Skip to main content

Posts

Showing posts with the label Chardham yatra Puri Jagannath Ratha Yatra

Blog number 910. ಚಾರ್ ದಾಮ್ ಯಾತ್ರೆಯ ಪುರಿ ಜಗನ್ನಾಥ ಮಂದಿರದ ಬಲಭದ್ರ - ಸುಭದ್ರ- ಜಗನ್ನಾಥರ ಅಪೂರ್ಣ ಕಟ್ಟಿಗೆ ವಿಗ್ರಹಕ್ಕೆ ಕಾರಣ? ಈ ವರ್ಷದ ರಥಯಾತ್ರೆ 145ನೆ ರಥ ಯಾತ್ರೆ, ಕಟಕ್ ನ ಉದ್ದಿಮೆದಾರರು ನನ್ನ ಹೊಸ ಲಾಡ್ಜ್ ನಿರ್ಮಾಣದ ಸಂದರ್ಭ ಶುಭ ಹಾರೈಸಿ ನೀಡಿದ ವಿಗ್ರಹ ಇವತ್ತು ನನ್ನ ಆಪೀಸಿನಲ್ಲಿ.

#ಮೊನ್ನೆ_ಪುರಿ_ಜಗನಾಥ_ರಥಯಾತ್ರೆಗೆ_ಹತ್ತು_ಲಕ್ಷ_ಜನ. #ಈ_ಸುದ್ದಿ_ಕೇಳಿ_ನೆನಪಾಗಿದ್ದು_ಪುರಿಯ_ಗೆಳೆಯರು_ನೀಡಿದ್ದ_ಬಲಭದ್ರ_ಸುಭದ್ರ_ಜಗನ್ನಾಥ_ವಿಗ್ರಹ. #ಹೊಸಲಾಡ್ಜ್_ನಿರ್ಮಾಣದ_ಸಂದರ್ಭದಲ್ಲಿ_ಶುಭಹಾರೈಸಿ_ನೀಡಿದ್ದು_ಮರೆತು_ಬಿಟ್ಟಿದ್ದೆ. #ಹೊಸಲಾಡ್ಜ್_ಪ್ರಾರಂಬಿಸಿ_ಮೂರು_ವರ್ಷದ_ನಂತರ_ಪುರಿಯ_ಬಲಭದ್ರ_ಸುಭದ್ರ_ಜಗನಾಥರು_ನನ್ನ_ಕಛೇರಿಗೆ #ಇದನ್ನು_ನೀಡಿದ_ಕಟಕ್_ಜಗನ್ನಾಥಾ_ಪಾಲಿಮರ್_ಸಂಸ್ಥೆ #ಶ್ರೀ_ಸರೋಜ್_ಸುಬುದ್ದಿ_ಮತ್ತು_ಅವರ_ಆಪ್ತಕಾಯ೯ದರ್ಶಿ_ಸದಾನಂದ_ಜೇನಾ_ನೆನಪಾದರು     ಕೊರಾನಾ ಕಾಲದಲ್ಲಿ ಎರೆಡು ವರ್ಷ ಭಾರತೀಯ ಹಿಂದೂ ದರ್ಮಿಯರ ಚಾರ್ ದಾಮ್ ಯಾತ್ರೆಯ ಪುರಿ ಜಗನ್ನಾಥ ರಥ ಯಾತ್ರೆ ನಡೆದಿರಲಿಲ್ಲ, ಪ್ರತಿ ವರ್ಷ ಅಕ್ಷಯ ತದಿಗೆ ದಿನ ಬಲಭದ್ರ , ಸುಭದ್ರ ಮತ್ತು ಜಗನ್ನಾಥರ ಮೂರು ಪ್ರತ್ಯೇಕ ಮರದ ರಥ ಹೊಸದಾಗಿ ತಯಾರಿಸುತ್ತಾರೆ.    45 ಅಡಿ ಎತ್ತರದ 35 ಚದರಡಿಯ ಈ ಕಟ್ಟಿಗೆಯ ರಥಕ್ಕೆ ಒಂದೇ ಒಂದು ಮಳೆ ಬಳಸುವುದಿಲ್ಲ!, ಪ್ರತಿ ವರ್ಷ ಆಷಾಡ ಶುಕ್ಲ ಪಕ್ಷದ ಎರಡನೆ ದಿನ ಈ ರಥ ಯಾತ್ರೆ ನಡೆಯುತ್ತದೆ.   ಪುರಿ ಜಗನ್ನಾಥ ಮಂದಿರದಿಂದ 3 ಕಿ.ಮಿ.ದೂರದ ಜಗನ್ನಾಥನ ಚಿಕ್ಕಮ್ಮನ ಮನೆ (ಗುಂಡಿಜಾ)ಗೆ ಶ್ರೀ ಕೃಷ್ಣ ಮತ್ತು ಬಲರಾಮರು ತನ್ನ ತಂಗಿ ಸುಭ್ರದ್ರಾ ಜೊತೆ ಹೋಗಿ 7 ದಿನ ಅಲ್ಲಿದ್ದು ಅವರ ರಥಗಳೂ ಅಲ್ಲೇ ಇದ್ದು, 8 ನೇ ದಿನ ತಿರುಗಿ ಬರುತ್ತದೆ.   ಈ ವರ್ಷ ಮೊನ್ನೆ ಅಂದರೆ 1 - ಜುಲೈ...