Blog number 1998. ಶಾಂತವೇರಿ ಗೋಪಾಲಗೌಡರ 101 ನೇ ಜನ್ಮ ದಿನಾಚಾರಣೆ 14 ಮಾರ್ಚ್... ಕಳೆದ ವರ್ಷ ಶಾಂತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆಯ ಅಶ್ವಾಸನೆ ಈಡೇರಲೇ ಇಲ್ಲ.
#ನಾಳೆ_ದಿನಾಂಕ_14_ಮಾರ್ಚ್_ಶಾಂತವೇರಿಗೋಪಾಲಗೌಡರ_101ನೇ_ಹುಟ್ಟುಹಬ್ಬ.
#ಸಾಗರ_ಹೋಟೆಲ್_ವೃತ್ತದಲ್ಲಿ_ಶಾಂತವೇರಿ_ಗೋಪಾಲ_ಗೌಡರ_ಪ್ರತಿಮೆ_ಸ್ಥಾಪನೆ
#ಆಗ_ಗೃಹ_ಸಚಿವ_ಆರಗ_ಜ್ಞಾನೇಂದ್ರ_ಮತ್ತು_ಶಾಸಕರಾಗಿದ್ದ_ಹರತಾಳು_ಹಾಲಪ್ಪರಿಂದ
#ಶಾಂತವೇರಿ_ಗೋಪಾಲಗೌಡರ_ಜನ್ಮ_ಶತಮಾನೋತ್ಸವದಲ್ಲಿ_ಸಾಗರದಲ್ಲಿ_ನೀಡಿದ್ದ_ಭರವಸೆ.
#ಇದಕ್ಕಾಗಿ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯರಿಂದ_ಒಂದು_ಸಾವಿರ_ಟೋಕನ್_ಅಡ್ವಾನ್ಸ್_ನೀಡಿದ್ದರು
#ಸಾಗರ_ಹೊಸನಗರ_ತೀರ್ಥಹಳ್ಳಿ_ವಿದಾನಸಭಾ_ಕ್ಷೇತ್ರದ_ಮೊದಲ_ಶಾಸಕರು
#ಸಾಗರ_ಹೊಸನಗರದಲ್ಲಿ_ಶಾಂತವೇರಿ_ಗೋಪಾಲಗೌಡರ_ಪ್ರತಿಮೆ_ಸ್ಥಾಪನೆ_ಮಾಡಲಾಗದ್ದು_ದುರಂತ.
ಶಾಂತವೇರಿ ಗೋಪಾಲಗೌಡರನ್ನು ನಾನು ನೋಡಿಲ್ಲ ಆದರೆ ಅವರ ಒಡನಾಟದ ಮತ್ತು ಹೋರಾಟದ ಜೊತೆಗಾರರಾಗಿದ್ದ ಗಣಪತಿಯಪ್ಪ, ಅವರ ಆತ್ಮಚರಿತ್ರೆ #ಜೀವಂತ_ಜ್ಜಾಲೆ ಬರೆದ ಕೊಣಂದೂರು ವೆಂಕಪ್ಪ ಗೌಡರ ಒಡನಾಟದಿಂದ ಶಾಂತವೇರಿ ಗೋಪಾಲಗೌಡರ ಬಗ್ಗೆ ಅನೇಕ ವಿಚಾರ ತಿಳಿಯಲು ಸಾಧ್ಯವಾಯಿತು.
ಗೋಪಾಲಗೌಡರು ಮೊದಲ ವಿದಾನ ಸಭೆಗೆ ಆಯ್ಕೆ ಆದ ಕ್ಷೇತ್ರದವನು ನಾನು, ಗೋಪಾಲಗೌಡರು ಸೋಲಿಸಿದ ಅವರ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿ ನಮ್ಮ ಊರಿನವರಾದ ಆನಂದಪುರಂ ಬದರಿನಾರಾಯಣ ಅಯ್ಯಂಗಾರರನ್ನು.
ಸಾಗರ ಮತ್ತು ಹೊಸನಗರದಲ್ಲಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪಿಸಲು ಈ ವರೆಗೆ ಸಾಧ್ಯವಾಗಲಿಲ್ಲ ಎಂಬುದು ಬೇಸರದ ವಿಷಯ.
ಕಳೆದ ವರ್ಷ ಸಾಗರದಲ್ಲಿ ದಿನಾಂಕ 11 ಮಾರ್ಚ್ 2023ರಂದು ಸಾಗರದ ಶಿವಾನಂದ ಕುಗ್ವೆ ಮತ್ತು ರೈತ ಸಂಘದ ಎನ್.ಡಿ. ವಸಂತ ಕುಮಾರ್ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ನಡೆಸಿದ್ದರು.
