#ನನ್ನನ್ನು_ಹೆಚ್ಚು_ಕಾಡುತ್ತಿರುವ_ನರ್ಮದಾನದಿ_ಪರಿಕ್ರಮ
#ವಿಂದ್ಯಾಪರ್ವತದಲ್ಲಿ_ಹುಟ್ಟಿ_ಪಶ್ಚಿಮಾಬಿ_ಮುಖವಾಗಿ_ಹರಿದು_ಅರಬೀಸಮುದ್ರ_ಸೇರುತ್ತದೆ
#ನರ್ಮದಾ_ನದಿ_1312_ಕಿಮಿ_ಹರಿಯುವ_ನದಿಯ_ಜಲಾಯನ_ಪ್ರದೇಶದ_ವ್ಯಾಪ್ತಿ_38143_ಚದರ_ಮೈಲು
#ಹಿಂದೂ_ಪುರಾಣದಲ್ಲಿ_ನರ್ಮದಾ_ನದಿ_ಗಂಗಾನದಿಯಂತೆ_ಪವಿತ್ರ
#ನರ್ಮದಾ_ನದಿ_ಪರಿಕ್ರಮಣ_ಎಂಬ_ಪುರಾತನ_ಕಾಲದಿಂದ_ನಡೆದು_ಬಂದಿರುವ_ದಾರ್ಮಿಕ_ಯಾತ್ರೆ
#ನರ್ಮದಾ_ನದಿಯ_ಪರಿಕ್ರಮದ_ಯಾತ್ರಾರ್ಥಿ_ತನ್ನ_ಬಲಭಾಗದಲ್ಲಿನ_ನದಿಪಾತ್ರದಲ್ಲಿ_3500_ಕಿಮಿ_ಪರಿಕ್ರಮಿಸುವ_ಯಾತ್ರೆ
ದೇಶದ ಐದು ಪ್ರಮುಖ ನದಿಗಳಲ್ಲಿ ಒಂದಾದ ಮಧ್ಯಪ್ರದೇಶದ ವಿಂದ್ಯ ಪರ್ವತದ ಅಮರಕಂಟಕ ಬೆಟ್ಟದ ನರ್ಮದ ಕುಂಡದಲ್ಲಿ ಉಗಮಿಸಿ ಮಧ್ಯಬಾರತದಲ್ಲಿ ಹರಿದು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯದಲ್ಲಿ ಹಾದು ಗುಜರಾತ್ ರಾಜ್ಯದ ಭರೂಚ ನಗರದ ಬಳಿ ಅರಬೀ ಸಮುದ್ರ ಸೇರುವ ನರ್ಮದಾ ನದಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಕೆಲವೇ ಕೆಲವು ಅಪರೂಪದ ನದಿಗಳಲ್ಲಿ ಒಂದು.
ಇದು ಉಗಮ ಸ್ಥಾನದಿಂದ 1312 ಕಿಮಿ ಹರಿದು ಸಮುದ್ರ ಸೇರುತ್ತದೆ ಈ ನರ್ಮದಾ ನದಿಯ ಜಲಾಯಾನ ಪ್ರದೇಶದ ವ್ಯಾಪ್ತಿ ನಾಲ್ಕು ರಾಜ್ಯಗಳಲ್ಲಿ 38143 ಚದರ ಮೈಲು ವಿಸ್ತಿರ್ಣ .
ಈ ನದಿಗೆ ಸರ್ದಾರ್ ಸರೋವರ ಆಣೆಕಟ್ಟು ನಿರ್ಮಾಣ ವಿರೋದಿಸಿ ನರ್ಮದಾ ಬಚಾವೋ ಆಂದೋಲನ ಬಾಬಾ ಆಮ್ಟೆ ಮತ್ತು ಮೇದಾ ಪಾಟ್ಕರ್ ನಡೆಸಿದ್ದರು.
