Blog number 2007. ಕಿತ್ತಳೆ ಹಣ್ಣಿನ ಸಿಪ್ಪೆಯ ಸ್ವಾದಿಷ್ಟವಾದ ವಿಟಮಿನ್ ಸಿ ಸಮೃದ್ದವಾಗಿರುವ ಚಟ್ನಿ ಪುಡಿ ತಯಾರಿಸುವ ಸುಲಭ ರೆಸಿಪಿ ಇಲ್ಲಿದೆ.
#ಕಿತ್ತಳೆ_ಹಣ್ಣಿನ_ಸಿಪ್ಪೆಯ_ಸವಿಯಾದ_ಚಟ್ನಿ_ಪುಡಿ
#ಇದರ_ಸುವಾಸನೆಭರಿತ_ರುಚಿ_ಈ_ಚಟ್ನಿ_ಪುಡಿಯ_ವಿಶೇಷ
https://youtu.be/36u-UsyK0VE?feature=shared
ಸಿರ್ಸಿಯಲ್ಲಿ #ಸುಯೋಗಾಶ್ರಮ ನಡೆಸುವ, ಅನಾಥರಿಗೆ ಆಶಕ್ತರಿಗೆ ತಾಯಿಯಂತೆ ಕಾಡಾಡುವ ಶ್ರೀಮತಿ ಲತಿಕಾ ಭಟ್ಟರು ಆಶ್ರಮವಾಸಿಗಳಿಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ತಯಾರಿಸಿ ಬಡಿಸಿದ ಪೋಸ್ಟ್ ಹಾಕಿದ್ದರು ಅದಕ್ಕೆ ನಾನು ಕಿತ್ತಳೆ ಹಣ್ಣಿನ ಸಿಪ್ಪೆಯ ಚಟ್ನಿಪುಡಿ ಕೂಡ ಮಾಡುತ್ತಾರೆ ಅಂತ ಪ್ರತಿಕ್ರಿಯಿಸಿದ್ದೆ ....ಅದಕ್ಕೆ ಅವರು ಕಿತ್ತಳೆ ಹಣ್ಣಿನ ಸಿಪ್ಪೆ ಒಣಗಿಸುವುದೆಲ್ಲ ಆಶ್ರಮದಲ್ಲಿ ಕಷ್ಟ ಅಂದಿದ್ದರು.
ಇದೇ ಪೋಸ್ಟ್ ನಲ್ಲಿ #ಆಕೃತಿ_ಕನ್ನಡ_ಡಾಟ್_ಕಾಮ್ ಶ್ರೀಮತಿ ಶಾಲಿನಿಹೂಲಿ ಅವರು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತಯಾರಿಸುವ ಚಟ್ನಿ ಪುಡಿ ರೆಸಿಪಿ ಕೇಳಿದ್ದರು.
ಕಿತ್ತಳೆ ಹಣ್ಣು ಏಷ್ಯಾ ಮೂಲದ್ದು ಒಂದು ಕಾಲದಲ್ಲಿ ನಮ್ಮ ಕೊಡಗು ಜಿಲ್ಲೆ ಕಿತ್ತಳೆಗೆ ಪ್ರಸಿದ್ಧಿ ಪಡೆದಿತ್ತು ಈಗ ಮಹಾರಾಷ್ಟ್ರದ ನಾಗಪುರ ಕಿತ್ತಲೆಹಣ್ಣು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಪ್ರದೇಶವಾಗಿದೆ.
ಸೂರ್ಯನ ಬಿಸಿಲು ಕಡಿಮೆ ಬೀಳುವ ಚಳಿ ಪ್ರದೇಶದಲ್ಲಿರುವ ಜನರಿಗೆ ವಿಟಮಿನ್ ಸಿ ಕೊರತೆಯ ಬಾದೆ ಜಾಸ್ತಿ ಅದರಿಂದ ಚರ್ಮದ ಸಮಸ್ಯೆ ಜಾಸ್ತಿ ಆದ್ದರಿಂದ ಆ ಪ್ರದೇಶಗಳಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್ (OJ) ಜಾಸ್ತಿ ಬಳಕೆ ಆಗುತ್ತದೆ.
