Blog number 2000. ಕೆ. ಶಿವರಾಂ ನೆನಪುಗಳು ಭಾಗ 5. ದಲಿತ ಕವಿ ಸಿದ್ದಲಿಂಗಯ್ಯರ ಹೋರಾಟದ ಹಾಡು ಶಿವರಾಂ ಅವರ ವರ್ಗಾವಣೆಗೆ ಕಾರಣವಾಯಿತು.
#ಇದು_ನನ್ನ_2000ನೇ_ಬ್ಲಾಗ್_ಲೇಖನ_ಎಂಬ_ಹರುಷದಲ್ಲಿ
#ಕೆ_ಶಿವರಾಂ_ನೆನಪುಗಳು_ಭಾಗ_5.
#ಶಿವಮೊಗ್ಗದಿಂದ_ದಿಡೀರ್_ವರ್ಗಾವಣೆಗೆ_ಕಾಣದ_ಕೈಗಳು
#ದಲಿತ_ಕವಿ_ಸಿದ್ದಲಿಂಗಯ್ಯರು_ಬರೆದ_ಹೋರಾಟದ_ಹಾಡು_ಶಿವರಾಂ_ಹಾಡಿದ್ದೇ_ಕಾರಣವಾಯಿತು
#ಮುಖ್ಯಮಂತ್ರಿ_ಪಟೇಲರನ್ನು_ಕರೆಸಿ_ಅದ್ದೂರಿಯಾಗಿ_ಅಂಬೇಡ್ಕರ್_ಜಯಂತಿ_ಆಚರಿಸಿದ್ದ_ಕಾರ್ಯಕ್ರಮ
#ವಿದ್ಯಾವಂತರನ್ನು_ಬಡವರನ್ನು_ದಲಿತರನ್ನು_ಶಿವರಾಂ_ಸಂಘಟಿಸುತ್ತಾರೆಂಬ_ಭಯ_ಶಿವಮೊಗ್ಗದ_ರಾಜಕಾರಣಿಗಳಿಗೆ
#ದಿಡೀರ್_ವರ್ಗಾವಣೆ_ನಮಗೆಲ್ಲ_ನಿರಾಸೆ_ತಂದಿತ್ತು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭೆ ನಡೆಯುತ್ತಿರುವಾಗಲೇ ಅವರ ವರ್ಗಾವಣೆ ಆದೇಶ ಬಂದಿತು, ಭಾರತದ ಜಾತಿ ವ್ಯವಸ್ಥೆ ಅವತ್ತಿಗೆ ದೇಶ ಸ್ವಾತಂತ್ರ್ಯ ಪಡೆದು 50ನೇ ವರ್ಷಾಚಾರಣೆಯ ಸುವರ್ಣ ಮಹೋತ್ಸವ ಆಚರಿಸಿದ ದಿನಗಳಲ್ಲಿಯೇ ವಿಜೃಂಬಿಸಿದ್ದು ಮತ್ತು ದೇಶದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯಲ್ಲಿ ಕನ್ನಡ ನಾಡು ಕಂಡ ಮೊದಲ ಕನ್ನಡದ ಐಎಎಸ್ ಮಾಡಿದ ದಲಿತ ಕೆ. ಶಿವರಾಂ ಅತ್ಯುತ್ಸಾಹದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ರಚಿಸಿದ ಹೋರಾಟದ ಹಾಡು ಮುಖ್ಯಮಂತ್ರಿ ಉಪಸ್ಥಿತರಿದ್ದ ಸಭೆಯಲ್ಲಿ ಹಾಡಿದ್ದು ಇದಕ್ಕೆ ಕಾರಣವಾಗಿದ್ದು ನಮಗೆಲ್ಲ ಇದು ನಿರಾಸೆ ಮೂಡಿಸಿತು.
