Skip to main content

Blog number 1993. ಭಾರತ ದೇಶದ ಪ್ರಖ್ಯಾತ ಜೈನ ಮುನಿಗಳಾದ ರಾಷ್ಟ್ರ ಸಂತ ಜಂಗಲ್ ವಾಲೆ ಬಾಬಾ ನಮ್ಮ ಶ್ರೀ ಕೃಷ್ಣಸರಸ ಕನ್ವೆನ್ಷನ್ ಹಾಲ್ ನಲ್ಲಿ 2015 ರಲ್ಲಿ ತಂಗಿದ್ದರು ಅವರ ಸತ್ಸಂಗ ನನ್ನ ಸೌಭಾಗ್ಯ

#ನಮ್ಮ_ಕೃಷ್ಣಸರಸ_ಕನ್ವೆನ್ಷನ್_ಹಾಲ್_ನಲ್ಲಿ_ಜಂಗಲ್_ವಾಲೆ_ಬಾಬ_ತಂಗಿದ್ದರು

#ಅವರನ್ನು_ಪತ್ರಿಕೆಗಾಗಿ_ಸಂದರ್ಶಿಸಿದ್ದೆ

#ಸಲ್ಲೇಖನ_ವೃತ_ಸ್ವೀಕರಿಸಿ_ಜಿನೈಕ್ಯರಾದರು

#ರಾಷ್ಟಸಂತ_108ಮುನಿ_ಶ್ರೀಚಿನ್ಮಯಸಾಗರ_ಮಹಾರಾಜರು

#ಇಂತಹ_ಸತ್ಪುರುಷರ_ಸತ್ಯಂಗ_ನನಗೆ_ಸದಾ_ಸಿಗುವುದು_ನನಗೆ_ಆಶ್ಚಯ೯

#ನನ್ನ_ಮತಾ_ಪಿತೃಗಳ_ಗುರು_ಹಿರಿಯರ_ಪುಣ್ಯದ_ಫಲ_ಇರಬಹುದು

  ನಿನ್ನೆ ಶ್ರೀ ಪ್ರಮುಖ ಸಾಗರ ಜೈನ ಮುನಿಗಳು ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ತಂಗಿದ್ದ ಬಗ್ಗೆ ಬರೆದಿದ್ದೆ ಇವತ್ತು ಇಡೀ ಭಾರತ ದೇಶದಲ್ಲೇ ಪ್ರಖ್ಯಾತರಾಗಿದ್ದ ಜಂಗಲ್ ವಾಲೆ ಬಾಬ ಅವರು ನಮ್ಮಲ್ಲಿ ತಂಗಿದ್ದ ಲೇಖನ ಇಲ್ಲಿದೆ.
 ಇಡೀ ಭಾರತ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.
    ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.
      ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ್ಕೆ ಬಂದಾಗ ಬೆಳಗಾಂ ಜಿಲ್ಲೆಯ ಖಾನಾಪುರದ ದಟ್ಟ ಅರಣ್ಯದಲ್ಲಿ ಚಾತುಮಾ೯ಸ ನಡೆಸಿದಾಗ ಅನೇಕ ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಇವರ ಬೇಟಿಗೆ ಬಂದಿದ್ದರು, ಜೈನ ಪ್ರಮುಖರಾದ ದಮ೯ ಸ್ಥಳದ ವೀರೇ೦ದ್ರ ಹೆಗ್ಗೆಡೆಯವರಿಗೂ ಇವರ ದಶ೯ನ ಸಿಕ್ಕಿಲ್ಲ ಅಂತ ಮಹಾರಾಷ್ಟ್ರದ ಸತಾರದ ಜೈನ ಪ್ರಮುಖರು ಹೇಳಿದರು.
       ಅವಾಗ ಅವರನ್ನ ಸಂದಶಿ೯ಸಿದ ಪತ್ರಿಕೆ ಮತ್ತು ಪೋಟೋ ನೋಡಿದ ಅವರು ನನಗೆ ನೀವೇ ಪುಣ್ಯವಂತರು ಅಂದರು.
      ನನಗೆ ಇಂತ ಅವಕಾಶ ಯಾಕೆ ಸಿಗುತ್ತೆ ಗೊತ್ತಿಲ್ಲ ಆದರೆ ಸಾದು ಸಂತರು ನಮ್ಮಲ್ಲಿ ಬರುತ್ತಾರೆ ಉಳಿಯುತ್ತಾರೆ ಹಾಗು ಯಾರ ಹತ್ತಿರ ಬೆರೆಯದವರು ನನ್ನ ಹತ್ತಿರ ಆತ್ಮೀಯವಾಗಿ ಬೆರೆತು, ಕಾಲ ಕಳೆದು ಹೋಗುವಾಗ ಆಶ್ರೀವಾದ ಮಾಡಿ ಹೋಗುತ್ತಾರೆ.