ಈ ನದಿ ಪಾತ್ರದಲ್ಲಿ ಆವರ್ತನದಲ್ಲಿ (ಕ್ಲಾಕ್ ವೈಸ್) ಬಲ ಭಾಗದಲ್ಲಿ ನದಿ ಪಾತ್ರದಲ್ಲಿ ಬರಿಗಾಲಲ್ಲಿ ಒಂದು ಸುತ್ತು ಬರುವ ಪುರಾತನ ಕಾಲದಿಂದಲೂ ನಡೆದು ಬಂದಿರುವ ಒಂದು ಯಾತ್ರೆ ವಿಶೇಷವಾಗಿ ನಡೆಯುತ್ತಾ ಇದೆ.
ಸುಮಾರು 3500 ಕಿಮಿ ದೂರ ಪರಿಕ್ರಮಿಸುವ ಈ ಯಾತ್ರೆಗೆ ನರ್ಮದಾ ಪರಿಕ್ರಮಣ ಯಾತ್ರೆ ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಗಂಗಾ ನದಿಯಂತೆ ನರ್ಮದಾ ನದಿ ಹಿಂದೂ ಪುರಾಣಗಳಲ್ಲಿ ನದಿ ದೇವತೆ, ಮತ್ಸ್ಯ ಪುರಾಣದಲ್ಲಿ ನರ್ಮದೆಯ ಉದ್ದಕ್ಕೂ ಇರುವ ಎಲ್ಲಾ ದಡಗಳು ಪವಿತ್ರ.
ಈ ನದಿಯಲ್ಲಿ ಬಾನಲಿಂಗ ಎನ್ನುವ ಲಿಂಗಾಕಾರದ ಸ್ಪಟಿಕ ಮತ್ತು ಶಿಲಾ ಕಲ್ಲುಗಳು ಸಿಗುವುದು ವಿಶೇಷ.
ನರ್ಮದಾ ನದಿ ಪರಿಕ್ರಮ ಯಾತ್ರೆಗೆ ಅನೇಕ ನಿಯಮ ಇದೆ ಈ ನದಿಯಲ್ಲಿ ಸ್ನಾನ ವಸ್ತ್ರ ತೊಳೆಯಲು ಸೋಪು ಶಾಂಪೂ ಬಳಸುವಂತಿಲ್ಲ, ಪರಿಕ್ರಮ ಯಾತ್ರೆಯಲ್ಲಿ ನರ್ಮದಾ ನದಿ ನೀರು ಮಾತ್ರ ಸೇವಿಸುವುದು, ನದಿಯಲ್ಲಿ ಈಜ ಬಾರದು, ನಾಲ್ಕು ಅಡಿ ಆಳ ದಾಟಿ ನದಿ ಒಳಗೆ ಪ್ರವೇಶಿಸಬಾರದು.
ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ಮಾತ್ರ ಯಾತ್ರಿಸುವುದು, ನರ್ಮದಾ ನದಿಗೆ ಉಗಳಲೂ ಬಾರದು, ಬೆಳಿಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ನರ್ಮದಾ ಆರತಿಯಲ್ಲಿ ಭಾಗವಹಿಸುವುದು, ಶ್ವೇತಾ ಅಥವ ಕಿತ್ತಳೆ ಬಣ್ಣದ ವಸ್ತ್ರ ಧರಿಸುವ ಈ ಬರೀಗಾಲ ಈ ಯಾತ್ರೆ 3 ವರ್ಷ 3 ತಿಂಗಳು 16 ದಿನ ಕಾಲ ನಡೆಸುತ್ತಾರೆ.
ಸಮಯದ ಅಭಾವ ಕಾಲದಲ್ಲಿ ಸೈಕಲ್ ಬೈಕ್ ಕಾರಿನಲ್ಲೂ ಈ ಯಾತ್ರೆ ಮಾಡುತ್ತಾರೆ ಇಡೀ 3500 ಕಿಮಿ ಯಾತ್ರೆ ಸಾಗುವ ಮಾಗ೯ದಲ್ಲಿ ಆಶ್ರಮ - ಮಂದಿರಗಳಲ್ಲಿ - ಮನೆ ಮನೆಗಳಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಊಟೋಪಚಾರ ವಸತಿ ಸೌಲಭ್ಯ ನೀಡುವ ಪದ್ದತಿ ಸಾವಿರಾರು ವರ್ಷದಿಂದ ಆಚರಣೆಯಲ್ಲಿ ಇದೆ ಇದು ಪುಣ್ಯದ ಕೆಲಸ ಎಂಬ ನಂಬಿಕೆ ಅಲ್ಲಿದೆ.