* * * * *. *. *. *. *. *. *
ಶಿವರಾಂ ಮತ್ತು ನನ್ನ ವೈಯಕ್ತಿಕ ಗೆಳೆತನಕ್ಕೆ ಕಾರಣ ನನ್ನ ಪ್ರಾಮಾಣಿಕ ಹೋರಾಟಗಳಾಗಿತ್ತು ಆಗ ನನ್ನ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಈಗಿನ ಆನಂದಪುರಂ ಪೋಲಿಸ್ ಠಾಣೆ ಎದುರಿನ ಸುಳುಗೋಡು ರಸ್ತೆ ಜಲ್ಲಿ ಬಿಚಾವಣೆ ಕಾಮಗಾರಿ ಮಾಡದೆ ದಿನೇಶ್ ಎಂಬ ಇಂಜಿನಿಯರ್ ಮತ್ತು ಖಾದರ್ ಭಾಷಾ ಎಂಬ ಗುತ್ತಿಗೆದಾರರು ಹಣ ಬಿಡುಗಡೆ ಮಾಡಿಕೊಂಡಿದ್ದರು ಇದನ್ನು ನಾನು ದೂರಾಗಿ ದಾಖಲಿಸಿದ್ದೆ ಆಗ ನನಗೆ ಅಸಾಧ್ಯ ಕೋಪದ ಮುವತ್ತರ ಪ್ರಾಯ ಮತ್ತು ನನ್ನ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಯಾವುದೇ ಅಪರಾತಪರ ನಡೆಯಬಾರದೆಂಬ ಹಂಬಲ.
ಗುತ್ತಿಗೆದಾರರನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಮತ್ತು ಇಂಜಿನಿಯರ್ ಅಮಾನತ್ತು ಮಾಡಲು ಸಂಬಂದ ಪಟ್ಟ ಅಧಿಕಾರಿಗಳ ಶಿಫಾರಸ್ಸಿನ ಪೈಲ್ ಶಿವರಾಂ ಅವರ ಟೇಬಲ್ ಮೇಲೆ ಬಂದಾಗ ನನ್ನ ಕರೆಸಿದ್ದರು.
ನನಗೆ ಶಿವರಾಂ ವಿನಂತಿಸಿದ್ದು ದಯಮಾಡಿ ಇವರಿಬ್ಬರನ್ನ ಕ್ಷಮಿಸಿಬಿಡಿ ಮತ್ತು ಇವರಿಗೆ ವಾರ್ನಿಂಗ್ ಮಾಡಿ ಮತ್ತೆಂದು ತಪ್ಪು ಮಾಡದಂತೆ ಮುಚ್ಚಳಿಕೆ ಬರೆಸೋಣ ಅಂದರು ಅದಕ್ಕಿಂತ ಅವರು ಹೇಳಿದ ಇನ್ನೊಂದು ಮಾನವೀಯತೆ ಮಾತು ನಾನು ನನ್ನ ದೂರು ವಾಪಾಸು ಪಡೆಯಲು ಕಾರಣವಾಯಿತು.
ಈ ಇಂಜಿನಿಯರಿಗೆ ಅಮಾನತ್ತು ಮಾಡಿದರೆ ಅದು ಅವರ ಮುಂದಿನ ವೃತ್ತಿಜೀವನದಲ್ಲಿ ಪ್ರಮೋಷನ್ ಗಳಿಗೆ ತಡೆ ಆಗುತ್ತದೆ ಈತ ಬಡ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಇಂಜಿನಿಯರ್ ಮತ್ತು ಮುಸ್ಲಿಂ ಸಮಾಜದ ಈ ಗುತ್ತಿಗೆದಾರನಿಗೆ ಮೂರು ಸಂಸಾರ ಬಡ್ಡಿ ಸಾಲ ಮಾಡಿ ಗುತ್ತಿಗೆ ಮಾಡುತ್ತಿದ್ದಾನೆ ಬ್ಲಾಕ್ ಲಿಸ್ಟ್ ಗೆ ಸೇರಿಸಿದರೆ ಇಡೀ ಕುಟುಂಬ ಉಪವಾಸ ಬೀಳುತ್ತದೆ ಎಂದಿದ್ದರು ಇದು ಶಿವರಾಂ ಬಗ್ಗೆ ತಿಳಿಯದವರಿಗೆ ಅವರ ಮಾನವೀಯತೆಯ ಇನ್ನೊಂದು ಮುಖ.
ಅವರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಬಂಗಲೆಯಲ್ಲಿ ಅನೇಕ ಬಾರಿ ಊಟ ಮಾಡಿದ್ದೇನೆ ಅವರ ನಿತ್ಯದ ಊಟ ಬಿಸಿ ರಾಗಿ ಮುದ್ದೆ ಮತ್ತು ಸಿಂಪಲ್ ಉಪ್ಪು ಸಾರು ಇದರಲ್ಲಿ ಹಸಿಮೆಣಸು - ಹುಣಸೆ ಹಣ್ಣು ಮತ್ತು ಉಪ್ಪು ಸೇರಿಸಿದ ಸಾರು ಇದು ಅವರಿಗೆ ಪೆವರಿಟ್ ಅವರು ವಿದ್ಯಾರ್ಥಿ ಆಗಿದ್ದಾಗ ವಾರದ ಮುದ್ದೆಯನ್ನದ ಮನೆಯಲ್ಲಿ ಇದನ್ನೇ ಹಸಿವು ತೀರಿಸುವ ಆಹಾರ ಆಗಿತ್ತೆಂದು ನೆನಪಿಸುತ್ತಿದ್ದರು.
ಅವರ ಬಂಗಲೆ ಎದುರಿನ ಹೊರ ಆವರಣದಲ್ಲಿ ಮರಳಿನ ಚೀಲ ನೇತು ಹಾಕಿಸಿದ್ದರು ಅದಕ್ಕೆ ಕೈಗಳಿಂದ ಪಂಚ್ ಮಾಡುವುದು ಮತ್ತು ಕಿಕ್ ಮಾಡುತ್ತಾ ದೇಹದ ಕ್ಷಮತೆ ಕಾಪಾಡುತ್ತಿದ್ದರು ಆಗ ನಾನು ನನ್ನ ತಲೆಗಿಂತ ಎತ್ತರಕ್ಕೆ ನನ್ನ ಕಾಲಿನಿಂದ ಕಿಕ್ ಮಾಡುವುದು ಹಾಗೂ ಲೀಲಾ ಜಾಲವಾಗಿ ಪಂಚ್ ಮಾಡುತ್ತಿರುವುದು ನೋಡಿ ಅವರಿಗೆ ಆಶ್ವರ್ಯ,
ರಾಜ್ಯ ಸರ್ಕಾರದ ಅನುದಾನ ಬಂದಾಗ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರನ್ನು ಅವರ ಕಛೇರಿಗೆ ಕರೆಸಿ ಎಲ್ಲರಿಗೂ ವಿವರಿಸಿ ಆಯಾ ಜಿಲ್ಲಾ ಪಂಚಾಯತ್ ಸದಸ್ಯರ ಕ್ಷೇತ್ರದಲ್ಲಿ ಎಲ್ಲೆಲ್ಲಿಗೆ ಸದರಿ ಕಾಮಗಾರಿ ಮಾಡಿಸಬೇಕೊ ಆ ಪಟ್ಟಿ ತಕ್ಷಣ ಜಿಲ್ಲಾ ಪಂಚಾಯತ್ ಸದಸ್ಯರು ತಮ್ಮ ತಮ್ಮ ಲೆಟರ್ ಪ್ಯಾಡ್ ನಲ್ಲಿ ನಮೂದಿಸಿ ಸಹಿ ಮಾಡಿ ಕೊಡಲು ತಿಳಿಸುತ್ತಿದ್ದರು ಆದರೆ ಬಹುತೇಕ ಸದಸ್ಯರಿಂದ ಲೆಟರ್ ಪಡೆಯಲು ವಿಳಂಬವಾಗುತ್ತಿತ್ತು ಆದರೆ ನಾನು ಆ ಕ್ಷಣದಲ್ಲೇ ಅಲ್ಲಿಯೇ ನನ್ನ ಪತ್ರ ನೀಡುತ್ತಿದ್ದೆ ಇದು ಪ್ರತಿ ಬಾರಿ ಗಮನಿಸುತ್ತಿದ್ದ ಶಿವರಾಂ ನನಗೆ #ನೀವು_ಐಎಎಸ್ ಮಾಡ ಬೇಕಿತ್ತು ಅನ್ನುತ್ತಿದ್ದರು.