       ನನ್ನ ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮರ ಸ್ಮರಣಾಥ೯ ನಿಮಿ೯ಸಿರುವ "#ಕೃಷ್ಣಸರಸ_ಕನ್ವೆನ್ಷನ್_ಹಾಲ್" ನ ಮಹಿಮೆ ಅಂತ ಬಾವಿಸುತ್ತೇನೆ.
        ಹಿಂದಿನ ದಿನ ಸಾಗರದ ಜೈನ ಮುಖಂಡರಾದ ರಾಜ್ ಕುಮಾರ್ ಜೈನ್ ಮತ್ತು ವಿ.ಟಿ.ಸ್ವಾಮಿ ಬಂದು ನಾಳೆ ಒಬ್ಬ ಸಂತರು ಬರುತ್ತಾರೆ ಅವರಿಗೆ ತಂಗಲು ವ್ಯವಸ್ಥೆ ಮಾಡಬೇಕಾಗಿ ತಿಳಿಸಿದರು ಅದರಂತೆ ಮರುದಿನ ಬಂದವರು ಜಂಗಲ್ ವಾಲೆ ಬಾಬ.
        ಅವರು ಬಂದು ವಿರಾಜಮಾನರಾದ ನಂತರ ಮಾಲಿಕರನ್ನ ಕರೆಯಿರಿ ಅಂದರಂತೆ ಅವರಾಗಿ ಕರೆದದ್ದರಿಂದ ಹೋಗಿ ದಶ೯ನ ಪಡೆದು ಅವರನ್ನ ಮಾತಿಗೆ ಎಳೆದೆ, ಶಿವಮೊಗ್ಗದ ಜನ ಹೋರಾಟ ದಿನಪತ್ರಿಕೆಗೆ ಅವರ ಅನುಮತಿಯಿಂದ ಸಂದಶ೯ನ ಮಾಡಿದೆ, ಅವರು 3000ಕ್ಕೂ ಹೆಚ್ಚು ನಕ್ಸಲೈಟ್ಸ್ ರನ್ನ ಮುಖ್ಯ ವಾಹಿನಿಗೆ ತಂದವರು, ಹೆಚ್ಚಾಗಿ ಅರಣ್ಯ ಮತ್ತು ಅರುಣ್ಯವಾಸಿಗಳಂದಿಗೆ ಇರುವುದರಿಂದ ಇವರಿಗೆ ಜಂಗಲ್ ವಾಲೆ ಬಾಬ ಅಂತ ಹೆಸರಾಗಿದೆ.
        2015 ಮತ್ತು 2016 ರ ವರೆಗೆ ಕನಾ೯ಟಕದ ಪ್ರಮುಖ ಜೈನ ಕೇಂದ್ರ ಸಂದಶಿ೯ಸಿದರು ಈ ಅವದಿಯಲ್ಲಿ ಎರೆಡು ಚಾತುಮಾ೯ಸ ಕನಾ೯ಟಕದಲ್ಲೇ ಮಾಡಿದ್ದಾರೆ ಒಂದು ಖಾನಾಪುರ ಮತ್ತು ಇನ್ನೊಂದು ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ.
           ದಮ೯ಸ್ಥಳದಲ್ಲಿ ಇವರಿಗೆ ವಿರೇಂದ್ರ ಹೆಗ್ಗಡೆಯವರು ನೀಡಿದ ಸ್ವಾಗತ ನಂತರ ಇವರು ಹೋದಲ್ಲೆಲ್ಲ ಇವರನ್ನ ಬೇಟಿ ಮಾಡಿದ ಗಣ್ಯರ ಮಾಹಿತಿ ಟ್ವಿಟರ್ ನಲ್ಲಿ ಮತ್ತು ಅಂತರ್ಜಾಲದಲ್ಲಿ ನೋಡಿದಾಗ ನಮ್ಮ ಆತಿಥ್ಯ ಸ್ವೀಕರಿಸಿದವರು, ಸಂದಶ೯ನಕ್ಕೆ ಅವಕಾಶ ನೀಡಿದವರು ಮತ್ತು ಆಶಿ೯ ವದಿಸಿದವರು ಇವರೇಯೆ ? ಎಂಬ ಅನುಮಾನ ಉಂಟಾಗುತ್ತೆ, ಇಂತಹ ರಾಷ್ಟ್ರ ಸಂತರ ಸಂದಶಿ೯ಸಿದ ಹೆಮ್ಮೆ ನನ್ನದು.
  ಇವರು ಸಲ್ಲೇಖನ ವೃತ ಸ್ವೀಕರಿಸಿ ಇದೇ ಬರುವ 18 ನೇ ತಾರೀಖು ಅಕ್ಟೋಬರ್ 2024 ಕ್ಕೆ 4ನೇ ಸಮಾದಿ ದಿವಸ್ ಆಚರಿಸುತ್ತಾರೆ.

