ದೈತ್ಯಾಕಾರದ ಹುಲ್ಲಿನ ಜಾತಿಗೆ ಸೇರಿದ ಕಬ್ಬು ವಿಶ್ವದ ಶೇಕಡ 69 ಬಾಗದ ಸಕ್ಕರೆ ಉತ್ಪಾದನೆಗೆ ಬಳಕೆ ಆಗುತ್ತಿದೆ, ಭಾರತೀಯ ವೇದ ಕಾಲದ ಅಥರ್ವಣ ವೇದದಲ್ಲಿ ಕಬ್ಬಿನ ಉಲ್ಲೇಖವಿದೆ.
#ಅಥರ್ವಣ_ವೇದಗಳಲ್ಲಿ_ಕಬ್ಬಿನ_ಉಲ್ಲೇಖವಿದೆ
#ಕಬ್ಬು_ಬಹುವಾಷಿ೯ಕ_ದೈತ್ಯಾಕಾರದ_ಹುಲ್ಲಿನ_ಜಾತಿಗೆ_ಸೇರಿದೆ.
#ವಿಶ್ವದ_ಸಕ್ಕರೆ_ಉತ್ಪಾದನೆಯಲ್ಲಿ_ಶೇಕಡಾ_68_ಕಬ್ಬಿನ_ಅವಲಂಬನೆ.
ಬಾಲ್ಯದಲ್ಲಿ ಮತ್ತು ಯೌವನದಲ್ಲಿ ಡಿಸೆಂಬರ್ ತಿಂಗಳಿಂದ ಮಾರ್ಚ್ ತನಕ ನಾನು ಕಬ್ಬು ತಿನ್ನುತ್ತಿದ್ದದ್ದು ಕನಿಷ್ಟ ದಿನಕ್ಕೊಂದು ಕೋಲು ಅಂದರೆ ಸರಾಸರಿ ವಾರ್ಷಿಕ 100 ಕೋಲು ಕಬ್ಬು ನಾನೊಬ್ಬನೆ ತಿನ್ನುತ್ತಿದ್ದೆ.
ಎಂತ ಜಿಗುಟು ಕಬ್ಬಾಗಿರಲಿ, ಎಂತಹ ಗಂಟಿರುವ ಕಬ್ಬಾಗಲಿ ಅದರ ಮೇಲು ತುದಿಯಿಂದ ಬುಡದ ತನಕ ಕಬ್ಬಿನ ಸಿಪ್ಪೆ ತೆಗೆದು ಜಗಿದು ರಸ ಕುಡಿಯುವ ಗಟ್ಟಿ ದಂತ ಪಂಕ್ತಿ ನನ್ನದಾಗಿತ್ತು.
ಈಗ ಈ ಪರಿಸ್ಥಿತಿ ಇಲ್ಲ, ಮೂರು ಕಬ್ಬಿನ ಕೋಲು ಇಟ್ಟುಕೊಂಡು ಹತ್ತಾರು ದಿನ ಆದರೂ ತಿನ್ನಲಾಗಿಲ್ಲ.
ಪ್ರತಿ ವರ್ಷ ಉತ್ತಮ ಬೆಲ್ಲ ಖರೀದಿಸಲು ಸರ್ಕಸ್ ಮಾಡುವುದೇ ಆಗಿದೆ, ರೈತರೂ ನಾಟಿ ತಳಿಯಲ್ಲಿ ಬೆಲ್ಲದ ಇಳುವರಿ ಕಡಿಮೆ ಅಂತ ಸಕ್ಕರೆ ಕಬ್ಬು ಹಾಕುತ್ತಿದ್ದಾರೆ ಅದರಿಂದ ತಯರಾಗುವ ಬೆಲ್ಲ ನಾಟಿ ಕಬ್ಬಿನ ಬೆಲ್ಲದ ಘಮವಿಲ್ಲ, ರುಚಿ ಸವಳು ಆದ್ದರಿಂದ ಒಳ್ಳೆ ಆಲೆಮನೆ ಬೆಲ್ಲದ ಕೊರತೆ ಇದೆ.
