#ನನಗೆ_ಶಿವರಾತ್ರಿ_ವಿಶೇಷ_ದಿನ
#ರಾತ್ರಿ_ಊಟ_ಬಿಟ್ಟು_ಇವತ್ತಿಗೆ_ಎರೆಡು_ವರ್ಷ.
ಎರೆಡು ವರ್ಷದ ಹಿಂದೆ ನನ್ನ ವಯೋಮಾನ 56 ವರ್ಷ, ದೇಹದ ತೂಕ 135-140 kg !?, ಸುಮಾರು 2000 ಇಸ್ವಿಯಿಂದ ದೇಹದ ತೂಕ ಇಳಿಸಲು ಮಾಡಿದ ಸರ್ಕಸ್ ಮಾತ್ರ ಒ0ದೆರೆಡಲ್ಲ.
ರವಿ ಬೆಳೆಗೆರೆಯವರು "ಬೆಂಗಳೂರಿಗೆ ಬನ್ನಿ ಬೇರಿಯಾಟ್ರಿಕ್ ಸರ್ಜರಿ ಮಾಡಿಸುತ್ತೇನೆ" ಅನ್ನುವವರೆಗೆ ನನ್ನ ಪರಿಸ್ಥಿತಿ.
ಹತ್ತು ಹೆಜ್ಜೆ ನಡೆಯಲು ಸಾಧ್ಯವಿಲ್ಲ, ಪ್ರತಿ ಎರೆಡು ತಿಂಗಳಲ್ಲಿ ಪ್ಯಾಂಟ್ ಮತ್ತು ಶಟ್೯ ಟೈಟ್ ಆಗುತ್ತೆ ಅದರಿಂದ ಪ್ಯಾಂಟ್ ತ್ಯಜಿಸಿ ಪಂಚೆಗೆ ಬದಲಾದೆ ,ವಿಪರೀತ ಗೊರಕೆ, ನಿಯಂತ್ರಣಕ್ಕೆ ಬರದ ಡಯಾಬಿಟೀಸ್, ಬಿಪಿ, ವಿಪರೀತ ಹಸಿವು ಇದರಿಂದ ನನಗೆ ನಾನೆ ಯೋಚಿಸಿದ್ದು ಈ ಮನುಷ್ಯ ಜೀವನ ಇಷ್ಟು ಕಷ್ಟ ಯಾಕೆ? ಮತ್ತು ಈ ಜೀವನ ಬೇಕಾ? ಅಂತ.
ಪ್ರಪಂಚದ ಎಲ್ಲಾ ತೂಕ ಇಳಿಸುವ ಉಪಾಯಗಳಿಗೂ ಹಣ ಪೀಕಿದೆ ಆದರೆ ಪರಿಣಾಮ? ಎನೂ ಇಲ್ಲ.
ಇದಕ್ಕಾಗಿ ಅನೇಕ ಪ್ರಯೋಗದ ನಂತರ ಅಂತಿಮ ಪ್ರಯೋಗವಾಗಿ ಎರೆಡು ವರ್ಷದ ಹಿಂದೆ ಶಿವರಾತ್ರಿಯ ದಿನ ತೀಮಾ೯ನ ಮಾಡಿದೆ ನಿತ್ಯ ರಾತ್ರಿ ಊಟ ಜೀವನ ಪರ್ಯಂತ ತ್ಯಾಗ ಅಂತ ( ಅದಕ್ಕೆ ಅನೇಕರ ಪ್ರಯೋಗದ ಪಲಿತಾಂಶದಿಂದ ಪ್ರಬಾವಿತನಾಗಿ) ಮೊದ ಮೊದಲಿಗೆ ಕಷ್ಟ ಆದರೆ ದೃಡ ನಿರ್ದಾರದ ಮುಂದೆ ಏನೂ ಅಲ್ಲ, ರಾತ್ರಿ ಶುಗರ್ ಪ್ರೀ ಚೈವನ ಪ್ರಾಶ ಒಂದು ಲೋಟ ಹಾಲು ಮತ್ತು ಒ0ದು ಲೋಟ ರಾಗಿ ಗಂಜಿ, ಬೆಳಿಗ್ಗೆ 3000 ಹೆಜ್ಜೆ ವಾಕಿಂಗ್ ಸಂಜೆ 6000 ಹೆಜ್ಜೆ ವಾಕಿಂಗ್ ಈಗ ರಾತ್ರಿ ರಾಗಿ ಗಂಜಿ ಕೊಡ ತ್ಯಜಿಸಿದ್ದೇನೆ.
ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟ, ಮೊಸರು, ತುಪ್ಪ ಮತ್ತು ಬೆಣ್ಣೆ ತ್ಯಜಿಸಲಿಲ್ಲ ಆದರೆ ದೇಹ ಅದಾಗಿಯೇ ಸೇವಿಸುವ ಪ್ರಮಾಣ ಕಡಿಮೆ ಮಾಡಿದೆ.
ಎರಡನೆ ಶಿವರಾತ್ರಿಗೆ ನನ್ನ ತೂಕ 108 ರಿಂದ 109 ರಲ್ಲಿ ತೂಗುತ್ತಿದೆ, ಡಯಾಬಿಟೀಸ್ ನಾರ್ಮಲ್ ಆಗಿದೆ (ಆಲೇಮನೆ ಕಬ್ಬಿನ ಹಾಲು ಮಣ್ಣಿ ತಿಂದಾಗ ಸ್ವಲ್ಪ ಜಾಸ್ತಿ), ಗೊರಕೆ ನಾಪತ್ತೆ, ಬಿಪಿ ನಾರ್ಮಲ್ ಆಗಿದೆ.
