Blog number 1028.ಕರಾವಳಿಯ ದೈವಾರಾದನೆಯ೦ತದ್ದೇ ಮಲೆನಾಡಿನ ಗ್ರಾಮ ರಕ್ಷಕ ಬೂತಗಳಿಗೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ ಬಲಿ ನೀಡುವ ನೋನಿ ಎಂಬ ಹಬ್ಬ, ಇದಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು - ಸಾವು - ಮುಟ್ಟಿನ ಸೂತಕವಿದೆ, ಸೂತಕದಿಂದ ಪಾರಾಗುವ ಸುಲಭ ಮಾರ್ಗವೂ ಇದೆ
#ಮಲೆನಾಡಿನಲ್ಲಿ_ಊರ_ಕಾಯುವ_ಬೂತಗಳಿಗೆ_ನೋನಿಎಂಬ_ಕುರಿ_ಕೋಳಿ_ಬಲಿ_ನೀಡುವ_ಹಬ್ಬದ_ಆಚರಣೆ. #ನೋನಿಗೆ_ಜಾತಿ_ಬೇದ_ಇಲ್ಲ_ಆದರೆ_ಹುಟ್ಟು_ಸಾವು_ಮುಟ್ಟಿನ_ಸೂತಕ_ಇದೆ. #ಸೂತಕ_ಆದರೆ_ನೋನಿ_ಆಚರಿಸುವಂತಿಲ್ಲ #ನೋನಿ_ಸಂಭ್ರಮಕ್ಕೆ_ಸೂತಕವನ್ನೆ_ನಿವಾರಿಸುವ_ಉಪಾಯ #ಮುಟ್ಟಿನ_ಸಾಧ್ಯತೆಯ_ಹೆಣ್ಣು_ಮಕ್ಕಳು_ತಾತ್ಕಾಲಿಕವಾಗಿ_ಊರು_ಬಿಡುವುದು ಅಜ್ಜಿಯ ಮತ್ತು ತಾಯಿ ಕಡೆಯಿಂದ ಕರಾವಳಿ ದೈವಗಳು ಹಾಗೂ ಘಟ್ಟದ ಮೇಲೆ ನೆಲೆಸಿದ್ದರಿಂದ ಗ್ರಾಮಗಳ ಕಾಪಾಡುವ ಬೂತಗಳೂ ನಮಗೆ ಪೂಜಾರ್ಹವೇ ಆಗಿದೆ. ರಾಮಕ್ಷತ್ರಿಯ ಸಮಾಜದ ಬಗ್ಗೆ ಒಂದು ಪುಸ್ತಕ ಬರೆಯುವ ಉಮೇದಿನಲ್ಲಿ (ಪ್ರಕಟ ಆಗಿಲ್ಲ) ಮಹಾರಾಷ್ಟ್ರದ ವಿಜಯ ದುರ್ಗದಿಂದ ಕಾಸರಗೋಡಿನವರೆಗೆ ಓಡಾಡಿದಾಗ ಕು೦ಬಳೆಯ ಕೋಟೆ ಆ೦ಜನೇಯ ದೇವಾಲಯದ ವಾರ್ಷಿಕೊತ್ಸವದಲ್ಲಿ ಬೂತಾರಾಧನೆ - ಕೆಂಡ ಹಾಯುವುದು - ಕೋಲಾ ನೋಡಿದ್ದೆ ಈ ಬಗ್ಗೆ ತಿಳಿದದ್ದು ಇದು ರಾಮಕ್ಷತ್ರಿಯರ ಆಚರಣೆ ಅಲ್ಲ ಆದರೆ ಅದನ್ನು ಕೆಳದಿ ಅರಸರ ಕೋಟೆ ನಿರ್ವಹಣೆ ಮಾಡುವ ಈ ಸಮಾಜದವರು ಸ್ಥಳಿಯರ ನಂಬಿಕೆಗೆ ಗೌರವ ಕೊಡಲು ಅದಕ್ಕೆ ತಕ್ಕ ಹಾಗೆ ವರ್ತಿಸಿ ಅವರ ಜೊತೆ ಜೀರೋ ಟಾಲರೆನ್ಸ್ ಕಾಪಾಡಿಕೊಂಡಿದ್ದರೆಂದು ತಿಳಿದು ಬರುತ್ತದೆ. ಕಾಂತಾರ ಸಿನಿಮಾದಿಂದ ಮತ್ತು ಕೊರಗಜ್ಜರ ಕಾರಣಿಕಗಳಿಂದ ದೈವಗಳ ಬೂತಾರಾಧನೆ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಆಸಕ್ತಿ ಹರಿದಾಡುತ್ತ...