ಈ ಸಮಯದಲ್ಲೇ ಅಂಬೇಡ್ಕರ್ ಜಯಂತಿ ಬಂದಿತು ಶಿವರಾಂ ಅವರು ಶಿವಮೊಗ್ಗ ಜಿಲ್ಲೆಯಲ್ಲೇ ಮೊದಲ ಬಾರಿಗೆ ಅತ್ಯಂತ ವಿಜೃಂಬಣೆಯಿಂದ ಅಂಬೇಡ್ಕರ್ ಜಯಂತಿ ಆಚರಣೆಯ ತಯಾರಿ ಮಾಡಿದರು ಜಿಲ್ಲಾ ಉಸ್ತುವಾರಿ ಮಂತ್ರಿ ಬಸವಣ್ಯಪ್ಪನವರು ಇದಕ್ಕೆ ಹೆಚ್ಚಿನ ಬೆಂಬಲ ನೀಡಿದರು, ಮುಖ್ಯಮಂತ್ರಿ ಜೆ.ಹೆಚ್.ಪಟೇಲರು ಭಾಗವಹಿಸಿದ್ದರು ಆ ಸಭೆಯಲ್ಲಿ ವಿದಾನ ಸಭಾ ವಿರೋದ ಪಕ್ಷದ ನಾಯಕರಾಗಿದ್ದ ಶಿಕಾರಿಪುರದ ಯಡ್ಯೂರಪ್ಪನವರು, ಶಿವಮೊಗ್ಗದ ಶಾಸಕರಾದ ಈಶ್ವರಪ್ಪನವರು, ಭದ್ರಾವತಿ ಶಾಸಕರಾದ ಅಪ್ಪಾಜಿಗೌಡರು, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಹೊಸನಗರ ಕ್ಷೇತ್ರದ ಶಾಸಕರಾದ ಅಯನೂರು ಮಂಜುನಾಥ್, ಸೂರಬ ಕ್ಷೇತ್ರದ ಕುಮಾರ್ ಬಂಗಾರಪ್ಪ, ಸಾಗರದ ಕ್ಷೇತ್ರದ ಕಾಗೋಡು ತಿಮ್ಮಪ್ಪ ಮತ್ತು ಹೊಳೆಹೊನ್ನೂರು ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಸವಣ್ಯಪ್ಪನವರು ಸೇರಿದಂತೆ ಅನೇಕ ಮುಖಂಡರು ಅಧಿಕಾರಿಗಳು ಮತ್ತು ಬೃಹತ್ ಸಂಖ್ಯೆಯಲ್ಲಿ ಜಿಲ್ಲೆಯ ದಲಿತ ವರ್ಗದವರನ್ನು ಈ ಸಮಾವೇಷದಲ್ಲಿ ಶಿವರಾಂ ಸೇರಿಸಿದ್ದರು.
