಮಗನ ವಿವಾಹ ಆರತಕ್ಷತೆ ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ವಿಜೃಂಭಣೆಯಿಂದ ನಡೆಸಿದರು. ಒಂದು ತಿಂಗಳ ಹಿಂದೆಯೇ ಕಲ್ಯಾಣ ಮಂಟಪ ನಿಗದಿ ಮಾಡಲು ಕಲಾವಿದ, ವಿಜಯ ಆರ್ಟ್ಸನ ವಿಜಯ ಜೊತೆ ಬಂದಿದ್ದರು. ಅವತ್ತು ಅವರ ಆಶಯ ಅವರ ಹುಟ್ಟೂರಿನ ಸಂಬಂದಿಗಳು, ಗೆಳೆಯರು ಮತ್ತು ಅವರ ಕಕ್ಷಿದಾರರೆಲ್ಲರನ್ನು ಕರೆಯಬೇಕು ಅವರಿಗೆ ಔತಣ ಕೂಟ ನೀಡಬೇಕು ಎಂಬುದು. ಆರತಕ್ಷತೆ ಹಿಂದಿನ ದಿನ ರಾತ್ರಿ ಅವರ ಜೊತೆ ಮಾತಾಡುವಾಗ ಕೇಳಿದ್ದೆ ಎಷ್ಟು ಜನರ ಕರೆದಿದ್ದೀರಿ ಮತ್ತು ನಿಮ್ಮ ನಿರೀಕ್ಷೆ ಎಷ್ಟು ಜನ ಅಂತ ಆಗ ಅವರು ಹೇಳಿದ್ದು 1200 ಜನ ಆಗಮಿಸುವ ನಿರೀಕ್ಷೆ ತಮ್ಮದು ಸುಮಾರು 1...