Skip to main content

Posts

Showing posts with the label Mr Chouda Nayak I ruvakki a Potter Contributed his 5 Acres furtile land to Acharya Vinoba Bhave

ಭಾಗ-53, ಆನಂದಪುರಂ ಇತಿಹಾಸ, ಆಚಾರ್ಯ ವಿನೋಬಾ ಭಾವೆಯವರಿಗೆ ತನ್ನ ಫಲವತ್ತಾದ 5 ಎಕರೆ ಜಮೀನು ಬದರೀ ನಾರಾಯಣ ಅಯ್ಯ0ಗಾರ್ ಸಹೋದರರ ಪ್ರೇರಣೆಯಿಂದ ಭೂದಾನ ಮಾಡಿದ ಇರುವಕ್ಕಿ ಕುಂಬಾರ ಚೌಡ ಶೆಟ್ಟರು ಮಹಾದಾನಿಗಳು.

#ಭಾಗ_53. #ಆನಂದಪುರಂ_ಇತಿಹಾಸ #ಇರುವಕ್ಕಿ_ಕುಂಬಾರ_ಚೌಡಶೆಟ್ಟರು_ಫಲಭರಿತ_ತರಿ_ಜಮೀನು_ಭೂದಾನ_ಮಾಡಿದ್ದು. #ಮಂಡಲ್_ಪಂಚಾಯ್ತಿ_ಸದಸ್ಯರಾಗಿದ್ದ_ಕುಂಬಾರ್_ಬಸಪ್ಪರ_ತಂದೆ. #ಸ್ವತಃ_ಭೂದಾನ_ಸ್ಪೀಕರಿಸಿದ_ವಿನೋಬಾ_ಭಾವೆ. #ಎಣ್ಣೆಕೊಪ್ಪದ_ಮಲ್ಲಿಕಾಜು೯ನ_ಗೌಡರಿಂದ_ಜಿಲ್ಲೆಯಲ್ಲಿ_ಭೂದಾನ_ಚಳವಳಿ_ಯಶಸ್ವಿ #ಭೂದಾನ_ಮಾಡಿದ_ಆಗಿನ_ಆನಂದಪುರಂ_ಮಹನೀಯರು_ಅಯ್ಯಂಗಾರ್_ಕುಟುಂಬ_ಮತ್ತು_ಸುಳಗೋಡು_ಮುತ್ರಿ_ಗೌಡರ_ಕುಟುಂಬ_ಸ್ಮರಣೀಯರು     ದೇಶದಲ್ಲೇ ಅರಣ್ಯದ ಮಧ್ಯೆ ಇರುವ ಏಕೈಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಇರುವಕ್ಕಿಯದ್ದು, ಇತ್ತೀಚಿಗಷ್ಟೆ ಇದನ್ನು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ಉದ್ಘಾಟಿಸಿದರು 7 ಜಿಲ್ಲೆಯ ವ್ಯಾಪ್ತಿಯ ಈ ವಿಶ್ವವಿದ್ಯಾಲಯಕ್ಕೆ ಕೆಳದಿ ಅರಸರಾದ #ಶಿವಪ್ಪ_ನಾಯಕರ ಹೆಸರು ನಾಮಕರಣ ಮಾಡಿದರು.   ಬಹಳಷ್ಟು ಜನ ಶಿಸ್ತಿನ ಶಿವಪ್ಪ ನಾಯಕರೆಂದರೆ ಅವರ ಕಲ್ಪನೆಯಲ್ಲಿ ಅವರ ಚಿತ್ರ ರಚನೆ ನೋಡಿ ವೇಷ ಭೂಷಣಕ್ಕಾಗಿ ಶಿಸ್ತು ಅಂತಲೇ ಬಾವಿಸಿದ್ದಾರೆ ಆದರೆ ಶಿಸ್ತು ಎಂದರೆ ಅದು ಆ ಕಾಲದ ಭೂಮಿ ಮಾಪಕ ಅಳತೆ ಪಟ್ಟಿ, ಇದರ ಮಾದರಿ ಕೆಳದಿ ರಾಮೇಶ್ವರ ದೇವಾಲಯದ ಹಿಂಭಾಗದ ಗೋಡೆಯಲ್ಲಿ ಶಿಲೆಯಲ್ಲಿ ಕೆತ್ತಿದ್ದಾರೆ, ಆ ಕಾಲದಲ್ಲಿ ಪಲವತ್ತಾದ ಜಮೀನು, ಅನುಪಯುಕ್ತ ಜಮೀನುಗಳನ್ನು ಶಿವಪ್ಪ ನಾಯ...