ಈ ಪರಿಕ್ರಮ ಯಾತ್ರೆಯಲ್ಲಿ ನದಿ ದಾಟಬಾರದು, ಯಾತ್ರೆ ಪ್ರಾರಂಭದಲ್ಲಿ ತಲೆ ಗಡ್ಡ ಬೋಳಿಸಬೇಕು ಯಾತ್ರೆ ಪೂರ್ಣವಾಗುವ ತನಕ ಕ್ಷೌರ ಮಾಡುವಂತಿಲ್ಲ ಈ ಯಾತ್ರೆ ಒಂದು ತಪಸ್ಸಿನಂತೆ ನಡೆಯುತ್ತದೆ ಮತ್ತು ಈ ಯಾತ್ರೆ ಮುಗಿಸಿದವರು ತಪಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ.
ನರ್ಮದಾ ವಿಷನ್ ಸ್ಥಾಪಿಸಿ ಸ್ವಚ್ಚ ನರ್ಮದಾ ಅಭಿಯಾನ ಪ್ರಾರಂಬಿಸಿರುವ ಅವದೂತ ದಾದಾ ಗುರು ಯಾವುದೇ ಆಶ್ರಮ ಮಠ ಹೊಂದಿಲ್ಲ ಈಗಾಗಲೇ ನರ್ಮದಾ ನದಿ ಪರಿಕ್ರಮಣ ಆರು ಬಾರಿ ಮುಗಿಸಿದ್ದಾರೆ ಈಗ 7ನೇ ನರ್ಮದಾ ಪರಿಕ್ರಮಣ ಪ್ರಾರಂಬಿಸಿದ್ದಾರೆ ಅವರನ್ನು ಸಾವಿರಾರು ಜನ ಪರಿಸರ ಸಂರಕ್ಷಣೆಯ ವ್ಯಕ್ತಿಗಳು ಹಿಂಬಾಲಿಸುತ್ತಿದ್ದಾರೆ.
ಅವರ ಬಗ್ಗೆ ಮಾಹಿತಿ ಇಲ್ಲದೆ ಅನೇಕರು ದಾದಾ ಗುರುಗಳ ಬಗ್ಗೆ ವ್ಯಂಗ್ಯವಾಗಿ ಬರೆಯುತ್ತಿದ್ದಾರೆ,ನರ್ಮದಾ ಬಚಾವೋ ಆಂದೋಲನ ಬೆಂಬಲಿಸಿದ ಕನ್ನಡಿಗರೂ ನರ್ಮದಾ ಮಿಷನ್ ಸ್ಥಾಪಿಸಿ ಇಡೀ ನರ್ಮದಾ ನದಿ ಸಂರಕ್ಷಣೆಯ ದೊಡ್ಡ ಆಂದೋಲನವೇ ಮಾಡುತ್ತಿರುವ ಅವದೂತ ದಾದಾ ಗುರು ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಈ ರೀತಿ ಬರೆದಿರಬಹುದು.
ಆದ್ದರಿಂದಲೇ ನಾನು ನರ್ಮದಾ ಪರಿಕ್ರಮದ ಬಗ್ಗೆ ಈ ವಿವರವಾದ ಲೇಖನ ಬರೆಯಲು ಕಾರಣವಾಗಿದೆ ಮತ್ತು ಸಾಧ್ಯವಾದರೆ ನನ್ನ ಜೀವಮಾನದಲ್ಲಿ ನರ್ಮದಾ ಪರಿಕ್ರಮಣ ಮಾಡುವ ಇಚ್ಚೆಯೂ ಇದೆ.
Comments
Post a Comment