ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?...
ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.
ಶಿವಮೊಗ್ಗ ಮಾರ್ಗದಿಂದ ಜೋಗ್ ಫಾಲ್ಸ್ ನೋಡಲು ಬರುವ ಪ್ರವಾಸಿಗಳು ಸಾಗರದ ನಂತರ ತಾಳಗುಪ್ಪಗೆ ಹೋದರೆ ಅಲ್ಲಿಂದ ಜೋಗ್ ಜಲಪಾತಕ್ಕೆ ಎರೆಡು ಮಾರ್ಗಗಳಿದೆ ಒಂದು ಕಾರ್ಗಲ್ ಮೂಲಕ ಇನ್ನೊಂದು ಹೊನ್ನಾವರ ಮಾರ್ಗದಲ್ಲಿ ಸಾಗಿ ನೇರವಾಗಿ ಜೋಗ್ ಫಾಲ್ಸ್ ಗೆ ಹೋಗುವುದು.
ನೀವೇನಾದರು ತಾಳಗುಪ್ಪದಿಂದ ಕಾರ್ಗಲ್ ಮಾರ್ಗವಾಗಿ ಸಾಗಿದರೆ ಈ ಜೈನಾ ಗೇಟ್ ಮೂಲಕವೇ ಹೋಗುತ್ತೀರಿ.
ಪ್ರಾಜೆಕ್ಟ್ ಅಧಿಕೃತ ದಾಖಲೆಯಲ್ಲಿ ಈ ಹೆಸರು ಇಲ್ಲ ಆದರೆ ಜನರ ಬಾಯಲ್ಲಿ ಈ ಪ್ರದೇಶ ಚೈನಾ ಗೇಟ್ ಅಂತಾಗಿದೆ.
ಇಲಾಖಾ ಉದ್ಯೋಗಿಗಳ ಪ್ರಕಾರ
ಇಲ್ಲಿಂದ ಮಹಾತ್ಮಾಗಾಂಧಿ ಪವರ್ ಪ್ಲಾಂಟಿಗೆ ನೀರನ್ನು
ಕಾಲುವೆಗೆ ಬಿಡುವ ಗೇಟ್ ಜೈನ್ ಪುಲ್ಲಿಯಿಂದ ಆಪರೇಟ್ ಆಗುವುದರಿಂದ #ಚೈನ್_ಗೇಟ್ ಎಂಬ ಹೆಸರೇ ಈಗಾ ಚೈನಾ ಗೇಟ್ ಆಗಿದೆ ಅಂತಾರೆ.
ಲಿಂಗನಮಕ್ಕಿ ಮೂಲ ನಿವಾಸಿಗಳ ಪ್ರಕಾರ
#ಲಿಂಗನಮಕ್ಕಿ ಪ್ರಾಜೆಕ್ಟ್ ಕಾರ್ಮಿಕರಿಗೆ ಸೈನಸ್ ಗ್ಯಾಸ್ ಚೆಂಬರ್ ಮೂಲಕ ಪ್ರಾಜೆಕ್ಟ್ ಪ್ರದೇಶಕ್ಕೆ ಪ್ರವೇಶ ಇದ್ದಿದ್ದರಿಂದ ಈ ಹೆಸರು ಬಂದಿರಬಹುದು ಅನ್ನುತ್ತಾರೆ.
ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆಗಾಗಿ ಮಡೇನೂರು ಅಥವ ಹಿರೇ ಭಾಸ್ಕರ ಡ್ಯಾಮ್ ನಿರ್ಮಾಣ ಮಾಡಿದಾಗ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್ಗಳನ್ನು ಅಳವಡಿಸಲಾಯಿತು.
ಇಲ್ಲಿಂದ ಶರಾವತಿ ನೀರು ಕಾಲುವೆ ಮುಖಾಂತರ ಫೋರ್ ಬೇಗೆ ತಲುಪುತ್ತದೆ.
ಮೊದಲಿಗೆ ಮಡೆನೂರು ಡ್ಯಾಮಿನಿಂದ ಬಂದ ನೀರಿಗೆ ಇಲ್ಲಿ ಚೆಕ್ ಡ್ಯಾಮ್ ನಿರ್ಮಿಸಿದ್ದಾರೆ, ಇಲ್ಲಿ ನಿಂತ ನೀರು ಚೈನ್ ಪುಲ್ಲಿಗಳಿಂದ ನಿಯಂತ್ರಿಸುವ ಚೈನ್ ಗೇಟ್ ಮುಖಾಂತರ ಮಹಾತ್ಮ ಗಾಂಧಿ ವಿದ್ಯುತ್ ಕೇಂದ್ರಕ್ಕೆ ಈ ನೀರನ್ನು ನಿಯಂತ್ರಿಸಿ ಬಿಡಲಾಗುತ್ತದೆ.
