#ತೇಜ್_ಕುಮಾರ್_ಕೆ_ಆರ್_ಸುಳ್ಯ ಕೃಷಿಕರು, ಬರಹಗಾರರು ಮತ್ತು ಅರಬಾಸೆ, ಕನ್ನಡ, ಇಂಗ್ಲೀಷ್, ತುಳು ಮತ್ತು ಮಲೆಯಾಳ ಬಾಷೆ ಅರಿತವರು, ಇವರು ಮುಖತಃ ಬೇಟಿ ಆಗಿಲ್ಲ ಆದರೆ ಪೇಸ್ ಪುಸ್ತಕ ಗೆಳೆಯರನ್ನಾಗಿಸಿ ನನ್ನ ಕಾದಂಬರಿ ಇವರು ಓದಿ ವಿಮಷೆ೯ ಮಾಡುವಂತೆ ಮಾಡಿದೆ, ಇವರ ಮನೆ ಸುಂದರ ಪರಿಸರದಲ್ಲಿ ಕಲಾತ್ಮಕವಾಗಿ ನಿಮ೯ಣಗೊಂಡಿರುವುದರ ಚಿತ್ರ ಲಗತ್ತಿಸಿದ್ದೇನೆ ನೋಡಿ, ಒಮ್ಮೆ ನೋಡಲೇ ಬೇಕು ಅನ್ನಿಸುತ್ತದೆ. ತಮ್ಮ ಇತರೆ ಕಾಯ೯ಗಳ ನಡುವೆ ಓದಿ ವಿಮಷಿ೯ಸಿದ ತೇಜ್ ಕುಮಾರರಿಗೆ ಕೃತಜ್ಞತೆಗಳೊಂದಿಗೆ ಅವರ ವಿಮರ್ಷೆ ನಿಮಗಾಗಿ #ನನ್ನ_ಮುಖ_ಪುಸ್ತಕದ_ಗೆಳೆಯ_ಅರುಣ್_ಪ್ರಸಾದ್ ರವರು ಅವರ ಮೊದಲ ಪುಸ್ತಕ "ಬೆಸ್ತರ ರಾಣಿ ಚಂಪಕಾ" ಕಳುಹಿಸಿದ್ದರು. ಓದಿ ಮುಗಿಸಿದೆ. ಒಂದು ಒಳ್ಳೆಯ ಪುಸ್ತಕ. ನಮ್ಮ ರಾಜಪರಂಪರೆಗಳಲ್ಲಿ,ಜಾನಪದ ಕತೆಗಳಲ್ಲಿ ಹೆಚ್ಚಾಗಿ ಹೆಣ್ಣು ಶೋಷಿತಳಾಗಿಯೇ ಉಳಿಯುತ್ತಾಳೆ.ಮನಸ್ಸು ಭಾರವಾಗುತ್ತದೆ. ಅಂತಹ ಕತೆಯೊಂದನ್ನ ಲೇಖಕರು ನಮಗಿತ್ತಿದ್ದಾರೆ. ಕರುನಾಡ ಇತಿಹಾಸದಲ್ಲಿ ಕೆಳದಿ ಒಂದು ವಿಶಿಷ್ಟ ರಾಜ್ಯ. ವಿಜಯನಗರದ ಸಾಮಂತರಾಗಿದ್ದು ವಿಜಯನಗರದ ಫತನದ ನಂತರ ಸ್ವತಂತ್ರ ರಾಜರಾಗಿ ಅಷ್ಟ ದಿಕ್ಕುಗಳ ಶತ್ರುಗಳನ್ನು ಮೆಟ್ಟಿ ನಿಂತು ಆಳಿದ ಕೀರ್ತಿ ಅವರದ್ದು.ಅವರಲ್ಲಿ ಪಡುಗಡಲೊಡೆಯನೆಂಬ ಬಿರುದಾಂಕಿತ ರಾಜಾ ವೆಂಕಟಪ್ಪನಾಯಕ ಕಲಾವಂತಿಕೆಯ ಬೆಸ್ತರ ಹುಡುಗಿ ಚಂಪಕಾಳಿಗೆ ಮರುಳಾಗುತ್ತಾನೆ ಮ...