ಕಿತ್ತಳೆ ಹಣ್ಣಿನ ಚಟ್ನಿ ಪುಡಿಗೆ ಕಿತ್ತಳೆ ಹಣ್ಣಿನ ಸಿಪ್ಪೆ ತೆಗೆದು ಒಣಗಿಸ ಬೇಕಾಗಿಲ್ಲ ಹೀಗೆ ಒಣಗಿಸಿದ ಸಿಪ್ಪೆಯಲ್ಲಿ ಕಿತ್ತಳೆ ಹಣ್ಣಿನಲ್ಲಿರುವ ಸುವಾಸನೆ ಮತ್ತು ರುಚಿ ಇರುವುದಿಲ್ಲ ಆದ್ದರಿಂದ ಕಿತ್ತಳೆ ಹಣ್ಣಿನ ಒಣಗಿಸಿದ ಸಿಪ್ಪೆ ಬಳಸಬಾರದು ನೆನಪಿರಲಿ.
ಎರೆಡು ಕಿತ್ತಳೆ ಹಣ್ಣು ಚೆನ್ನಾಗಿ ತೊಳೆದು ಅದರ ಸಿಪ್ಪೆ ತೆಗೆದು ಬಟ್ಟೆಯಲ್ಲಿ ಒರೆಸಿ ಇಟ್ಟು ಕೊಳ್ಳಿ ನಂತರ ಅದನ್ನು ಸ್ವಲ್ಪ ಎಣ್ಣೆ ಜೊತೆ ಚೆನ್ನಾಗಿ ಹುರಿದು ತೆಗೆದುಕೊಳ್ಳಿ.
ಒಂದು ಟೀ ಚಮಚ ಉದ್ದಿನ ಬೇಳೆ, 1 ಚಮಚ ಕಡಲೆ ಬೇಳೆ, 1 ಚಮಚ ಕೊತ್ತುಂಬರಿ ಕಾಳು, ಅರ್ದ ಚಮಚ ಎಳ್ಳು, 8 ಒಣ ಮೆಣಸು, ಸ್ವಲ್ಪ ಒಣ ಕೊಬ್ಬರಿ ತುರಿ ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಿ.
ಹುಣಸೆ ಹಣ್ಣು ಬಿಸಲಲ್ಲಿ ಚೆನ್ನಾಗಿ ಒಣಗಿಸಿ ಅಥವ ವಾಟೆಹುಳಿ - ಆಮ್ ಚೂರ್ ಜೊತೆ ರುಚಿಗೆ ತಕ್ಕಂತೆ ಬೆಲ್ಲ ಉಪ್ಪು ಸೇರಿಸಿ ಪುಡಿ ಮಾಡಿ ಇದರ ಜೊತೆ ಹುರಿದಿಟ್ಟು ಕೊಂಡ ಎಲ್ಲಾ ಮಸಾಲೆ ಮತ್ತು ಹುರಿದಿಟ್ಟು ಕೊಂಡ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸೇರಿಸಿ ಪುಡಿ ಮಾಡಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಬಹುದು.
ಒಣ ಕೊಬ್ಬರಿ ಜಾಗದಲ್ಲಿ ತೆಂಗಿನಕಾಯಿ ತುರಿ ಕೂಡ ಬಳಸ ಬಹುದು ಆದರೆ ತೆರೆದ ಪ್ರದೇಶದಲ್ಲಿ ನಾಕಾರು ದಿನದ ಶೆಲ್ಟ್ ಲೈಪ್ ಮಾತ್ರ (ಪ್ರಿಜ್ ನಲ್ಲಿ ಹೆಚ್ಚು ದಿನ ಉಳಿಯುತ್ತದೆ).
ಈ ಚಟ್ನಿ ಪುಡಿಗೆ ಮೊಸರು, ತುಪ್ಪ ಅಥವ ಎಣ್ಣೆ ಜೊತೆ ಅನ್ನದ ಜೊತೆ ಕಲಿಸಿ ತಿನ್ನಬಹುದು ಅಥವ ರೊಟ್ಟಿ ದೋಸೆ ಇಡ್ಲಿ ಜೊತೆ ತಿನ್ನಬಹುದು ಕಿತ್ತಳೆ ಹಣ್ಣಿನ ಆರೋಮದ ಅಪ್ಯಾಯ ರುಚಿ ಈ ಚಟ್ನಿಯ ವಿಶೇಷ.
ಈಗ ಕಿತ್ತಳೆ ಹಣ್ಣಿನ ಸೀಸನ್ ಆದ್ದರಿಂದ ತಡವೇಕೆ?

Comments
Post a Comment