#ಮಹಾಶಿವರಾತ್ರಿ_ಶುಭ_ಹಾರೈಕೆಗಳು #ನನಗೆ_ಶಿವರಾತ್ರಿ_ವಿಶೇಷ_ದಿನ #ರಾತ್ರಿ_ಊಟ_ಬಿಟ್ಟು_ಇವತ್ತಿಗೆ_ಎರೆಡು_ವರ್ಷ. ಎರೆಡು ವರ್ಷದ ಹಿಂದೆ ನನ್ನ ವಯೋಮಾನ 56 ವರ್ಷ, ದೇಹದ ತೂಕ 135-140 kg !?, ಸುಮಾರು 2000 ಇಸ್ವಿಯಿಂದ ದೇಹದ ತೂಕ ಇಳಿಸಲು ಮಾಡಿದ ಸರ್ಕಸ್ ಮಾತ್ರ ಒ0ದೆರೆಡಲ್ಲ. ರವಿ ಬೆಳೆಗೆರೆಯವರು "ಬೆಂಗಳೂರಿಗೆ ಬನ್ನಿ ಬೇರಿಯಾಟ್ರಿಕ್ ಸರ್ಜರಿ ಮಾಡಿಸುತ್ತೇನೆ" ಅನ್ನುವವರೆಗೆ ನನ್ನ ಪರಿಸ್ಥಿತಿ. ಹತ್ತು ಹೆಜ್ಜೆ ನಡೆಯಲು ಸಾಧ್ಯವಿಲ್ಲ, ಪ್ರತಿ ಎರೆಡು ತಿಂಗಳಲ್ಲಿ ಪ್ಯಾಂಟ್ ಮತ್ತು ಶಟ್೯ ಟೈಟ್ ಆಗುತ್ತೆ ಅದರಿಂದ ಪ್ಯಾಂಟ್ ತ್ಯಜಿಸಿ ಪಂಚೆಗೆ ಬದಲಾದೆ ,ವಿಪರೀತ ಗೊರಕೆ, ನಿಯಂತ್ರಣಕ್ಕೆ ಬರದ ಡಯಾಬಿಟೀಸ್, ಬಿಪಿ, ವಿಪರೀತ ಹಸಿವು ಇದರಿಂದ ನನಗೆ ನಾನೆ ಯೋಚಿಸಿದ್ದು ಈ ಮನುಷ್ಯ ಜೀವನ ಇಷ್ಟು ಕಷ್ಟ ಯಾಕೆ? ಮತ್ತು ಈ ಜೀವನ ಬೇಕಾ? ಅಂತ. ಪ್ರಪಂಚದ ಎಲ್ಲಾ ತೂಕ ಇಳಿಸುವ ಉಪಾಯಗಳಿಗೂ ಹಣ ಪೀಕಿದೆ ಆದರೆ ಪರಿಣಾಮ? ಎನೂ ಇಲ್ಲ. ಇದಕ್ಕಾಗಿ ಅನೇಕ ಪ್ರಯೋಗದ ನಂತರ ಅಂತಿಮ ಪ್ರಯೋಗವಾಗಿ ಎರೆಡು ವರ್ಷದ ಹಿಂದೆ ಶಿವರಾತ್ರಿಯ ದಿನ ತೀಮಾ೯ನ ಮಾಡಿದೆ ನಿತ್ಯ ರಾತ್ರಿ ಊಟ ಜೀವನ ಪರ್ಯಂತ ತ್ಯಾಗ ಅಂತ ( ಅದಕ್ಕೆ ಅನೇಕರ ಪ್ರಯೋಗದ ಪಲಿತಾಂಶದಿಂದ ಪ್ರಬಾವಿತನಾಗಿ) ಮೊದ ಮೊದಲಿಗೆ ಕಷ್ಟ ಆದರೆ ದೃಡ ನಿರ್ದಾರದ ಮುಂದೆ ಏನೂ ಅಲ್ಲ, ರಾತ್ರಿ ಶುಗರ್ ಪ್ರೀ ಚೈವನ ಪ್ರಾಶ ಒಂದು ಲೋಟ ಹಾಲು ಮತ್ತು ಒ0ದು ಲೋಟ ರಾ...