#ನಾಗರ_ಪಂಚಮಿಗೆ_ಇರುವ_ಪುರಾಣದ_ಮೂಲ
#ಮುಂದಿನ_ವರ್ಷ_ಇದೇ_ದಿನ_ಹೊರಡಲಿದೆ_ಬಾರಾಪ೦ಥ್_ಯಾತ್ರೆ.
ಹಿಂದೂ ಪಂಚಾಂಗದ ಪ್ರಕಾರ ನಾಗರ ಪಂಚಮಿಯು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಬರುತ್ತದೆ.
ಶ್ರಾವಣ ಮಾಸ ಶುಕ್ಲ ಪಕ್ಷ (ಬೆಳದಿಂಗಳ ಪಕ್ಷ / ಅಮಾವಾಸ್ಯೆಯ ನಂತರ ಬರುವ ಪಕ್ಷ) ಪಂಚಮಿ (ಐದನೇ ದಿನ).
ಉತ್ತರ ಭಾರತದ ಕೆಲವು ಭಾಗಗಳಲ್ಲಿ ಶ್ರಾವಣ ಕೃಷ್ಣ ಪಕ್ಷದ ಪಂಚಮಿಯಂದೂ ಕೆಲವರು ನಾಗರ ಪಂಚಮಿ ಆಚರಿಸುತ್ತಾರೆ ಆದರೆ ಬಹುತೇಕ ಭಾರತ ಹಾಗೂ ಕರ್ನಾಟಕದಲ್ಲಿ ಶ್ರಾವಣ ಶುಕ್ಲ ಪಂಚಮಿಯಂದೇ ನಾಗರ ಪಂಚಮಿಯನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ.
ಹಿಂದೂ ಪುರಾಣ ಮತ್ತು ಸಂಪ್ರದಾಯಗಳಲ್ಲಿ ನಾಗರ ಪಂಚಮಿ ಆಚರಣೆಯ ಹಿಂದೆ ಹಲವಾರು ಮಹತ್ವದ ಪೌರಾಣಿಕ ಕಥೆಗಳು ಹಾಗೂ ನಂಬಿಕೆಗಳಿವೆ.
1.#ಜನಮೇಜಯನ_ಸರ್ಪಯಾಗ ಮತ್ತು ಆಸ್ತಿಕ ಮುನಿ
ಪರೀಕ್ಷಿತ್ ಮಹಾರಾಜನು ತಕ್ಷಕನೆಂಬ ಸರ್ಪದ ಕಡಿತದಿಂದ ಮರಣ ಹೊಂದಿದಾಗ ಆತನ ಮಗನಾದ ಜನಮೇಜಯನು ಇಡೀ ಸರ್ಪಕುಲವನ್ನೇ ನಾಶಮಾಡಲು 'ಸರ್ಪಸತ್ರ ಯಾಗ'ವನ್ನು ಪ್ರಾರಂಭಿಸುತ್ತಾನೆ.
ಈ ಯಾಗದ ಪ್ರಭಾವದಿಂದ ಭೂಮಂಡಲದ ಸಕಲ ಹಾವುಗಳು ಬಂದು ಅಗ್ನಿಕುಂಡಕ್ಕೆ ಬೀಳತೊಡಗುತ್ತವೆ ಕೊನೆಗೆ ಆಸ್ತಿಕ ಮುನಿಯು ತನ್ನ ಜ್ಞಾನ ಮತ್ತು ಯುಕ್ತಿಯಿಂದ ಜನಮೇಜಯನನ್ನು ಪ್ರಸನ್ನಗೊಳಿಸಿ ಯಾಗವನ್ನು ನಿಲ್ಲಿಸಿ ಸರ್ಪಕುಲವನ್ನು ರಕ್ಷಿಸುತ್ತಾನೆ.
ಆಸ್ತಿಕ ಮುನಿಯು ಹಾವುಗಳ ಸಂರಕ್ಷಣೆ ಮಾಡಿದ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿದ್ದು ಅಂದಿನಿಂದ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ.
2. #ಶ್ರೀಕೃಷ್ಣನಿಂದ_ಕಾಳಿಂಗಮರ್ದನ
ಯಮುನಾ ನದಿಯಲ್ಲಿ ನೆಲೆಸಿದ್ದ ಕಾಳಿಂಗನೆಂಬ ವಿಷಪೂರಿತ ಸರ್ಪವು ನದಿಯ ನೀರನ್ನು ಸಂಪೂರ್ಣವಾಗಿ ವಿಷಮಯವಾಗಿಸಿ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿತ್ತು.
ಬಾಲಕೃಷ್ಣನು ಯಮುನಾ ನದಿಗೆ ಧುಮುಕಿ ಕಾಳಿಂಗನ ಹೆಡೆಗಳ ಮೇಲೆ ನರ್ತಿಸಿ ಆತನ ಗರ್ವಭಂಗ ಮಾಡಿ ಯಮುನೆಯನ್ನು ವಿಷಮುಕ್ತಗೊಳಿಸುತ್ತಾನೆ.
ಕಾಳಿಂಗನು ಶರಣಾಗಿ ಪ್ರಾರ್ಥಿಸಿದಾಗ ಕೃಷ್ಣನು ಅವನನ್ನು ಕ್ಷಮಿಸಿ ನದಿಯಿಂದ ತೆರಳಲು ಆದೇಶಿಸುತ್ತಾನೆ.
