Blog number 1008. ದಕ್ಷಿಣ ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬಂದ ಹಬ್ಬು ಕುಟುಂಬದ ಕನ್ನಡ ಸಾಹಿತ್ಯ ಕ್ಷೇತ್ರದ ಸಾದನೆ ಗಿನ್ನೆಸ್ ದಾಖಲೆಗೆ ಸೇರುವಂತದ್ದು ಬಹುಶಃ ಒಂದು ಕುಟುಂಬದಲ್ಲಿ ಸ್ವತಃ ತಂದೆ ಮತ್ತು ಅವರ ಆರೂ ಮಕ್ಕಳು ಸಾಹಿತಿಗಳಾಗಿ ನೂರಾರು ಪುಸ್ತಕ ಪ್ರಕಟಿಸಿರುವುದು ಭಾರತದಲ್ಲೇ ಅಪರೂಪ ಅಂತಹ ಬೇರಾವುದೇ ಕುಟುಂಬದ ಮಾಹಿತಿ ಇಲ್ಲ.
#ಕುಟುಂಬದಲ್ಲಿ_ತಂದೆ_ಮತ್ತು_ಆರು_ಮಕ್ಕಳೂ_ಕನ್ನಡ_ಬಾಷೆಯ_ಸಾಹಿತಿಗಳು #ಒ೦ದೇ_ಕುಟುಂಬದ_ಎಲ್ಲರೂ_ಸಾಹಿತ್ಯ_ಕ್ಷೇತ್ರದ_ಅತಿರಥ_ಮಹಾರಥರು #ಬಹುಶಃ_ಕನ್ನಡ_ಸಾಹಿತ್ಯ_ಕ್ಷೇತ್ರದಲ್ಲೇ_ಬಲು_ಅಪರೂಪದ_ಕುಟುಂಬ #ಗೋವಾದಿಂದ_ವಲಸೆ_ಬಂದ_ಹಬ್ಬು_ವಂಶಸ್ಥರು. #ಗಿನ್ನೆಸ್_ದಾಖಲೆಗೆ_ಇವರ_ಸಾಧನೆ_ಸೇರಿಸಬೇಕು ಹುಬ್ಬು ವಂಶಸ್ಥರ ಬೇರುಗಳು ದಕ್ಷಿಣ ಗೋವಾ ಮೂಲದವರು, ಹಬ್ಬು ವಂಶವನ್ನೆ ನಿರ್ವಂಶ ಮಾಡುವ ಸ್ವಾತಂತ್ರ್ಯ ಪೂರ್ವದ ಚಿತಾವಣೆಯಲ್ಲಿ ತಪ್ಪಿಸಿಕೊಂಡು ವಲಸೆ ಬಂದವರು ಎಂಬ ಇತಿಹಾಸ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ ಹಬ್ಬು ವಂಶದ ಶ್ರೀ ಸುಗುಣ ಶಂಕರ ಹಬ್ಬು ಮತ್ತು ಶ್ರೀಮತಿ ಕುಸುಮಾ ಬಾಯಿ ದಂಪತಿಗಳಿಗೆ ಆರು ಪುತ್ರರು. ಸುಭಾಷ್ ಚಂದ್ರ ಹುಬ್ಬು, ಎರಡನೆ ಮೋಹನ ದಾಸ್ ಹಬ್ಬು, ಮೂರನೆಯವರು ರಾಮಚಂದ್ರ ಹಬ್ಬುರವರು, ನಾಲ್ಕನೆಯವರು ಅರುಣ ಕುಮಾರ್ ಹಬ್ಬು, ಐದನೆಯವರು ಉದಯ ಕುಮಾರ್ ಹಬ್ಬು ಮತ್ತು ಕೊನೆಯ ಆರನೇ ಪುತ್ರ ಜಯಪ್ರಕಾಶ್ ಹಬ್ಬು. ಶ್ರೀ ಸುಗುಣ ಶಂಕರ ಹಬ್ಬು ಬರೆದು ಪ್ರಕಟಿಸಿದ ಪುಸ್ತಕ #ಅನಾಮಿಕನ_ಉಲಹು . ಇವರ ಮೊದಲ ಪುತ್ರ ದಿವಂಗತ ಸುಬಾಷ್ ಚಂದ್ರ ಹಬ್ಬು ಸಾಗರದಲ್ಲಿ ಅದ್ಯಾಪಕರಾಗಿ ಇಲ್ಲೇ ಅಂತಿಮ ದಿನ ಕಳೆದವರು ಇವರ ಆತ್ಮವೃತ್ತಾಂತ #ವ್ಯಕ್ತ ಪ್ರಕಟವಾಗಿದೆ. ದ್ವಿತೀಯ ಪುತ್ರ ಮ...