   ಜೈನ ಧರ್ಮದ ದಿಗಂಬರರ ಬಗ್ಗೆ ಹೆಚ್ಚಿನ ಮಾಹಿತಿ ಈ ರೀತಿ ದಾಖಲಾಗಿದೆ.....
   #ದಿಗಂಬರಪಂಥ ಜೈನ ದರ್ಮದ ಒಂದು ಪಂಥ ಇದು ಸಂನ್ಯಾಸ ಆಚರಣೆಯ ಪರಮಾವಧಿಯನ್ನು ಹೊಂದಿದ ಮುನಿಗಳಿಗೆ ದಿಗಂಬರೆಂದು ಹೆಸರು.
  ಗೃಹಸ್ಥಧರ್ಮದ ಹನ್ನೊಂದು ನೆಲೆಗಳನ್ನು ಯಶಸ್ವಿಯಾಗಿ ನಡೆಸಿದ ಅನಂತರ ವ್ರತಿಕ ಗುರುಸನ್ನಿಧಿಯಲ್ಲಿ ಮುನಿದೀಕ್ಷೆಯನ್ನು ಸವೀಕರಿಸುತ್ತಾರೆ, ಪ್ರಾರಂಭದಲ್ಲಿ ಒಂದು ಕೌಪೀನ, ಸೊಂಟಕ್ಕೆ ಒಂದು ತುಂಡು ಬಟ್ಟೆ, ಮೈ ಮೇಲೆ ಒಂದು ತುಂಡು ಬಟ್ಟೆ ಇಷ್ಟು ಮಾತ್ರವನ್ನು ಧರಿಸುತ್ತಾರೆ, ಇವರಿಗೆ ಕ್ಷುಲ್ಲಕರೆಂದು ಹೆಸರು. ಆಮೇಲೆ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಮನೋನಿಗ್ರಹಮಾಡಿ ಕೌಪೀನವೊಂದನ್ನು ಮಾತ್ರ ಧರಿಸುತ್ತಾರೆ. ವ್ರತಗಳೂ ತಪಸ್ಸೂ ಮುಂದುವರಿದು ಶರೀರದ ಮೇಲಿನ ಮೋಹ ಪೂರ್ತಿಯಾಗಿ ಹೋದ ಮೇಲೆ ಗುರುಗಳ ಅಪ್ಪಣೆ ಪಡೆದು ದಿಗಂಬರ ದೀಕ್ಷೆಯನ್ನು ಸ್ವೀಕರಿಸುತ್ತಾರೆ.
