Skip to main content

Posts

Showing posts with the label Orange fruit peels dry chutney recipe

Blog number 2007. ಕಿತ್ತಳೆ ಹಣ್ಣಿನ ಸಿಪ್ಪೆಯ ಸ್ವಾದಿಷ್ಟವಾದ ವಿಟಮಿನ್ ಸಿ ಸಮೃದ್ದವಾಗಿರುವ ಚಟ್ನಿ ಪುಡಿ ತಯಾರಿಸುವ ಸುಲಭ ರೆಸಿಪಿ ಇಲ್ಲಿದೆ.

#ಕಿತ್ತಳೆ_ಹಣ್ಣಿನ_ಸಿಪ್ಪೆಯ_ಸವಿಯಾದ_ಚಟ್ನಿ_ಪುಡಿ #ಇದರ_ಸುವಾಸನೆಭರಿತ_ರುಚಿ_ಈ_ಚಟ್ನಿ_ಪುಡಿಯ_ವಿಶೇಷ https://youtu.be/36u-UsyK0VE?feature=shared   ಸಿರ್ಸಿಯಲ್ಲಿ #ಸುಯೋಗಾಶ್ರಮ ನಡೆಸುವ, ಅನಾಥರಿಗೆ ಆಶಕ್ತರಿಗೆ ತಾಯಿಯಂತೆ ಕಾಡಾಡುವ ಶ್ರೀಮತಿ ಲತಿಕಾ ಭಟ್ಟರು ಆಶ್ರಮವಾಸಿಗಳಿಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ತಯಾರಿಸಿ ಬಡಿಸಿದ ಪೋಸ್ಟ್ ಹಾಕಿದ್ದರು ಅದಕ್ಕೆ ನಾನು ಕಿತ್ತಳೆ ಹಣ್ಣಿನ ಸಿಪ್ಪೆಯ ಚಟ್ನಿಪುಡಿ ಕೂಡ ಮಾಡುತ್ತಾರೆ ಅಂತ ಪ್ರತಿಕ್ರಿಯಿಸಿದ್ದೆ ....ಅದಕ್ಕೆ ಅವರು ಕಿತ್ತಳೆ ಹಣ್ಣಿನ ಸಿಪ್ಪೆ ಒಣಗಿಸುವುದೆಲ್ಲ ಆಶ್ರಮದಲ್ಲಿ ಕಷ್ಟ ಅಂದಿದ್ದರು.    ಇದೇ ಪೋಸ್ಟ್ ನಲ್ಲಿ #ಆಕೃತಿ_ಕನ್ನಡ_ಡಾಟ್_ಕಾಮ್ ಶ್ರೀಮತಿ ಶಾಲಿನಿಹೂಲಿ ಅವರು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತಯಾರಿಸುವ ಚಟ್ನಿ ಪುಡಿ ರೆಸಿಪಿ ಕೇಳಿದ್ದರು.    ಕಿತ್ತಳೆ ಹಣ್ಣು ಏಷ್ಯಾ ಮೂಲದ್ದು ಒಂದು ಕಾಲದಲ್ಲಿ ನಮ್ಮ ಕೊಡಗು ಜಿಲ್ಲೆ ಕಿತ್ತಳೆಗೆ ಪ್ರಸಿದ್ಧಿ ಪಡೆದಿತ್ತು ಈಗ ಮಹಾರಾಷ್ಟ್ರದ ನಾಗಪುರ ಕಿತ್ತಲೆಹಣ್ಣು  ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಪ್ರದೇಶವಾಗಿದೆ.   ಸೂರ್ಯನ ಬಿಸಿಲು ಕಡಿಮೆ ಬೀಳುವ ಚಳಿ ಪ್ರದೇಶದಲ್ಲಿರುವ ಜನರಿಗೆ ವಿಟಮಿನ್ ಸಿ ಕೊರತೆಯ ಬಾದೆ ಜಾಸ್ತಿ ಅದರಿಂದ ಚರ್ಮದ ಸಮಸ್ಯೆ ಜಾಸ್ತಿ ಆದ್ದರಿಂದ ಆ ಪ್ರದೇಶಗಳಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್ (OJ) ಜಾಸ್ತಿ ಬಳಕೆ ಆಗುತ್ತದೆ.   ಕಿತ್ತಳೆ ಹಣ್ಣಿನ ಚಟ್...