ಈ ಪವಿತ್ರ ಘಟನೆ ನಡೆದದ್ದು ಶ್ರಾವಣ ಶುದ್ಧ ಪಂಚಮಿಯಂದು ಎಂದು ನಂಬಲಾಗಿದೆ.
3. #ಸಮುದ್ರ_ಮಥನ ಮತ್ತು ವಾಸುಕಿ ಸರ್ಪ ದೇವತೆಗಳು ಮತ್ತು ಅಸುರರು ಅಮೃತಕ್ಕಾಗಿ ಸಮುದ್ರ ಮಥನ ಮಾಡಿದಾಗ 'ವಾಸುಕಿ' ಎಂಬ ಮಹಾಸರ್ಪವನ್ನು ಮಂದರ ಪರ್ವತಕ್ಕೆ ಹಗ್ಗವಾಗಿ ಬಳಸಲಾಯಿತು.
ಮಥನದ ಸಮಯದಲ್ಲಿ ವಾಸುಕಿಯ ಮೈಗೆ ಉಂಟಾದ ಗಾಯಗಳು ಮತ್ತು ಹೊರಬಂದ ಹಾಲಾಹಲ ವಿಷದ ಉರಿಯನ್ನು ಶಮನಗೊಳಿಸಲು ದೇವತೆಗಳು ಆತನಿಗೆ ಹಾಲು ಮತ್ತು ತುಪ್ಪವನ್ನು ಅರ್ಪಿಸಿ ತಂಪು ಮಾಡಿದರು ಎಂಬ ಉಲ್ಲೇಖವಿದೆ.
4. #ಕೃಷಿ_ಮತ್ತು_ಪ್ರಕೃತಿ_ಕೃತಜ್ಞತೆ
ರೈತರ ಪಾಲಿಗೆ ಹಾವುಗಳು 'ಮಿತ್ರ ಜೀವಿಗಳು'. ಹೊಲ-ಗದ್ದೆಗಳಲ್ಲಿ ಧಾನ್ಯಗಳನ್ನು ಹಾಳುಮಾಡುವ ಇಲಿ-ಹೆಗ್ಗಣಗಳನ್ನು ತಿಂದು ಬೆಳೆಗಳನ್ನು ರಕ್ಷಿಸುವ ಸರ್ಪಗಳಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ.
#ಪ್ರತಿ_12_ವರ್ಷಕ್ಕೊಮ್ಮೆ_ನಾಗರಪಂಚಮಿಯಂದೇ_ಪ್ರಾರಂಭ_ಆಗುವ_ನಾಥಪಂಥದ_ಬಾರಾಪಂಥ್_ಯಾತ್ರೆ
ಮುಂದಿನ ವರ್ಷ2027ರ #ನಾಸಿಕ್_ಸಿಂಹಸ್ಥ_ಕುಂಭಮೇಳ ಮತ್ತು #ಬಾರಾ_ಪಂಥ್ ಯಾತ್ರೆಯ ವಿವರ ಹೀಗಿದೆ...
2027 ರ ನಾಗರ ಪಂಚಮಿ ದಿನಾಂಕ 6-ಆಗಸ್ಟ್-2027 ಶುಕ್ರವಾರ ನಾಸಿಕ್ ಕುಂಭಮೇಳದ ಪ್ರಥಮ ಶಾಹೀ ಸ್ನಾನ ಅಂದರೆ ಅಮೃತ ಸ್ನಾನ 2- ಆಗಸ್ಟ್- 2027 ಸೋಮವಾರದ0ದು ನಡೆಯಲಿದೆ.
ಕುಂಭಮೇಳದ ಮೊದಲ ಶಾಹೀ ಸ್ನಾನವು 2027-ಆಗಸ್ಟ್ 2 ರಂದು ಮುಗಿದ ನಂತರ ಶ್ರಾವಣ ಶುಕ್ಲ ಪಂಚಮಿ,ನಾಗರ ಪಂಚಮಿ - ಆಗಸ್ಟ್ 6ರ ಪವಿತ್ರ ದಿನದಂದು ನಾಥ ಸಂಪ್ರದಾಯದ 'ಬಾರಾ ಪಂಥ್' (ಹನ್ನೆರಡು ಪಂಥಗಳ) ಸಾಧು-ಸಂತರ ಯಾತ್ರೆ ಹಾಗೂ ಧಾರ್ಮಿಕ ಮೆರವಣಿಗೆಗಳು ಸಂಪ್ರದಾಯಬದ್ಧವಾಗಿ ಮುಂದುವರಿಯುತ್ತವೆ.
ತ್ರ್ಯಂಬಕೇಶ್ವರ ಹಾಗೂ ನಾಸಿಕ್ ಭಾಗವು ನಾಥ ಪಂಥದ ಗುರು ಗೋರಕ್ಷನಾಥ, ಮತ್ಸ್ಯೇಂದ್ರನಾಥರ ಪರಂಪರೆ ಮೂಲ ಕೇಂದ್ರಗಳಲ್ಲಿ ಒಂದಾಗಿದ್ದು, ಕುಂಭಮೇಳದ ಸಂದರ್ಭದಲ್ಲಿ ಬಾರಾ ಪಂಥ್ ಸಾಧುಗಳ ಉಪಸ್ಥಿತಿ ಮತ್ತು ಅವರ ಸಂಚಾರಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ.
#nagarapanchami #shravanamasa #barapanth #nathapanth
#nasik #kumbamela.

#nasik #kumbamela
Comments
Post a Comment