ಪ್ರಪಂಚದಲ್ಲಿ ಸಕ್ಕರೆ ಹೊಂದಿರುವ ಸಸ್ಯಗಳು, ಗೆಡ್ಡೆಗಳು ಅನೇಕ ಇದೆ, ಎಲ್ಲಾ ಹಣ್ಣುಗಳಿಂದ, ತಾಳೆ ತೆಂಗುಗಳಿಂದ ಸಕ್ಕರೆ - ಬೆಲ್ಲ ತಯಾರಿಸಬಹುದಾದರೂ ವಿಶ್ವದ ಶೇಕಡಾ 69% ಸಕ್ಕರೆ ತಯಾರಿಸಲು ಕಬ್ಬಿನ ಮೇಲೆ ಅವಲಂಬಿಸಿದೆ ಕಾರಣ ಕಬ್ಬು ಬಿಟ್ಟು ಬೇರೆ ಹಣ್ಣು, ಗೆಡ್ಡೆ, ತಾಳೆ ಮತ್ತು ತೆಂಗುಗಳಿಂದ ಉತ್ಪಾದಿಸಿದರೆ ಉತ್ಪಾದನಾ ವೆಚ್ಚ ಹೆಚ್ಚು ಆಗುವುದು ಮುಖ್ಯ ಕಾರಣ.
ಕಬ್ಬು ಬೆಳೆಯುವ ದೇಶಗಳಲ್ಲಿ ಬ್ರಿಜಿಲ್ ಗೆ ಮೊದಲ ಸ್ಥಾನವಾದರೆ ಭಾರತಕ್ಕೆ ಎರಡನೆ ಸ್ಥಾನ.
ಕಬ್ಬು ಎರೆಡು ಮೀಟರ್ ನಿಂದ ಆರು ಮೀಟರ್ (18 ಅಡಿ) ಎತ್ತರಕ್ಕೆ ಬೆಳೆಯುವ ದೈತ್ಯಾಕಾರದ ಹುಲ್ಲಿನ ಜಾತಿಗೆ ಸೇರಿದೆ.
ಭಾರತೀಯ ವೇದ ಕಾಲದಲ್ಲಿ ಅಥರ್ವಣ ವೇದದಲ್ಲಿ ಕಬ್ಬಿನ ಉಲ್ಲೇಖವಿದೆ ಮತ್ತು ಹಿಂದೂ ಧರ್ಮದ ಪೂಜೆಗಳಲ್ಲಿ, ಹೋಮ ಹವನದಲ್ಲಿ ಕಬ್ಬಿಗೆ ವಿಶೇಷ ಸ್ಥಾನಮಾನ ಇದೆ ಅಂದರೆ ಇದು ಎಷ್ಟು ಪ್ರಾಚೀನ ಬೆಳೆ ಎಂಬುದು ಅರ್ಥವಾದೀತು.
ನಾಟಿ ಕಬ್ಬು, ಆಲೇಮನೆ, ಜೋನಿ ಬೆಲ್ಲ ಎಲ್ಲಾ ಪರಿವರ್ತನಾ ಕಾಲದಲ್ಲಿ ಕ್ರಮೇಣ ಇಲ್ಲವಾಗುತ್ತಿದ್ದರೂ ಪುನಃ ಸಾವಯವ ಬೆಲ್ಲ ಅದರ ರುಚಿ ಮತ್ತು ಆರೋಗ್ಯದಿಂದ ಬೆಲೆ ಹೆಚ್ಚಾದರೂ ಖರೀದಿಸುವ - ಬಳಸುವ ಹೊಸ ವರ್ಗದ ಬೇಡಿಕೆಯಿಂದ ಪುನಃ ಪ್ರಾರಂಭ ಆಗುವ ಲಕ್ಷಣಗಳು ಕಂಡು ಬರುತ್ತಿದೆ.
Comments
Post a Comment