   ಇವರಿಗೆ ಹಸಿವು, ಬಾಯಾರಿಕೆ, ನಿದ್ದೆ, ರಾಗ, ದ್ವೇಷ, ಚಿಂತೆ ಮೊದಲಾದ ಪರೀಷಹಗಳನ್ನು ಗೆದ್ದು ಯಾವಾಗಲೂ ಧ್ಯಾನಾಧ್ಯಯನಗಳಲ್ಲಿ ನಿರತನಾಗಿರುತ್ತಾರೆ. ಇವರ ಹತ್ತಿರ ಸ್ಥಳ ಶುದ್ಧಿಗೋಸ್ಕರ ನವಿಲುಗರಿಯ ಒಂದು ಪಿಂಛ ಹಾಗೂ ಶರೀರಶುದ್ಧಿಗಾಗಿ ಬಿಸಿ ನೀರುಳ್ಳ ಒಂದು ಮರದ ಕಮಂಡಲ- ಇವಲ್ಲದೆ ಮತ್ತಾವ ಪರಿಗ್ರಹಗಳೂ ಇರುವುದಿಲ್ಲ.     
     ನಾಲ್ಕುತಿಂಗಳಿಗೊಮ್ಮೆ ಇವರು ತಮ್ಮ ಕೈಯಿಂದಲೇ ತಲೆಯ ಹಾಗೂ ಗಡ್ಡದ ಕೂದಲನ್ನು ಕಿತ್ತುಕೊಳ್ಳುತ್ತಾರೆ. ಎರಡು ಕೈಗಳನ್ನು ಜೋಡಿಸಿ ಬೊಗಸೆ ಮಾಡಿ ಅದರಲ್ಲಿ ಆಹಾರ ಸ್ವೀಕರಿಸುತ್ತಾರೆ. ಉಪ್ಪು ಖಾರ ಹುಳಿ - ಇವಾವುದೂ ಇವರ ಆಹಾರದಲ್ಲಿ ಸೇರಿರುವುದಿಲ್ಲ, ದಿನಕ್ಕೆ ಒಪ್ಪೊತ್ತು ಮಾತ್ರ ಆಹಾರವನ್ನು ಸ್ವೀಕರಿಸುತ್ತಾರೆ. 
  ನೆಲವನ್ನು ಪಿಂಛದಿಂದ ಶುದ್ಧಿಮಾಡಿ ಮಲಗುತ್ತಾರೆ. ಮಲಗಿದಾಗ ಏನನ್ನೂ ಹೊದೆವುದಿಲ್ಲ. ಊರಿಂದ ಊರಿಗೆ ಕಾಲುನಡಿಗೆಯಲ್ಲಿಯೇ ಸಂಚರಿಸುತ್ತಾರೆ. ಯಾವ ವಾಹನವನ್ನೂ ಯಾವ ಪಾದರಕ್ಷೆಯನ್ನೂ ಉಪಯೋಗಿಸುವುದಿಲ್ಲ. ಎಷ್ಟು ಮಂದಿ ಸ್ತ್ರೀಯರ ಗುಂಪಿನಲ್ಲಿದ್ದರೂ ಇವರಿಗೆ ಯಾವ ವಿಕಾರವೂ ಆಗುವುದಿಲ್ಲ. ದಿಗಂಬರ ಮುನಿಗಳನ್ನು ಜಾತರೂಪರು ಎಂದು ಕರೆಯುವುದುಂಟು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...