Skip to main content

Posts

Showing posts with the label S.R.RAO FAMOUS ARCHOLOGIST BORN PLACE IS ANANDAPURAM

Blog number 906. ಭಾರತ ದೇಶದ ಪ್ರಖ್ಯಾತ ಆರ್ಕಿಯಾಲಾಜಿಸ್ಟ್, ಕ್ರಿಸ್ತ ಪೂರ್ವ 1500 ರಲ್ಲಿ ಶ್ರೀ ಕೃಷ್ಣ ಪರಮಾತ್ಮನ ಮುಳುಗಿದ ದ್ವಾರಕಾ ನಗರ ಸಂಶೋದಿಸಿದ ಡಾಕ್ಟರ್ ಶಿಕಾರಿಪುರ ರಂಗನಾಥ ರಾವ್ ಹುಟ್ಟಿದ್ದು ಆನಂದಪುರಂನಲ್ಲಿ, ಆನಂದಪುರಂ ರಂಗನಾಥ ದೇವರ ಹರಕೆಯಂತೆ ಇವರಿಗೆ ರಂಗನಾಥ ಎಂದು ನಾಮಕರಣ, ಇವರ ಜನ್ಮ ದಿನಾಂಕ 1- ಜುಲೈ -1922 ಈ ವರ್ಷ S.R. ರಾವ್ ಅವರ ಜನ್ಮ ಶತಮಾನೋತ್ಸವ.

#ಭಾರತದ_ಪ್ರಖ್ಯಾತ_ಆರ್ಕಿಯಾಲೋಜಿಸ್ಟ್_ಭಗವಾನ್_ಕೃಷ್ಣ_ಪರಮಾತ್ಮನ_ಮುಳುಗಿದ_ದ್ವಾರಕನಗರ_ಸಂಶೋಧಿಸಿದ #ಡಾಕ್ಟರ್_ಶಿಕಾರಿಪುರ_ರಂಗನಾಥ_ರಾವ್_ಜನ್ಮ_ಶತಮಾನೋತ್ಸವ #ಅವರ_ಜನ್ಮದಿನಾಂಕ_1_ಜುಲೈ_1922. #ಅವರ_ಜನ್ಮಸ್ಥಳ_ಆನಂದಪುರಂ #ಆನಂದಪುರಂ_ರಂಗನಾಥ_ದೇವರ_ಹರಕೆಯಂತೆ_ಇವರಿಗೆ_ರಂಗನಾಥ_ಎಂದು_ನಾಮಕರಣ. #ಆನಂದಪುರಂ_ಶಾಲೆ_ಕಾಲೇಜಿನಲ್ಲಿ_ಗ್ರಾಮಪಂಚಾಯತಲ್ಲಿ_ಇವರ_ಪೋಟೋ_ಅನಾವರಣ_ಜನ್ಮಶತಮಾನೋತ್ಸವದ_ಸಂದರ್ಭದಲ್ಲಿ_ಆಗಲಿ. #ದ್ವಾರಕಾದಲ್ಲಿನ_ಶಂಕರಾಚಾಯ೯ರ_ಪೀಠದಲ್ಲಿ_ಇವರ_ಪೋಟೋ_ಹಾಕಿದ್ದಾರೆ.     ಡಾಕ್ಟರ್ ಶಿಕಾರಿಪುರ ರಂಗನಾಥ ರಾವ್ 1977 ರಲ್ಲಿ ಒ0ದು ಸಂಜೆ ನಾವೆಲ್ಲ 7 ನೇ ತರಗತಿಯ ಪಬ್ಲಿಕ್ ಪರೀಕ್ಷೆ ತಯಾರಿಗಾಗಿ ನಮ್ಮ ಪ್ರೀತಿಯ ಕ್ಲಾಸ್ ಟೀಚರ್ ಜಯಂತಿ ಆಳ್ವಾರ್ (ರಂಗನಾಥ ದೇವಾಲಯದ ಅರ್ಚಕರಾಗಿದ್ದ ಆನಂದ ಆಳ್ವಾರ್ ಪುತ್ರಿ) ಉಚಿತವಾಗಿ ನಡೆಸುತ್ತಿದ್ದ ಟ್ಯೂಷನ್ ಗಾಗಿ ಹೋಗಿದ್ದಾಗ ಬಂದಿದ್ದರು.    ಆಗ ರಂಗನಾಥ ದೇವಾಲಯದ ನವೀಕರಣ ಕೆಲಸ ನಡೆಯುತ್ತಿತ್ತು, S.R. ರಾವ್ ರವರೆ ನಮಗೆಲ್ಲ ನಿಮ್ಮ ಪಠ್ಯ ಪುಸ್ತಕದ ಹರಪ್ಪೊ-ಮಹೆಂಜದಾರೋ ಲಿಪಿ ಸಂಶೋದನೆ ಮಾಡಿದವನು ನಾನು ಅಂದಾಗ ನಮಗೆ ದಿಗ್ಬ್ರಮೆ ಆಗಿತ್ತು.  ಶ್ರೀ ಕೃಷ್ಣನ ದ್ವಾರಕೆ ಮುಳುಗಿದ್ದು ಓದಿದ್ದೀರಾ ಅಂದಾಗ ಹೌದು ಎಂದೆ, ನಾನು 5 ಮತ್ತು 6ನೇ ತರಗತಿಯಲ್ಲೇ ನಮ್ಮ ತಂದೆ ಆನಂದಪುರಂನ ರಂಗನಾಥ ಭಟ್ಟರ ತಂದೆ ವೇದ ನಾರಾಯಣ ಭಟ್ಟರ...