1948ರಲ್ಲಿ ಈ ಯೋಜನೆ ಪ್ರಾರಂಭವಾಯಿತು ಆಗಲೇ ತಾಳಗುಪ್ಪದ ಚೂರಿಕಟ್ಟೆಯಿಂದ ಕಾರ್ಗಲ್ ಗೆ ಇದರ ಪಕ್ಕದಲ್ಲಿ ಶರಾವತಿ ನದಿಗೆ ಸೇತುವೆ ಕೂಡ ನಿರ್ಮಿಸಲಾಯಿತು.
ನಂತರ ಲಿಂಗನಮಕ್ಕಿಯಲ್ಲಿ ಹೊಸ ಡ್ಯಾಮ್ ನಿರ್ಮಾಣವಾಯಿತು, ಆಗಲೂ ಇದೇ ಚೆಕ್ ಡ್ಯಾಮ್ ಮತ್ತು ಜೈನ್ ಗೇಟನ್ನು ಬಳಸಿಕೊಂಡು ನಿರ್ವಹಿಸುವ ವ್ಯವಸ್ಥೆ ಮುಂದುವರಿಸಲಾಯಿತು.
ಆದ್ದರಿಂದಲೇ ಈ ಪ್ರದೇಶಕ್ಕೆ ಜನರ ಬಾಯಲ್ಲಿ #ಚೈನ್_ಗೇಟ್ ಎಂಬುದು #ಚೈನಾ_ಗೇಟ್ ಆಗಿ ಬಳಕೆಯಲ್ಲಿದೆ ಎಂದು ಹೇಳುತ್ತಾರೆ.
ಇನ್ನೊಂದು ಸಾಧ್ಯತೆ ಕೂಡ ಸ್ಥಳೀಯರು ಹೇಳುತ್ತಾರೆ ಅಭಿನಂದರೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕೆ ಹೊರ ಪ್ರದೇಶದಿಂದ ಬರುತ್ತಿದ್ದ ಕಾರ್ಮಿಕರಗಳನ್ನು ಈ ಪ್ರದೇಶದಲ್ಲಿ
ಸೋಂಕು ರೋಗಗಳ ತಡೆಯಲಿಕ್ಕಾಗಿ ಸೈನಸ್ ಗ್ಯಾಸ್ ಚೇಂಬರ್ಗಳನ್ನು ಅಳವಡಿಸಿದ್ದರು ಅದರ ಮೂಲಕ ಕಾರ್ಮಿಕರು ಹಾದು ಹೋಗಬೇಕಾಗಿತ್ತು ಆದ್ದರಿಂದ ಮುಂದೆ ಸೈನಸ್ ಗ್ಯಾಸ್ ಎಂಬ ಹೆಸರೇ ಚೈನಾ ಗೇಟ್ ಆಯಿತು ಅನ್ನುತ್ತಾರೆ.
ಶರಾವತಿ ನದಿ ತುಂಬಿ ಲಿಂಗನಮಕ್ಕಿ ಡ್ಯಾಮಿನ ಕ್ರಸ್ಟ್ ಗೇಟ್ ತೆರೆದಾಗ ಜೋಗ್ ಜಲಪಾತ ತನ್ನ ಗತಕಾಲದ ಸೌಂದರ್ಯ ಮರು ಪಡೆದಾಗ ಆಗಮಿಸುವ ಅಸಂಖ್ಯಾತ ಪ್ರವಾಸಿಗಳು ಈ ಪ್ರದೇಶದ ಮುಖಾಂತರವೇ ಪ್ರವೇಶಿಸ ಬೇಕು.
ಆಗ ಎಲ್ಲರನ್ನು ಪ್ರವೇಶದಲ್ಲೇ ಆಕರ್ಷಿಸುವ ಈ ಸ್ಥಳದಲ್ಲಿ ಪ್ರವಾಸಿಗಳು ನಿಂತು ಅವರೆಲ್ಲರೂ ಪೋಟೋ - ವಿಡಿಯೋ - ಸೆಲ್ಫಿ - ರೀಲ್ ಮಾಡುತ್ತಾರೆ.
ಅವರ ಬಾಯಲ್ಲಿ ಕೂಡ ಇದು ಚೈನಾ ಗೇಟ್ ಅಂತಲೇ ಉಚ್ಚಾರ ಆಗುತ್ತಿದೆ.
ಈ ಸಾರಿ ಜೋಗ್ ಫಾಲ್ಸ್ ಪ್ರವಾಸ ಹೋದಾಗ ಮರೆಯದೆ ಇಲ್ಲಿಗೆ ಹೋಗಿ ಚೈನಾ ಗೇಟ್ ನೋಡಿ ಬನ್ನಿ.
#jogfalls #kargal #talaguppa #chinagate
#sharavathiriver #shimoga #mansoontrip
#crestgates #linganamakki
Comments
Post a Comment