ಹೊಕ್ಕಳ ಹತ್ತಿರ ಉಂಟಾಗಿದ ಹನಿ೯ಯಾ ಆಪರೇಷನ್ ಇಲ್ಲದೆ ಸರಿ ಆಗಿದೆ.
ನನ್ನ ಎರೆಡು ವರ್ಷದ ಅನುಭವ ತಕ್ಷಣ ತೂಕ ಇಳಿಯಬೇಕೆಂಬ ಹಪಾಹಪಿ ಬೇಡ, ಪದೇ ಪದೇ ತೂಕ ನೋಡಬೇಡಿ, ನಿಮಗೆ ಇಷ್ಟದ ಆಹಾರ ಬಿಡಬೇಡಿ ಆದರೆ ರಾತ್ರಿ ಊಟ ಬಿಡಿ ಮತ್ತು ನಿತ್ಯ 7000 ಹೆಜ್ಜೆಯ ವಾಕಿಂಗ್ ನಿರಂತರ ಮಾಡಿ, ಯೋಗ, ಪ್ರಾಣಯಾಮ ಮತ್ತು ದ್ಯಾನ ಅಭ್ಯಾಸ ಇದ್ದರೆ ಮುಂದುವರಿಸಿ.
ಅಮೆರಿಕನ್ ಡಯಟ್, ಆ ಪೇಯ ಈ ಪೇಯ ಎಂಬ ಮಿಲ್ಕ್ ಶೇಖ್, ಹರ್ಬಲ್ ಟೀ ಇಂತವಕ್ಕೆಲ್ಲ ಹಣ ಪೀಕ ಬೇಡಿ.
3 ರಿಂದ 4 ವರ್ಷದಲ್ಲಿ ನಿಮ್ಮ ಆರೋಗ್ಯ ಕ್ರಮೇಣ ಸುದಾರಿಸುವ ನಮ್ಮದೇ ಸಂಸ್ಕೃತಿಯ ಈ ಪದ್ದತಿ ಅಭ್ಯಾಸ ಮಾಡಿಕೊಳ್ಳಿ ಮತ್ತು ನಿಮಗೊಂದು ಎಚ್ಚರ ತಕ್ಷಣ ತೂಕ ಇಳಿಸಿದರೆ ನಿಮ್ಮ ಆರೋಗ್ಯ ಖಂಡಿತಾ ಏರುಪೇರು ಆಗುತ್ತದೆ ಮತ್ತು ಪುನಃ ನೀವು ಈ ಮಾರ್ಗದಲ್ಲಿ ಕಳೆದ ತೂಕ ಬೋನಸ್ ನೊಂದಿಗೆ ನಿಮ್ಮ ದೇಹದಲ್ಲಿ ಶೇಖರವಾಗಿ ಎಲ್ಲದರ ಬಗ್ಗೆ ನಿರಾಸಕ್ತಿ ಉಂಟು ಮಾಡುವುದು ಖಚಿತ.
ನನ್ನ ಅನುಭವದಲ್ಲಿ ಸುಮಾರು 32 kg ಇಳಿದಿದೆ, ಮೊದಲ ವರ್ಷ 25 kg ಇಳಿದರೆ ಎರಡನೆ ವರ್ಷ ಇಳಿದದ್ದು 7 ಕೇಜಿ ಮಾತ್ರ ಹಾಗಂತ ನಾನು ನಿರಾಶನಾಗಿಲ್ಲ ನನ್ನ ಗುರಿ ಇನ್ನೆರೆಡು ಶಿವರಾತ್ರಿ ಕಳೆಯಬೇಕು.
ಇದನ್ನು ಇಲ್ಲಿ ಬರೆಯಲು ಕಾರಣ ಇದು ಅವಶ್ಯವಿದ್ದವರಿಗೆ ಪ್ರೇರಣೆ ಆಗಲಿ ಅಂತ.
ಪ್ರಖ್ಯಾತ ಜಲ ತಜ್ಞ ಪರಿಸರ ಪ್ರೇಮಿ ಶಿವಾನಂದ ಕಳವೆ ರಾತ್ರಿ ಊಟ ನನ್ನ ಅನುಭವದ ಲೇಖನದಿಂದ ಪ್ರಬಾವಿತನಾಗಿ ತ್ಯಜಿಸಿದ್ದಾಗಿ ತಿಳಿಸಿದ್ದಾರೆ.
ಅನೇಕರು ನನ್ನ ಅನುಭವ ಕೇಳಿ ಪ್ರಾರಂಬಿಸಿದ್ದಾಗಿ ತಿಳಿಸಿದ್ದಾರೆ ಅವರಿಗೆಲ್ಲ ಶಿವರಾತ್ರಿ ಶುಭ ಹಾರೈಕೆಯೊಂದಿಗೆ ನನ್ನ ಆಪ್ತ ಸಲಹೆ ನಿಮ್ಮ ದೇಹದ ತೂಕ ಇಳಿಸುವ ಆಂದೋಲನಕ್ಕೆ ಕ್ಷಿಪ್ರ ಕಾಲ ಮಿತಿ ಹಾಕಬೇಡಿ, ಒ0ದೆರೆಡು ವರ್ಷದಿಂದ ಜೀವನ ಪರ್ಯಂತ ನಿಮ್ಮ ಈ ಸಾದನೆ ಮುಂದುವರಿಯಲಿ ಆರೋಗ್ಯವಂತ ಜೀವನ ನಿಮ್ಮದಾಗಲಿ🙏🙏🙏
Comments
Post a Comment