ಸ್ವಾಗತ ಭಾಷಣಕ್ಕಿಂತ ಮೊದಲೇ ದಲಿತ ಕವಿ ಸಿದ್ದಲಿಂಗಯ್ಯನವರ ಹಾಡು ಪ್ರಾಥ೯ನೆಯಾಗಿ ಸ್ವತಃ ಶಿವರಾಂ ಅವರ ನೇತೃತ್ವದಲ್ಲಿ ಹಾಡುಗಾರರ ತಂಡ ಹಾಡಿದ್ದೇ ಎಲ್ಲರ ಕಣ್ಣು ಕೆಂಪಾಗಿಸಿತ್ತು, ಶಿವರಾಂ ಶಿವಮೊಗ್ಗ ಜಿಲ್ಲೆಯ ದಲಿತರ - ಬಡವರ ಸಂಘಟಿಸುತ್ತಾರೆ ಎಂಬ ಅವರೆಲ್ಲರ ಭಯಕ್ಕೆ ಇಂಬು ಕೊಡುವಂತೆ ಮುಖ್ಯಮಂತ್ರಿ ಸಮಕ್ಷಮದಲ್ಲಿ ಶಿವರಾಂ ದಲಿತ ಕವಿ ಸಿದ್ಧಲಿಂಗಯ್ಯರು ಬರೆದ ಹೋರಾಟದ ಹಾಡು ಶಿವಮೊಗ್ಗದಲ್ಲಿ ನಡೆದ ಬೃಹತ್ ಅಂಬೇಡ್ಕರ್ ಜಯಂತಿಯಲ್ಲಿ ಹಾಡಿದ್ದು ಅವರನ್ನು ಶಿವಮೊಗ್ಗ ಜಿಲ್ಲೆಯಿಂದ ದಿಡೀರ್ ವರ್ಗಾವಣೆಗೆ ಕಾರಣ ಆಯಿತು.
ಸಮಾಜವಾದಿ ಪಟೇಲರು ಈ ವರ್ಗಾವಣೆಗೆ ಮೊದಮೊದಲು ಒಪ್ಪಲಿಲ್ಲ ಆದರೆ ಇಡೀ ಜಿಲ್ಲೆಯ ಜನಪ್ರತಿನಿದಿಗಳ ಒತ್ತಡದಿಂದ ಶಿವರಾಂರನ್ನು ವರ್ಗಾವಣೆ ಮಾಡಿ ನೂತನವಾಗಿ ರಚನೆ ಆದ ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ನೇಮಿಸಿದರು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭೆ ನಡೆಯುತ್ತಿರುವಾಗಲೇ ಅವರ ವರ್ಗಾವಣೆ ಆದೇಶ ಬಂದಿತು, ಭಾರತದ ಜಾತಿ ವ್ಯವಸ್ಥೆ ಅವತ್ತಿಗೆ ದೇಶ ಸ್ವಾತಂತ್ರ್ಯ ಪಡೆದು 50ನೇ ವರ್ಷಾಚಾರಣೆಯ ಸುವರ್ಣ ಮಹೋತ್ಸವ ಆಚರಿಸಿದ ದಿನಗಳಲ್ಲಿಯೇ ವಿಜೃಂಬಿಸಿದ್ದು ಮತ್ತು ದೇಶದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯಲ್ಲಿ ಕನ್ನಡ ನಾಡು ಕಂಡ ಮೊದಲ ಕನ್ನಡದ ಐಎಎಸ್ ಮಾಡಿದ ದಲಿತ ಕೆ. ಶಿವರಾಂ ಅತ್ಯುತ್ಸಾಹದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ರಚಿಸಿದ ಹೋರಾಟದ ಹಾಡು ಮುಖ್ಯಮಂತ್ರಿ ಉಪಸ್ಥಿತರಿದ್ದ ಸಭೆಯಲ್ಲಿ ಹಾಡಿದ್ದು ಇದಕ್ಕೆ ಕಾರಣವಾಗಿದ್ದು ನಮಗೆಲ್ಲ ಇದು ನಿರಾಸೆ ಮೂಡಿಸಿತು.
Comments
Post a Comment