ಅವತ್ತು ಈ ಕಾಯ೯ಕ್ರಮಕ್ಕೆ ಅತಿಥಿಗಳಾಗಿದ್ದ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರು ಸಭೆಗೆ ಹೋಗುವ ಮೊದಲು ಪೋನ್ ಮಾಡಿದ್ದರು, ಅವರಿಗೆ ನಾನು ಈ ಸಭೆಯಲ್ಲಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪನೆಯ ಪ್ರಸ್ಥಾಪನೆ ಮಾಡಲು ವಿನಂತಿಸಿದ್ದೆ ಅದಕ್ಕೆ ಪುಟ್ಟಯ್ಯನವರು ಅದನ್ನೆಲ್ಲ ನಿರೀಕ್ಷಿಸಲು ಸಾಧ್ಯವಾ? ಎಂಬ ಅನುಮಾನ ವ್ಯಕ್ತಪಡಿಸಿದರು, ಏನಾದರಾಗಲಿ ಪ್ರಸ್ತಾವನೆ ಆಗಲಿ ಅಂದಿದ್ದೆ.
ಸಂಜೆ ಪುಟ್ಟಯ್ಯನವರು ಹೇಳಿದ್ದು ಅವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರರ ಪಕ್ಕದಲ್ಲೇ ಸಂಘಟಕರು ಆಸನ ವ್ಯವಸ್ಥೆ ಮಾಡಿದ್ದರಿಂದ ಸಚಿವರಿಗೇ ತಮ್ಮ ಪ್ರಸ್ತಾವನೆ ಹೇಳಿದಾಗ ಆರಗ ಜ್ಞಾನೇಂದ್ರ ಸಹಮತ ಸೂಚಿಸಿ ಸ್ಥಳಿಯ ಶಾಸಕರ ಜೊತೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರಂತೆ.
ಇದರಿಂದ ಪ್ರೇರೇಪಿತರಾದ ಪುಟ್ಟಯ್ಯನವರು ಸಾಗರ ತಾಲ್ಲೂಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಮತ್ತು ಶಾಂತವೇರಿ ಗೋಪಾಲಗೌಡರ ಕಿರಿಯ ಒಡನಾಡಿ ಬಿ.ಆರ್.ಜಯ೦ತ್ ಹಸ್ತ ತಮ್ಮ ಪ್ರಥಮ ದೇಣಿಗೆ ಆಗಿ ಒಂದು ಸಾವಿರ ರೂಪಾಯಿ ನೀಡಿದಾಗ, ಪ್ರತಿಮೆಯ ನಿರ್ಮಾಣದ ಭರವಸೆಯನ್ನು ಆರಗ ಜ್ಞಾನೇಂದ್ರರು ತಮ್ಮ ಸಭಾ ಬಾಷಣದಲ್ಲಿ ಘೋಷಣೆ ಮಾಡಲು ಪುಟ್ಟಯ್ಯರ ವಿನಂತಿಗೆ ಒಪ್ಪಿದ್ದರಂತೆ.
ಆದರೆ ಅವರು ತಮ್ಮ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪ ಮಾಡಲು ಮರೆತು ಭಾಷಣ ಮುಗಿಸಿ ಪುಟ್ಟಯ್ಯರ ಪಕ್ಕದಲ್ಲಿ ಅಸೀನರಾದಾಗ, ಪುಟ್ಟಯ್ಯನವರು ಪುನಃ ಜ್ಞಾಪಿಸಿದರಂತೆ ಆಗ ಪುನಃ ವೇದಿಕೆಗೆ ಹೋಗಿ ಮೈಕ್ ನಲ್ಲಿ ಗೃಹ ಮಂತ್ರಿ ಜ್ಞಾನೇಂದ್ರರು ಘೋಷಣೆ ಮಾಡಿದ್ದಾರೆ "ನಾನು ಮತ್ತು ಸ್ಥಳಿಯ ಶಾಸಕರಾದ ಹರತಾಳು ಹಾಲಪ್ಪನವರು ಸೇರಿ ಸಾಗರದಲ್ಲಿ ಶಾ೦ತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆ ಸಾಗರದ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ನಿರ್ಮಿಸುತ್ತೇವೆ" ಅಂತ.
ಬಹುಶಃ ಈ ಮಾತುಗಳು ಕಾರ್ಯಗತವಾಗದೇ ಭರವಸೆಯಾಗೆ ಉಳಿದಿದೆ,ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯರಿಗೆ ಸಾರ್ವಜನಿಕ ಸಮಾರಂಭದಲ್ಲಿ ನೀಡಿದ ಭರವಸೆ ಮತ್ತು ಅವರು ನೀಡಿದ ಒಂದು ಸಾವಿರ ಮುಂಗಡ ಹಣ ಶಾಂತವೇರಿ ಗೋಪಾಲಗೌಡರ ಪ್ರತಿಮೆ ನಿರ್ಮಾಣ ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖಂಡರಿಗೆ ನೆನಪಾಗಲಿ ಎಂದು ಶಾಂತವೇರಿ ಗೋಪಾಲಗೌಡರ 101ನೆ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಆಶಿಸುತ್ತೇನೆ.
Comments
Post a Comment